– ಬೆಳಗಾವಿ ಮತದಾರರನ್ನ ಸೆಳೆಯುವಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿಫಲ
– ಕೈ ಅಭ್ಯರ್ಥಿ ಸೋಲಿಗೆ ನಾನು ಕಾರಣವಲ್ಲ ಎಂದ ಸಚಿವ
ಬೆಳಗಾವಿ: ಕರ್ನಾಟಕದಲ್ಲಿ ಎರಡಂಕಿಯ ಫಲಿತಾಂಶ ರೀಚ್ ಆಗದೇ ಇರೋದಕ್ಕೆ ನಮ್ಮ ನಾಯಕರ ಓವರ್ ಕಾನ್ಫಿಡೆನ್ಸ್ ಕಾರಣ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅಸಮಾಧಾನ ಹೊರಹಾಕಿದ್ದಾರೆ.
Advertisement
ಇಲ್ಲಿನ ಗೋಕಾಕ್ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡೈರೆಕ್ಟರ್, ಪ್ರೊಡ್ಯೂಸರ್ ಫೇಲ್ ಆದರೆ ಈ ರೀತಿಯ ಫಲಿತಾಂಶ ನಿರೀಕ್ಷಿತವಾಗಿದೆ. ಚುನಾವಣೆಗೆ (Elections) ಸಮಯ ಕಡಿಮೆ ಇರುತ್ತದೆ, ಆ ಸಮಯದಲ್ಲಿ, ನಿಗಾ ವಹಿಸಿರಬೇಕು. ಇಲ್ಲವಾದರೆ ಚುನಾವಣೆ ಬಂದು ಹೋಗುತ್ತದೆ. ನಮ್ಮ ನಾಯಕರು ಹಲವು ಕ್ಷೇತ್ರಗಳನ್ನು ನಿರ್ಲಕ್ಷಿಸಿದ್ದೂ ನಮ್ಮ ಹಿನ್ನೆಡೆಗೆ ಕಾರಣವಾಗಿದೆ. ಗೆಲ್ಲುವ ವಿಶ್ವಾಸದಿಂದ ಹಲವು ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಚಾರ ಆಗಲಿಲ್ಲ. ಕೆಲವೆಡೆ ಕಡಿಮೆ ಮತಗಳ ಅಂತರದಿಂದ ಸೋಲಲು ನಮ್ಮ ನಿರ್ಲಕ್ಷ್ಯವೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ನಟಿ ಹೇಮಾರನ್ನು ಸಿಸಿಬಿ ವಶಕ್ಕೆ ನೀಡಿದ ಕೋರ್ಟ್
Advertisement
Advertisement
ಬೆಳಗಾವಿ ಅಭ್ಯರ್ಥಿ ಸೋಲಿಗೆ ನಾನು ಕಾರಣವಲ್ಲ:
ಮುಂದುವರಿದು ಮಾತನಾಡಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ನಾನು ಕಾರಣವಲ್ಲ. 5 ಲಕ್ಷ ಲಿಂಗಾಯತ ಮತದಾರರು ಬೆಳಗಾವಿಯಲ್ಲಿದ್ದಾರೆ. ಅವರೇನು ನನ್ನ ಮಾತು ಕೇಳ್ತಾರಾ? ಬೆಳಗಾವಿ ಕ್ಷೇತ್ರದ ಮತದಾರರನ್ನು ಸೆಳೆಯುವಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿಫಲರಾದರು. ಇದೇ ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣವಾಯಿತು ಎಂದಿದ್ದಾರೆ. ಇದನ್ನೂ ಓದಿ: ಕುಚಿಕು ಗೆಳೆಯರ ಬಾಕ್ಸಾಫೀಸ್ ವಾರ್- ಡಾಲಿ ‘ಕೋಟಿ’ ಎದುರು ‘ಲವ್ ಲಿ’ ಸಿನಿಮಾ ರಿಲೀಸ್‌ಗೆ ರೆಡಿ
Advertisement
ಈ ಸಲ ನಾವು ಗೆಲ್ಲುವ ನಿಟ್ಟಿನಲ್ಲಿ ಮಾತ್ರ ಕೆಲಸ ಮಾಡಿದ್ದೇವೆಯೇ ಹೊರತು ಸೋಲಿಸಲು ಅಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೇ ಮೃಣಾಲ್‌ಗೆ ತೀವ್ರ ಹಿನ್ನಡೆ ಆಗಿದೆ. ಲಿಂಗಾಯತ ಹಾಗೂ ಮರಾಠ ಮತಗಳನ್ನು ಸೆಳೆಯಲು ವಿಫಲವಾಗಿದ್ದೇ ಸೋಲಿಗೆ ಕಾರಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಹಣಕ್ಕಾಗಿ ಲಕ್ನೋ ಕಾಂಗ್ರೆಸ್ ಕಚೇರಿ ಮುಂದೆ ಸಾಲುಗಟ್ಟಿ ನಿಂತ ಮುಸ್ಲಿಂ ಮಹಿಳೆಯರು!