ಕನ್ನಡದ ‘ಸತ್ಯ ಇನ್ ಲವ್’ (Satya In Love) ಸಿನಿಮಾದಲ್ಲಿ ಶಿವಣ್ಣಗೆ ನಾಯಕಿಯಾಗಿ ನಟಿಸಿದ್ದ ಜೆನಿಲಿಯಾ ಡಿಸೋಜಾ (Genelia D’souza) ಇದೀಗ 13 ವರ್ಷಗಳ ಬಳಿಕ ತೆಲುಗಿನತ್ತ ಮುಖ ಮಾಡಿದ್ದಾರೆ. ಈ ಮೂಲಕ ತೆಲುಗು ಸಿನಿಪ್ರೇಕ್ಷಕರಿಗೆ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಮತ್ತೆ ಪ್ರೀತಿಯಲ್ಲಿ ಬಿದ್ರಾ ನಟಿ?- ನಿರ್ಮಾಪಕನ ತೋಳಲ್ಲಿ ತಲೆಯಿಟ್ಟು ಮಲಗಿದ ಸಮಂತಾ
ತೆಲುಗಿನ ಸ್ಟಾರ್ ನಟನೊಬ್ಬನ ಸಿನಿಮಾದಲ್ಲಿ ಬಾಲಿವುಡ್ ನಟಿ ಜೆನಿಲಿಯಾ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಈ ಚಿತ್ರದಲ್ಲಿ ಅವರಿಗೆ ಪವರ್‌ಫುಲ್ ಪಾತ್ರವೇ ಸಿಕ್ಕಿದೆಯಂತೆ. ಯಾವ ಸ್ಟಾರ್ ನಟನ ಜೊತೆ ಜೆನಿಲಿಯಾ ನಟಿಸಲಿದ್ದಾರೆ ಎಂಬುದನ್ನು ಚಿತ್ರತಂಡ ರಿವೀಲ್ ಮಾಡುವವರೆಗೂ ಕಾಯಬೇಕಿದೆ. ಇದನ್ನೂ ಓದಿ: ರಣವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾ ಶುರುವಾಗೋದು ಯಾವಾಗ?- ಸಿಕ್ತು ಅಪ್‌ಡೇಟ್
ಜೆನಿಲಿಯಾಗೆ ತೆಲುಗು ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಸಿದ್ಧಾರ್ಥ್ ಜೊತೆ ‘ಬೊಮ್ಮರಿಲ್ಲು’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ತೆಲುಗಿನ ನಾ ಇಷ್ಟಂ, ಹ್ಯಾಪಿ, ಸೈ, ಕಿಂಗ್, ರೆಡಿ, ರಾಮ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಜೆನಿಲಿಯಾ ನಟಿಸಿದ್ದರು.
2012ರಲ್ಲಿ ‘ನಾ ಇಷ್ಟಂ’ ಸಿನಿಮಾದಲ್ಲಿ ಜೆನಿಲಿಯಾ ಕಡೆಯದಾಗಿ ನಟಿಸಿದ್ದರು. ಈಗ ಬರೋಬ್ಬರಿ 13 ವರ್ಷಗಳ ಬಳಿಕ ಅವರು ಟಾಲಿವುಡ್‌ಗೆ ಬರುತ್ತಿದ್ದಾರೆ.