ಮುಂಬೈ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ 35 ವರ್ಷದ ಪತ್ರಕರ್ತ ಆಕೆಯ ಕತ್ತು ಹಿಸುಕಿ ಹತ್ಯೆಗೈದು, ಸಾಕ್ಷ್ಯ ನಾಶಪಡಿಸಲು ಆಕೆಯ ದೇಹವನ್ನು ತುಂಡು, ತುಂಡುಗಳಾಗಿ ಕತ್ತರಿಸಿಹಾಕಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.
Advertisement
ಮೃತ 24 ವರ್ಷದ ಮಹಿಳೆ ಜಿಲ್ಲೆಯ ಶಿಯುರ್ ನಿವಾಸಿಯಾಗಿದ್ದು ಮೂರು ವರ್ಷದ ಮಗುವನ್ನು ಹೊಂದಿದ್ದಳು. ಆರೋಪಿ ಫ್ರೀಲಾನ್ಸ್ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದ ಸೌರಭ್ ಲಾಖೆ (35) ಎಂದು ಗುರುತಿಸಲಾಗಿದ್ದು, ಮಹಿಳೆಯೊಂದಿಗೆ ಈತ ಅನೈತಿಕ ಸಂಬಂಧ ಹೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಿ.ಎಸ್. ಯಡಿಯೂರಪ್ಪ ಬೆಂಗಾವಲು ವಾಹನ ಚಾಲಕ ತಿರುಮಲೇಶ್ ನಿಧನ
Advertisement
Advertisement
ಇತ್ತೀಚೆಗಷ್ಟೇ ಕುಟುಂಬ ತೊರೆದು ಹುಡ್ಕೋ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಮಹಿಳೆ ವಾಸಿಸುತ್ತಿದ್ದಳು. ಇಲ್ಲಿಗೆ ಸೌರಭ್ ಲಾಖೆ ಆಕೆಯನ್ನು ಭೇಟಿಯಾಗಲು ಬರುತ್ತಿದ್ದನು. ಮದುವೆಯಾಗುವಂತೆ ಮಹಿಳೆ ಒತ್ತಾಯಿಸುತ್ತಿದ್ದರಿಂದ ಬೇಸತ್ತ ಆರೋಪಿ ಆಗಸ್ಟ್ 15 ರಂದು ಆಕೆಯ ಕತ್ತು ಹಿಸುಕಿ ಕೊಂದು ನಂತರ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾನೆ. ಇದನ್ನೂ ಓದಿ: ಮಹಿಳೆಯರು ಬಾಯ್‍ಫ್ರೆಂಡ್‍ನ ಯಾವಾಗ ಬೇಕಾದ್ರೂ ಚೇಂಜ್ ಮಾಡ್ತಾರೆ – ನಿತೀಶ್ ಕುಮಾರ್‌ಗೆ ಬಿಜೆಪಿ ನಾಯಕನ ಟಾಂಗ್
Advertisement
ಮರುದಿನ ಅವನು ಅವಳ ತಲೆ ಮತ್ತು ಕೈಗಳನ್ನು ತೆಗೆದುಕೊಂಡು ಶಿಯುರ್‍ನಲ್ಲಿರುವ ಗೋಡೌನ್‍ನಲ್ಲಿ ಇಟ್ಟಿದ್ದನು. ಬುಧವಾರ, ಉಳಿದ ಆಕೆಯ ದೇಹದ ಭಾಗಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ, ಮನೆಯ ಮಾಲೀಕರು ಆತನನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಿಯೂರ್‌ಗೆ ಹೋಗುವ ದಾರಿಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.