ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಅವರು ನಟ ಸತ್ಯರಾಜ್ ನನ್ನ ಲಕ್ಕಿ ಮ್ಯಾಸ್ಕಟ್ ಎಂದು ಹೇಳಿದ್ದಾರೆ.
Advertisement
ನಗರದಲ್ಲಿ ನಡೆದ ರಾಧೆ ಶ್ಯಾಮ್ ಸಿನಿಮಾದ ಪ್ರೀ-ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ಅವರು, ಸತ್ಯರಾಜ್ ಅವರು ನನ್ನ ಅದೃಷ್ಟದ ಮ್ಯಾಸ್ಕಾಟ್. ಅವರೊಂದಿಗೆ ‘ಮಿರ್ಚಿ’ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ನಂತರ ನಟಿಸಿದ ಬಾಹುಬಲಿ ಸಿನಿಮಾ ಕೂಡ ಬ್ಲಾಕ್ ಬಾಸ್ಟರ್ ಹಿಟ್ ಆಗಿತ್ತು. ‘ರಾಧೆ ಶ್ಯಾಮ್’ ನಮ್ಮಿಬ್ಬರ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಆಗಲಿದೆ ಎಂಬ ವಿಶ್ವಾಸ ನನಗಿದೆ. ಈ ಚಿತ್ರದಲ್ಲಿ ಅವರ ಪಾತ್ರವು ಪವರ್ಫುಲ್ ಮತ್ತು ಕುತೂಹಲಕಾರಿಯಾಗಿದೆ ಎಂದರು.
Advertisement
Advertisement
‘ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್ 1970ರ ದಶಕದ ಹಸ್ತಸಾಮುದ್ರಿಕ ತಜ್ಞ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಟಲಿ, ಜಾರ್ಜಿಯಾ ಮತ್ತು ಹೈದರಾಬಾದ್ನ ವಿವಿಧ ಸ್ಥಳಗಳಲ್ಲಿ ಸಿನಿಮಾ ಶೂಟಿಂಗ್ ಮಾಡಲಾಗಿದೆ. ವಿಶೇಷವೆಂದರೆ ಈ ಚಿತ್ರಕ್ಕೆ ಅಮಿತಾಬ್ ಬಚ್ಚನ್ ಧ್ವನಿ ನೀಡಿದ್ದಾರೆ. ಇದನ್ನೂ ಓದಿ: ಕಾರ್ ಅಪಘಾತದ ಬಗ್ಗೆ ಹೊಸ ಹಾಡು ರಚಿಸಿದ ಕಚ್ಚಾ ಬಾದಮ್ ಗಾಯಕ ಭುಬನ್
Advertisement
ಯುವಿ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರವನ್ನು ರೆಡ್ ಜೈಂಟ್ ಮೂವೀಸ್ ಪ್ರಸ್ತುತಪಡಿಸಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಸತ್ಯರಾಜ್ ಮತ್ತು ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.