ಹೈದರಾಬಾದ್: ವಾಟ್ಸಪ್‍ನಲ್ಲಿ, ಪೋಸ್ಟ್ ಮೂಲಕ ವಿಚ್ಚೇದನ ನೀಡಿದ ಪ್ರಕರಣಗಳನ್ನ ಈಗಾಗಲೇ ಕೇಳಿದ್ದೀವಿ. ಈಗ ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿಯೊಬ್ಬ ಹೈದರಾಬಾದ್‍ನಲ್ಲಿರುವ ತನ್ನ 25 ವರ್ಷದ ಹೆಂಡತಿಗೆ ನ್ಯೂಸ್‍ಪೇಪರ್ ಜಾಹಿರಾತಿನ ಮೂಲಕ ತಲಾಖ್ ನೀಡಿರೋದು ಸುದ್ದಿಯಾಗಿದೆ.
ಜಾಹಿರಾತಿನ ಮೂಲಕ ವಿಚ್ಚೇದನ ನೀಡಿದ ಮೊಹಮ್ಮದ್ ಮುಶ್ತಾಕುದ್ದೀನ್‍ನನ್ನು ವಂಚನೆ ಅರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
Advertisement
ಮಾರ್ಚ್ 4ರಂದು ಸ್ಥಳೀಯ ಉರ್ದು ಪತ್ರಿಕೆಯೊಂದರಲ್ಲಿ ತನ್ನ ಪತಿ ವಿಚ್ಚೇದನ ನೀಡಿರುವ ಜಾಹಿರಾತನ್ನು ನೋಡಿ ಮಹಿಳೆ ಶಾಕ್ ಆಗಿದ್ರು. ನಂತರ ಆಕೆಗೆ ಗಂಡನ ಪರ ವಕೀಲರಿಂದ ಕರೆ ಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.
Advertisement
ಇದನ್ನೂ ಓದಿ: ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ
Advertisement
ಮೊಹಮ್ಮದ್ ಮುಶ್ತಾಕುದ್ದೀನ್ ಮಹಿಳೆಯನ್ನ 2015ರಲ್ಲಿ ಮದುವೆಯಗಿ, 5 ತಿಂಗಳ ಬಳಿಕ ಸೌದಿ ಅರೇಬಿಯಾಗೆ ಕರೆದುಕೊಂಡು ಹೋಗಿದ್ದ. ಕಳೆದ ವರ್ಷ ಈ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಎರಡು ತಿಂಗಳ ಹಿಂದೆ ಇಬ್ಬರೂ ಭಾರತಕ್ಕೆ ಬಂದಿದ್ದು, ಗಂಡನೊಂದಿಗೆ ಜಗಳವಾಡಿಕೊಂಡು ಮಹಿಳೆ ತವರು ಮನೆಗೆ ಹೋಗಿದ್ದರು. ಇದಾದ 3 ವಾರಗಳ ಬಳಿಕ ಮುಶ್ತಾಕುದ್ದೀನ್ ಹೆಂಡತಿಗೆ ಒಂದು ಮತನ್ನೂ ತಿಳಿಸದೆ ಸೌದಿ ಅರೇಬಿಯಾಗೆ ಹಿಂದಿರುಗಿದ್ದ. ಎಷ್ಟು ಬಾರಿ ಫೋನ್ ಮಾಡಿದ್ರೂ ಮುಶ್ತಾಕುದ್ದೀನ್ ಪ್ರತಿಕ್ರಿಯಿಸಿರಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ನಂತರ ಆಕೆಯ ಮಾವ ಕೂಡ ಮುಶ್ತಾಕುದ್ದೀನ್ ಸೌದಿ ಅರೇಬಿಯಾಗೆ ಹೋಗಿರೋದಾಗಿ ಹೇಳಿ ಆಕೆಯನ್ನ ಮನೆಗೆ ಸೇರಿಸಿರಲಿಲ್ಲ.
Advertisement
ನಾನು ಏನಾದ್ರೂ ತಪ್ಪು ಮಾಡಿದ್ದರೆ ನನ್ನೊಂದಿಗೆ ಹಾಗೂ ನನ್ನ ಪೋಷಕರೊಂದಿಗೆ ಮಾತನಾಡಬೇಕಿತ್ತು. ಒಂದು ವೇಳೆ ನನ್ನ ತಪ್ಪಿದ್ದಿದ್ದರೆ ಹೇಗೆ ಎಲ್ಲಾ ಸಂಬಂಧಿಕರ ಮುಂದೆ ನನ್ನನ್ನು ಮದುವೆಯದ್ರೋ ಅದೇ ರೀತಿ ಎಲ್ಲರ ಮುಂದೆಯೇ ತಲಾಖ್ ನೀಡಬೇಕಿತ್ತು. ನನ್ನನ್ನು ಭೇಟಿಯಾಗದೆ ಸೌದಿ ಅರೇಬಿಯಾಗೆ ಯಾಕೆ ಓಡಿಹೋದ್ರು? 10 ತಿಂಗಳ ಮಗು ಇದ್ದರೂ ಜಾಹಿರಾತಿನ ಮೂಲಕ ವಿಚ್ಚೇದನ ನೀಡಿದ್ದಾರಲ್ಲಾ ಎಂದು ಮಹಿಳೆ ಅಲವತ್ತುಕೊಂಡಿದ್ದಾರೆ. ಪೊಲೀಸರು ಹೇಳೋ ಪ್ರಕಾರ ಮುಶ್ತಾಕುದ್ದೀನ್ 20 ಲಕ್ಷ ರೂ. ವರದಕ್ಷಿಣೆಗಾಗಿ ಹೆಂತಿಯನ್ನ ಪೀಡಿಸಿದ್ದ ಎನ್ನಲಾಗಿದೆ.
ಈ ಬಗ್ಗೆ ತನಿಖೆ ಮಾಡಲಾಗುತ್ತಿದ್ದು, ಷರಿಯಾ(ಇಸ್ಲಾಂ ಕಾನೂನು) ಅಡಿ ನ್ಯೂಸ್‍ಪೇಪರ್ ಜಾಹಿರಾತಿನ ಮೂಲಕ ನೀಡಲಾದ ವಿಚ್ಚೇದನ ಮಾನ್ಯವಾಗುತ್ತಾ ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಮದ್ವೆಯಾದ 10 ದಿನದಲ್ಲಿ ತಲಾಖ್ ಕೊಟ್ಟ ಪತಿ ಅರೆಸ್ಟ್