ಬೆಂಗಳೂರು: ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಇರುತ್ತಾ, ಇಲ್ವಾ ಎಂಬ ಅನುಮಾನ ಮೂಡಿದೆ. ಡಿಸಿಎಂ ಹುದ್ದೆ ಸೃಷ್ಟಿ ಬೇಕಾ, ಬೇಡ್ವಾ ಎಂಬ ತೀರ್ಮಾನ ಸಂಪೂರ್ಣವಾಗಿ ರಾಹುಲ್ ಗಾಂಧಿ ಹೆಗಲಿಗೆ ಹಾಕಲಾಗಿದೆ.
ಡಿಸಿಎಂ ಹುದ್ದೆ ರಾಜ್ಯ ನಾಯಕರ ಬೇಡಿಕೆ ಮೇಲೆ ತೀರ್ಮಾನ ಇಲ್ಲವೆಂದು ಕೆಸಿ ವೇಣುಗೋಪಾಲ್, ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಸ್ಪಷ್ಟಪಡಿಸಿದ್ದಾರಂತೆ. ಡಿಕೆಶಿ ಹಾಗೂ ಸಿದ್ದರಾಮಯ್ಯರಿಂದ ಮಾಹಿತಿ ಪಡೆದ ರಾಹುಲ್ ಗಾಂಧಿ ಅಂತಿಮ ತೀರ್ಮಾನ ಮಾಡಲಿದ್ದಾರೆ. ರಾಹುಲ್ ಬೇಡವೆಂದರೆ ಬೇಡ ಅಂತ ಹೈಕಮಾಂಡ್ ನಾಯಕರು ರಾಜ್ಯ ನಾಯಕರಿಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಪರಮೇಶ್ವರ್ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹವಿರೋ ವ್ಯಕ್ತಿ ಆಗಿದ್ದು, ಅವರಿಗೆ ಸಚಿವ ಸ್ಥಾನ ನೀಡುವಂತೆ ಸಿದ್ದರಾಮಯ್ಯ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಈ ಮಧ್ಯೆ, ಮೊದಲ ಪಟ್ಟಿಯಲ್ಲಿ ಮಿಸ್ ಆಗಿರೋ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳಿವೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ
ಸತೀಶ್ ಜಾರಕಿಹೊಳಿ ಯಮಕನಮರಡಿ (ದಲಿತ)
ಸ್ಪೀಕರ್ ಸ್ಥಾನ
ಹೆಚ್.ಕೆ.ಪಾಟೀಲ್ (ಗದಗ)
ದಿನೇಶ್ ಗುಂಡೂರಾವ್ (ಗಾಂಧಿನಗರ)
