ಬೆಂಗಳೂರು: ಕೆಲವೇಕೆಲ ನಿರ್ದೇಶಕರಿಗೆ ಮಾತ್ರವೇ ಇಡೀ ಸಿನಿಮಾದ ತುಂಬಾ ಹಾಸ್ಯರಸವನ್ನು ಪರಿಣಾಮಕಾರಿಯಾಗಿ ಜಿನುಗಿಸುವ ಕಲೆ ಸಿದ್ಧಿಸಿರುತ್ತದೆ. ಅಂಥವರ ಸಾಲಿನಲ್ಲಿ ಚಂದ್ರಮೋಹನ್ ಕೂಡಾ ಸೇರಿಕೊಳ್ಳುತ್ತಾರೆ. ಈ ವಿಚಾರವನ್ನು ‘ಬ್ರಹ್ಮಚಾರಿ’ ಚಿತ್ರದ ಅಮೋಘ ಪ್ರದರ್ಶನವೇಸಾಕ್ಷೀಕರಿಸುವಂತಿದೆ. ಇದರೊಂದಿಗೆ ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವಜೋಡಿಯೂ ಮಸ್ತಾಗಿರೋ ಕಥೆಯೊಂದಿಗೆ ಪ್ರೇಕ್ಷಕರ ಮನಗೆದ್ದಿದೆ.
Advertisement
ಆರಂಭದಿಂದಕಡೇಯವರೆಗೂ ಕಚಗುಳಿಯಿಡುತ್ತಾ ಸಾಗುವ ನವಿರು ಹಾಸ್ಯ ಬೆರೆತ ಮನೋರಂಜನಾತ್ಮಕಕಥೆಗೆ ಪ್ರೇಕ್ಷಕರೆಲ್ಲ ಮನ ಸೋತಿದ್ದಾರೆ. ಈ ಬಲದಿಂದಲೇ ಭರ್ಜರಿ ಗೆಲುವುದಕ್ಕಿಸಿಕೊಳ್ಳುವ ಹುಮ್ಮಸ್ಸಿನೊಂದುಗೆ ಬ್ರಹ್ಮಚಾರಿ ಮುಂದುವರೆಯುತ್ತಿದ್ದಾನೆ. ಇದು ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿರುವ ಚಿತ್ರ. ಅವರು ನಿರ್ಮಾಣ ಮಾಡಿದ್ದಾರೆಂದರೆ ಅದ್ದೂರಿಯಾಗಿರುತ್ತದೆ, ಕಥೆಯೂ ಭಿನ್ನವಾಗಿರುತ್ತದೆಂಬ ಪ್ರೇಕ್ಷಕರ ನಂಬಿಕೆ ಬ್ರಹ್ಮಚಾರಿಯ ಮೂಲಕವೂ ಮುಂದುವರೆದಿದೆ.
Advertisement
Advertisement
ಇದರೊಂದಿಗೆ ಅಯೋಗ್ಯ ಚಿತ್ರದಿಂದ ಶುರುವಾದ ನೀನಾಸಂ ಸತೀಶ್ ಅವರ ಮಹಾ ಗೆಲುವಿನ ಪರ್ವವೂ ಅನೂಚಾನವಾಗಿಯೇ ಮುಂದುವರೆಯುತ್ತಿದೆ. ಗಂಡಸರ ಬೆಡ್‍ರೂಂ ಸಮಸ್ಯೆಗಳನ್ನೇ ಕೇಂದ್ರವಾಗಿಟ್ಟುಕೊಂಡ ಚಿತ್ರಗಳು ಕಾಶೀನಾಥ್ ಜಮಾನದಲ್ಲಿಯೇ ಬಂದಿವೆ. ಇದೂ ಕೂಡಾ ಅದೇ ಜಾಡಿನದ್ದಾದರೂ ಬ್ರಹ್ಮಚಾರಿಯನ್ನು ಚಂದ್ರಮೋಹನ್ ಬೇರೆಯದ್ದೇ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆರಂಭಿಕವಾಗಿ ಫಸ್ಟ್ ನೈಟ್ ಟೀಸರ್ ಮುಂತಾದವುಗಳ ಮೂಲಕ ಸದ್ದು ಮಾಡಿದ್ದ ಚಿತ್ರ ಬ್ರಹ್ಮಚಾರಿ. ನಂತರ ಟ್ರೇಲರ್‍ನಲ್ಲಿ ಕಾಣಿಸಿದ್ದ ಸಂಭಾಷಣೆಗಳನ್ನು ಕಂಡು ಫ್ಯಾಮಿಲಿ ಪ್ರೇಕ್ಷಕರು ಕೊಂಚ ಕಸಿವಿಸಿಗೊಂಡಂತಿದ್ದರು. ಆದರೆ ಇಡೀ ಚಿತ್ರದಲ್ಲಿ ಒಂದೇ ಒಂದು ವಲ್ಗರ್ ಅನ್ನಿಸುವಂಥಾದೃಷ್ಯ, ಡೈಲಾಗುಗಳಿಲ್ಲವೆಂದು ಚಿತ್ರತಂಡ ಅಡಿಗಡಿಗೆ ಹೇಳಿಕೊಂಡು ಬಂದಿತ್ತು. ಅದೂಕೂಡಾ ನಿಜವಾಗಿದೆ. ಈ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾಮಿಲಿ ಪ್ರೇಕ್ಷಕರು ಈ ಸಿನಿಮಾನೋಡಿ ಎಂಜಾಯ್ ಮಾಡಲಾರಂಭಿಸಿದ್ದಾರೆ.
Advertisement
ಯಾವುದೇ ಸಿನಿಮಾಗಳಿಗಾದರೂ ಫ್ಯಾಮಿಲಿಪ್ರೇಕ್ಷಕರ ಸಾಥ್ ಸಿಕ್ಕರೆ ಗೆಲುವು ಸಲೀಸಾಗುತ್ತದೆ. ಈ ಪ್ರೀತಿಯಿಂದಲೇ ಬ್ರಹ್ಮಚಾರಿಯಶಸ್ವಿಯಾಗಿ ಎರಡನೇ ವಾರವನ್ನು ಪೂರೈಸಿಕೊಂಡು ಮುಂದುವರೆಯೋತವಕದಲ್ಲಿದ್ದಾನೆ. ರಾಜ್ಯಾದ್ಯಂತ ಈ ಕ್ಷಣಕ್ಕೂ ಸದರಿ ಚಿತ್ರ ಹೌಸ್ ಪುಲ್ ಪ್ರದರ್ಶನವನ್ನೇಕಾಣುತ್ತಿದೆ.