ಬೆಳಗಾವಿ: ಬಿಜೆಪಿ ಇಬ್ಬರು ಶಾಸಕರು ಬುಡಾ ಅಧ್ಯಕ್ಷರಿಗೆ ಸಹಕಾರ ಕೊಡುತ್ತಿಲ್ಲ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಸಭೆ ಮುಂದೂಡಲಾಗುತ್ತಿದೆ. ಈ ಬಗ್ಗೆ ಬಿಜೆಪಿ ಶಾಸಕರು ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಇಂದು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರನ್ನು ಸಭೆ ಹೋಗಲು ಬಿಡುತ್ತಿಲ್ಲ. ನಾವು ಮಂಜೂರು ಮಾಡಿದ ಕೆಲಸಗಳು ಇನ್ನು ಪೆಂಡಿಂಗ್ ಇವೆ. ಬೆಳಗಾವಿ ಅಭಿವೃದ್ಧಿ ಕುಂಠಿತವಾಗಿದೆ. ಬೆಳಗಾವಿ ನಗರದಲ್ಲಿ ಅನುದಾನ, ಸಹಾಯಧನ,ಪ್ರೋತ್ಸಾಹ ಧನ,ಎಲ್ಲವೂ ಕಟ್ ಆಗಿದೆ. ಇದಕ್ಕೆ ಶಾಸಕರೇ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ
Advertisement
Advertisement
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಹಾಗೂ ಉಪ ಮೇಯರ್ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ ಬೆಳಗಾವಿ ಮೇಯರ್ ಆಯ್ಕೆ ಆಗಲು ಒಂದು ವರ್ಷ ಬೇಕು. ವ್ಯವಸ್ಥೆ ಹದಗೆಟ್ಟಿದೆ ಏನು ಮಾಡೋಕೆ ಆಗಲ್ಲ. ಅಧಿಕಾರ ಯಾರು ಮಾಡಬೇಕು ಅವರಿಗೆ ಸಿಗುತ್ತಿಲ್ಲ. ಬುಡಾದಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ಪಾಲಿಕೆ ಸದಸ್ಯರೆಲ್ಲ ಶಾಸಕರ ಸುತ್ತಲು ಸುತ್ತಬೇಕಷ್ಟೆ ಪಾಲಿಕೆಯಲ್ಲಿ ಹಿಂದೆ ಕೆಲವೇ ಜನ ಅಧಿಕಾರ ನಡೆಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ಸಂಭ್ರಮ- ಮಕ್ಕಳ ಜೊತೆ ಪೂಜೆ ಮಾಡಿದ ನಟಿ