ಬೆಂಗಳೂರು: ಶಾಲಾ ಮಕ್ಕಳಿಗೆ (School Students) ಶಿಕ್ಷಣ ಇಲಾಖೆ(Education Department) ಸಿಹಿಸುದ್ದಿ ನೀಡಿದೆ. ಇನ್ನು ಮುಂದೆ ಶನಿವಾರ ಶಾಲೆಗಳು ಹೊಸ ಸಮಯದಂತೆ (New Timing) ನಡೆಯಲಿದ್ದು, ರಾಜ್ಯದ ಎಲ್ಲಾ ಶಾಲೆಗಳಿಗೆ ಒಂದೇ ಸಮಯ ಜಾರಿಯಾಗಿದೆ.
ಶಾಲಾ ಶಿಕ್ಷಣ ಇಲಾಖೆ ಶನಿವಾರದ ಶಾಲಾ ಅವಧಿಯಲ್ಲಿ ಬದಲಾವಣೆ ಮಾಡಿದೆ. ಇನ್ನು ಮುಂದೆ ಶನಿವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ತರಗತಿಗಳು ನಡೆಯಲಿವೆ. ಇಲ್ಲಿಯವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ಸಮಯ ಇತ್ತು. ಕೆಲವು ಶಾಲೆಗಳಲ್ಲಿ ಬೆಳಗ್ಗೆ 8ರಿಂದ 12 ಗಂಟೆಯವರೆಗೆ ತರಗತಿಗಳಿದ್ದರೆ, ಇನ್ನೂ ಕೆಲವು ಕಡೆ 7.30ರಿಂದ 11.30ರವರೆಗೆ ಶಾಲೆ ನಡೆಯುತ್ತಿತ್ತು.
ಈ ಗೊಂದಲಕ್ಕೆ ತೆರೆ ಎಳೆದಿರುವ ಶಿಕ್ಷಣ ಇಲಾಖೆ, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಒಂದೇ ಸಮಯವನ್ನು ಪಾಲಿಸಬೇಕು ಎಂದು ಸೂಚನೆ ನೀಡಿದೆ. ಈ ಹೊಸ ವೇಳೆಯಿಂದ ವಿದ್ಯಾರ್ಥಿಗಳು ಶನಿವಾರ ಬೆಳಗ್ಗೆ ತುಂಬಾ ಬೇಗ ಎದ್ದು ಶಾಲೆಗೆ ಹೋಗುವ ಅಗತ್ಯ ಇರುವುದಿಲ್ಲ. ಇದರಿಂದ ಮಕ್ಕಳಿಗೂ ಸ್ವಲ್ಪ ನೆಮ್ಮದಿ ಸಿಗಲಿದೆ.ಇದನ್ನೂ ಓದಿ: ಪ್ರಯಾಣಿಕರ ಮೆಟಲ್ ಚೈನ್ ಮೆಟ್ರೋ ಡೋರ್ ಗೈಡ್‌ವೇಯಲ್ಲಿ ಸಿಲುಕಿದ್ದರಿಂದ ಬಾಗಿಲು ಮುಚ್ಚಲಿಲ್ಲ: ಮೆಟ್ರೋ ಸ್ಪಷ್ಟನೆ
ಶಿಕ್ಷಕರಿಗೂ ಈ ಬದಲಾವಣೆ ಅನುಕೂಲವಾಗಲಿದೆ. ಸರ್ಕಾರ ಈಗಾಗಲೇ ಆನ್‌ಲೈನ್ ಹಾಜರಾತಿಯನ್ನು ಕಡ್ಡಾಯಗೊಳಿಸಿದೆ. ಸಮಯಕ್ಕೆ ಸರಿಯಾಗಿ ಹಾಜರಾತಿ ದಾಖಲಿಸಲು ಹೊಸ ವೇಳೆ ಸಹಾಯವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.ಇದನ್ನೂ ಓದಿ: NCERT ಹೊಸ ಪಠ್ಯದಲ್ಲಿ ಮೊದಲ ಬಾರಿಗೆ SIR ಸೇರ್ಪಡೆ

