ಬೆಳಗಾವಿ: ಡಿಕೆಶಿ ಆ್ಯಕ್ಟಿವ್ ಇದ್ದಾರೆ, ಸಾಕಷ್ಟು ಕೆಲಸ ಮಾಡಿದ್ದಾರೆ. ರಾತ್ರಿ ಹಗಲು ಪಕ್ಷಕ್ಕಾಗಿ ಡಿಕೆಶಿ ಕೆಲಸವನ್ನು ಮಾಡುತ್ತಿದ್ದು, ಕೆಲವೊಂದು ಸಾರಿ ಲೆಕ್ಕಾಚಾರಗಳು ತಪ್ಪಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆಶಿ (DK Shivakumar) ಒದ್ದಾಡುತ್ತಿದ್ದಾರೆ ಎಂಬ ಡಾ.ಜಿ.ಪರಮೇಶ್ವರ್ (G Parameshwara) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹುದ್ದೆ ದೊಡ್ಡದಲ್ಲ. ಹೀಗಾಗಿ ಸಪೋರ್ಟ್ ಮಾಡಬೇಕಾಗುತ್ತದೆ. ಒಂದೊಂದು ಸಾರಿ ಏನೋ ತಪ್ಪಿರಬಹುದು. ನಾವೆಲ್ಲರೂ ನಿಮ್ಮ ಜೊತೆಗೆ ಇರುತ್ತೇವೆ ಕೆಲಸ ಮಾಡಿ ಅಂತಾ ಹೇಳಬೇಕಾಗುತ್ತದೆ. ಆ ಸಂದರ್ಭದಲ್ಲಿ ಆ ರೀತಿ ಡಾ.ಜಿ.ಪರಮೇಶ್ವರ ಹೇಳಿರಬಹುದು ಎಂದು ತಿಳಿಸಿದರು.
Advertisement
Advertisement
ಕೆಲವು ಸಂದರ್ಭದಲ್ಲಿ ಎಲ್ಲವೂ ನನಗೆ ಅನುಭವ ಇರಲ್ಲ. ಕೆಲವು ಕೇಳಬೇಕಾಗುತ್ತೆ ಅದು ಅನಿವಾರ್ಯ ಇರುತ್ತದೆ. ಡಿಕೆಶಿ ಆ್ಯಕ್ಟೀವ್ ಇದ್ದಾರೆ. ಸಾಕಷ್ಟು ಕೆಲಸ ಮಾಡಿದ್ದಾರೆ. ರಾತ್ರಿ ಹಗಲು ಪಕ್ಷಕ್ಕಾಗಿ ಡಿಕೆಶಿ ಕೆಲಸ ಮಾಡ್ತಿದ್ದಾರೆ. ಸುಮಾರು ಕಾರ್ಯಕ್ರಮ ಮಾಡಿದ್ದಾರೆ. ಕೆಲವೊಮ್ಮೆ ಲೆಕ್ಕಾಚಾರ ತಪ್ಪಿರುತ್ತದೆ. ಅದೇ ಎಲ್ಲದಕ್ಕೂ ಹಿನ್ನಡೆ ಅಂತಾ ಹೇಳಕ್ಕಾಗಲ್ಲ ಎಂದು ಹೇಳಿದರು.
Advertisement
ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶವು ಕನ್ನಡಿ ಥರ ಸ್ಪಷ್ಟವಾಗಿದೆ. ಆಮ್ ಆದ್ಮಿ ಪಕ್ಷ ಸೆಕ್ಯೂಲರ್ ವೋಟ್ ಪಡೆದಿದೆ. ಗುಜರಾತ್‍ನಲ್ಲಿ ಆಮ್ ಆದ್ಮಿ ಪಕ್ಷ ಶೇ. 13ರಷ್ಟು ಮತ ಪಡೆದಿದೆ. ಆ 13 ಪರ್ಸೆಂಟ್ ಮತಗಳು ಕಾಂಗ್ರೆಸ್ ಮತಗಳು. ಗುಜರಾತ್‍ನಲ್ಲಿ ಕಾಂಗ್ರೆಸ್ 60 ರಿಂದ 70 ಕ್ಷೇತ್ರ ಪಡೆಯಬೇಕಿತ್ತು. ಆದರೆ, ಆಮ್ ಆದ್ಮಿಯಿಂದ ಬಹಳಷ್ಟು ಸೀಟ್ ನಾವು ಕಳೆದುಕೊಂಡಿದ್ದೇವೆ ಎಂದರು. ಇದನ್ನೂ ಓದಿ: ಹಲ್ಲೆಗೊಳಗಾದ ವಲಸೆ ಕಾರ್ಮಿಕ ಬಾಲಕನನ್ನು ಐಷಾರಾಮಿ ಕಾರಿನಲ್ಲಿ ಜಾಲಿ ರೈಡ್ ಮಾಡಿಸಿದ ಚಿನ್ನದಂಗಡಿ ಮಾಲೀಕ
Advertisement
ಗುಜರಾತ್ ಚುನಾವಣೆಯಲ್ಲಿ ಮೋದಿ ಮ್ಯಾಜಿಕ್ ಅಲ್ಲ, ಅಭಿವೃದ್ಧಿ ಮ್ಯಾಜಿಕ್ ಅಲ್ಲ. ಮತ ವಿಭಜನೆ ಆಗಿರುವುದರಿಂದ ಗುಜರಾತ್‍ನಲ್ಲಿ ಬಿಜೆಪಿಗೆ ಗೆಲುವಾಗಿದೆ. ಹಿಮಾಚಲ ಪ್ರದೇಶದಲ್ಲಿ ನಾವು ಗೆದ್ದಿದ್ದೇವೆ. ಹಿಮಾಚಲ ಪ್ರದೇಶ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ತವರೂರು. ಖರ್ಗೆ, ಪ್ರಿಯಾಂಕಾ ಗಾಂಧಿ ಎಲ್ಲರೂ ಅಲ್ಲಿ ಕೆಲಸ ಮಾಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ತವರು ರಾಜ್ಯದಲ್ಲಿ ಬಿಜೆಪಿ ಸೋತಿದೆ. ಬಿಜೆಪಿಯವರು ಗುಜರಾತ್‍ನಲ್ಲಿ ಬಹಳ ದೊಡ್ಡ ಮ್ಯಾಜಿಕ್ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಭಾರತದ ಪ್ರಥಮ 3ಡಿ ಬಯೋಪ್ರಿಂಟಿಂಗ್ ಉತ್ಕೃಷ್ಟತಾ ಕೇಂದ್ರಕ್ಕೆ ಸಚಿವ ಅಶ್ವಥ್ ನಾರಾಯಣ ಚಾಲನೆ