ಮುಂಬೈ: ರಿಲಯನ್ಸ್ ಜಿಯೋ ಲಕ್ಸೆಂಬರ್ಗ್ ಮೂಲದ ದೂರಸಂಪರ್ಕ ಕಂಪನಿ ಎಸ್‌ಇಎಸ್ ನೊಂದಿಗೆ ಜಂಟಿಯಾಗಿ ಜಿಯೋ ಸ್ಪೇಸ್ ಟೆಕ್ನಾಲಜಿ ಲಿಮಿಟೆಡ್ ಎಂಬ ಉದ್ಯಮ ಪ್ರಾರಂಭಿಸಲಿದೆ. ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ 100 ಜಿಬಿಪಿಎಸ್(ಗಿಗಾ ಬೈಟ್ ಪರ್ ಸೆಕೆಂಡ್) ವೇಗದಲ್ಲಿ ಇಂಟರ್‌ನೆಟ್ ನೀಡಲಿದೆ ಎಂದು ತಿಳಿಸಿದೆ.
ಜಿಯೋನ ಬ್ರಾಡ್‌ಬ್ಯಾಂಡ್ ಸೇವೆ ಎಂಟರ್‌ಪ್ರೈಸಸ್, ಮೊಬೈಲ್ ಬ್ಯಾಕ್‌ಹಾಲ್, ಹಾಗೂ ಚಿಲ್ಲರೆ ಗ್ರಾಹಕರಿಗೆ 100 ಜಿಬಿಪಿಎಸ್ ವರೆಗಿನ ಗರಿಷ್ಠ ವೇಗದಲ್ಲಿ ಇಂಟರ್‌ನೆಟ್ ಒದಗಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಇಸ್ರೋ ಭೂ ವೀಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ
Advertisement
Advertisement
ಜಿಯೋನ ಈ ಹೊಸ ಯೋಜನೆ ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್‌ಗೆ ಸೆಡ್ಡು ಹೊಡೆಯಲಿದೆ. ಸ್ಟಾರ್ ಲಿಂಕ್ ಕಳೆದ ವರ್ಷ ಅಗ್ಗದ ಇಂಟರ್‌ನೆಟ್ ನೀಡುವ ಯೋಜನೆ ಮಾಡಿತ್ತು. ಆದರೆ ಇದಕ್ಕೆ ಭಾರತ ಸರ್ಕಾರ ಪರವಾನಗಿ ನೀಡಲು ನಿರಾಕರಿಸಿತ್ತು. ಭಾರತ ಸರ್ಕಾರದಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪ್ರಿ ಬುಕ್ಕಿಂಗ್ ರದ್ದಾಗಿತ್ತು. ಇದನ್ನೂ ಓದಿ: ಭೂಕಾಂತೀಯ ಬಿರುಗಾಳಿಗೆ ಸ್ಟಾರ್‌ಲಿಂಕ್ನ 40 ಉಪಗ್ರಹಗಳು ನಾಶ
Advertisement
ಸ್ಟಾರ್‌ಲಿಂಕ್ ಭಾರತದಲ್ಲಿ ತಮ್ಮ ಸೇವೆಯನ್ನು ಅಧಿಕೃತವಾಗಿ ಪ್ರಾರಂಭಿಸಿಲ್ಲದಿದ್ದರೂ ಜಿಯೋ ಈಗಾಗಲೇ ಪೈಪೋಟಿ ನೀಡುವಷ್ಟು ವೇಗದಲ್ಲಿ ಹೊಸ ಯೋಜನೆ ನಿರೂಪಿಸಿದೆ. ಈ ಹಿಂದೆ ಏರ್‌ಟೆಲ್ ಕೂಡಾ ಹ್ಯೂಸ್ ಕಮ್ಯುನಿಕೇಷನ್ಸ್ ಇಂಡಿಯಾದೊಂದಿಗೆ ಜಂಟಿಯಾಗಿ ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆಯನ್ನು ಒದಗಿಸುವುದಾಗಿ ಘೋಷಿಸಿತ್ತು.