ರಿಯಾದ್: ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದ ಪ್ರಾಬಲ್ಯ ತಗ್ಗಿಸಲು ಅಮೆರಿಕ ವಿಧಿಸಿ ಅನೇಕ ನಿರ್ಬಂಧಗಳು ಈಗ ತನಗೇ ತಿರುಗು ಬಾಣವಾಗಿ ಪರಿಣಮಿಸಿದೆ. ಸೌದಿ ಅರೇಬಿಯಾ, ಭಾರತ, ಚೀನಾ, ರಷ್ಯಾದಂತಹ ರಾಷ್ಟ್ರಗಳು ತಮ್ಮದೇ ಕರೆನ್ಸಿಗಳಲ್ಲಿ ವ್ಯವಹಾರಕ್ಕೆ ಮುಂದಾಗಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಡಾಲರ್ ಪ್ರಾಬಲ್ಯ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ.
ಚೀನಾಗೆ ತೈಲ ಮಾರಾಟ ಮಾಡಲು ಮುಂದಾಗಿರುವ ಸೌದಿ ಅರೇಬಿಯಾ, ಚೀನಾ ಕರೆನ್ಸಿ ಯುವಾನ್ ಮೂಲಕವೇ ವ್ಯವಹಾರ ಮಾಡುವ ಸಂಬಂಧ ಮಾತುಕತೆ ನಡೆಸುತ್ತಿದೆ. ಈ ಕ್ರಮವು ಜಾಗತಿಕ ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್‌ನ ಪ್ರಾಬಲ್ಯವನ್ನು ತಗ್ಗಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಇದನ್ನೂ ಓದಿ: ರಷ್ಯಾ ತೈಲ ನಿಷೇಧ- ಅಮೆರಿಕ ಅಧ್ಯಕ್ಷರ ಫೋನ್ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ
Advertisement
Advertisement
ಯುವಾನ್ ಬೆಲೆಯಲ್ಲೇ ತೈಲ ಒಪ್ಪಂದಗಳ ಕುರಿತು ಚೀನಾದೊಂದಿಗಿನ ಸೌದಿ ಮಾತುಕತೆ ಆರು ವರ್ಷಗಳಿಂದ ಸ್ಥಗಿತಗೊಂಡಿತ್ತು. ಆದರೆ ಈ ವರ್ಷ ಮಾತುಕತೆ ವೇಗ ಪಡೆದುಕೊಂಡಿದೆ. ಸೌದಿಗಳು ತಮ್ಮ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳಲು ಯುಎಸ್ ಭದ್ರತಾ ಬದ್ಧತೆಗಳ ಬಗ್ಗೆ ಅತೃಪ್ತಿ ಹೊಂದಿದ್ದಾರೆ.
Advertisement
ಯೆಮನ್ ಅಂತರ್ಯುದ್ಧದಲ್ಲಿ ತನ್ನ ಮಧ್ಯಪ್ರವೇಶಕ್ಕೆ ಅಮೆರಿಕ ಬೆಂಬಲ ನೀಡದಿದ್ದಕ್ಕೆ ಸೌದಿಗಳು ಕೋಪಗೊಂಡಿದ್ದಾರೆ. ಕಳೆದ ವರ್ಷ ಅಫ್ಘಾನಿಸ್ತಾನದಿಂದ ಯುಎಸ್ ಹಿಂಪಡೆಯುವಿಕೆಯಿಂದ ಆಘಾತಕ್ಕೊಳಗಾಗಿದ್ದೇವೆ ಎಂದು ಸೌದಿ ಅಧಿಕಾರಿಗಳು ಹೇಳಿದ್ದರು. ಈ ಎಲ್ಲಾ ಕಾರಣಗಳಿಗಾಗಿ ಅಮೆರಿಕಗೆ ಟಕ್ಕರ್ ಕೊಡಲು ಸೌದಿ ಅರೇಬಿಯಾ ಮುಂದಾಗಿದೆ. ಇದನ್ನೂ ಓದಿ: ಭಾರತಕ್ಕೆ ಬರಲಿದೆ ರಷ್ಯಾ ತೈಲ – ಅಂತಿಮ ಹಂತದಲ್ಲಿ ಮಾತುಕತೆ
Advertisement
ರಷ್ಯಾದೊಂದಿಗೆ ಶಸ್ತ್ರಾಸ್ತ್ರ ಹಾಗೂ ಕಚ್ಚಾ ತೈಲ ಸೇರಿದಂತೆ ಅನೇಕ ವಿಚಾರಗಳಿಗಾಗಿ ಭಾರತ ವ್ಯವಹಾರ ನಡೆಸುತ್ತಿದೆ. ರುಪಿ ಮೂಲಕವೇ ವ್ಯವಹಾರ ನಡೆಸಬಹುದು ಎಂದು ರಷ್ಯಾ, ಭಾರತಕ್ಕೆ ತಿಳಿಸಿದೆ.