ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ (Karawara) ತಾಲೂಕಿನ ಹಣಕೋಣ ಗ್ರಾಮದಲ್ಲಿರುವ ಸಾತೇರಿ ದೇವಿ (Sateri Devi), ದೇವಸ್ಥಾನದಲ್ಲಿ ವರ್ಷಕ್ಕೆ ಒಂದು ಬಾರಿ ಏಳು ದಿನಗಳ ಕಾಲ ಭಕ್ತರಿಗೆ ದರ್ಶನ ನೀಡುತ್ತಾಳೆ.
ಉಳಿದ ದಿನ ಪ್ರತಿ ಸೋಮವಾರ ದೇವಾಲಯದ ಗರ್ಭಗುಡಿಯ ಎದುರಿನ ಬಾಗಿಲ ಬಳಿ ನಿಂತು ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಗಣೇಶ ಚತುರ್ಥಿ ಮುಗಿದ ಮೂರನೇ ದಿನದ ಮಧ್ಯರಾತ್ರಿ ದೇಗುಲದ ಬಾಗಿಲು ತೆರೆಯಲಾಗಿದ್ದು, ಈ ಬಾರಿ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು. ಇದನ್ನೂ ಓದಿ: ಜ.22 ರಂದು ಅಯೋಧ್ಯೆ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಿರೀಕ್ಷೆ: ನೃಪೇಂದ್ರ ಮಿಶ್ರಾ
Advertisement
Advertisement
ಇಷ್ಟಾರ್ಥ ನೆರವೇರಿಸು ದೇವಿ ಎಂದು ಪ್ರಸಿದ್ಧಿ ಪಡೆದಿರುವ ದೇವಿ ದೇವಸ್ಥಾನಕ್ಕೆ ಪ್ರತಿ ವರ್ಷ ಸಾವಿರಾರು ಭಕ್ತರು ಹರಕೆ ಕಟ್ಟಿಕೊಂಡು ಬರುತ್ತಾರೆ. ಇಷ್ಟಾರ್ಥ ನೆರವೇರಿದ ಬಳಿಕ ಶಕ್ತಿಯಾನುಸಾರ ಕಾಣಿಕೆ, ಆಭರಣ ಅರ್ಪಿಸಿ ಕೃತಾರ್ಥರಾಗುತ್ತಾರೆ.
Advertisement
Advertisement
ಹೀಗೆ ದೇವಿಗೆ ನೀಡಿದ ಹರಕೆ ರೂಪದ ಆಭರಣ, ಸೀರೆಗಳನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ಹರಾಜಿನ ಮೂಲಕ ನೀಡಲಾಗುತ್ತದೆ. ಇಂದು (ಮಂಗಳವಾರ) ಸಾತೇರಿ ದೇವಿ ಮೂರ್ತಿಗೆ ಉಡಿಸಿದ ಸೀರೆ 1.06 ಲಕ್ಷ ರೂ.ಗೆ ಹರಾಜಾಗಿದೆ. ಉದ್ಯಮಿ ಪ್ರದೀಪ ಕದಂ ಎಂಬವರು ಈ ಸೀರೆಯನ್ನು ಆಡಳಿತ ಮಂಡಳಿ ಹಾಕಿದ ಹರಾಜಿನಲ್ಲಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ನಡ್ಡಾ ಪ್ರಾರ್ಥನೆ ವೇಳೆ ಗಣೇಶ ಪೆಂಡಾಲ್‍ನಲ್ಲಿ ಅಗ್ನಿ ದುರಂತ – ಪವಾಡದಂತೆ ಸುರಿದ ಮಳೆಯಿಂದ ತಪ್ಪಿದ ಅನಾಹುತ
Web Stories