ಬೆಂಗಳೂರು: ಬೇಲೆಕೇರಿ (Belekere) ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್‌ಗೆ (Satish Sail) ಪ್ರಕರಣಗಳಲ್ಲಿ ತಲಾ 7 ವರ್ಷ ಜೈಲು ಶಿಕ್ಷೆ ಎಂದು ಕೋರ್ಟ್ ತೀರ್ಪು ನೀಡಿದ್ದು, ಕೋರ್ಟ್ ಆದೇಶ ಕೇಳಿ ನನಗೆ ಶಾಕ್ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇಲೆಕೇರಿ ಅದಿರು ನಾಪತ್ತೆ ಕೇಸ್‌ನ 6 ಪ್ರಕರಣಗಳಲ್ಲೂ ಕಾಂಗ್ರೆಸ್ ಶಾಸಕ ಸತೀಶ್‌ಗೆ 7 ವರ್ಷ ಜೈಲು ಎಂದು ಕೋರ್ಟ್ ಆದೇಶ ಹೊರಡಿಸಿದೆ. ಕೋರ್ಟ್ ಆದೇಶ ಕೇಳಿ ನನಗೆ ಶಾಕ್ ಆಗಿದೆ. ಅಫೀಲು ಮಾಡಲು ಶಾಸಕರಿಗೆ ಅವಕಾಶವಿದೆ. ಅವರು ಲೀಗಲ್ ಟೀಂ ಜೊತೆ ಮಾತನಾಡುತ್ತಾರೆ. ಶಾಸಕ ಸ್ಥಾನದಿಂದ ಅನರ್ಹ ಆಗುವ ಕುರಿತು ನನಗೆ ತಿಳಿದಿಲ್ಲ. ಮುಂದೆ ಏನು ಆಗುತ್ತದೆ ನೋಡೋಣ ಎಂದರು.ಇದನ್ನೂ ಓದಿ: ಕಾರವಾರ| ಗಾಂಜಾ ಜೊತೆ ನಿಷೇಧಿತ ಮಾದಕ ವಸ್ತು ವಶ; ನಾಲ್ವರ ಬಂಧನ
Advertisement
Advertisement
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ದೋಷಿಯಾಗಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಆರು ಪ್ರಕರಣಗಳಲ್ಲೂ 7 ವರ್ಷ ಜೈಲು ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
Advertisement
ಒಟ್ಟು ಆರು ಪ್ರಕರಣಗಳಲ್ಲಿ ಕಾಂಗ್ರೆಸ್ ಶಾಸಕ ದೋಷಿ ಎಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಶನಿವಾರಕ್ಕೆ ಕಾಯ್ದಿರಿಸಿತ್ತು. ಈಗ ಎಲ್ಲಾ ಪ್ರಕರಣಗಳಲ್ಲೂ ದೋಷಿ ಸತೀಶ್ ಸೈಲ್ ಇತರೆ ಅಪರಾಧಿಗಳಿಗೆ ಶಿಕ್ಷೆಯನ್ನು ಕೋರ್ಟ್ ಪ್ರಕಟಿಸಿದೆ.
Advertisement
ಎಲ್ಲಾ ಪ್ರಕರಣಗಳಲ್ಲೂ ಸತೀಶ್ ಸೈಲ್‌ಗೆ 7 ವರ್ಷ ಶಿಕ್ಷೆ ಪ್ರಕಟಿಸಲಾಗಿದ್ದು, ದಂಡವನ್ನೂ ವಿಧಿಸಲಾಗಿದೆ.ಇದನ್ನೂ ಓದಿ: ರೈತರ ಆಸ್ತಿ ಒಂದಿಂಚೂ ಪಡೆದಿಲ್ಲ – ವಕ್ಫ್ ಆಸ್ತಿ ನಾವು ದಾಖಲಾತಿ ಮಾಡಿಕೊಂಡ್ರೆ ಏನು ತಪ್ಪು? – ಜಮೀರ್ ಪ್ರಶ್ನೆ