ಚೆನ್ನೈ/ ನವದೆಹಲಿ: ಮಂಗಳವಾರದಿಂದ ತಮಿಳುನಾಡಲ್ಲಿ ಹೊಸ ರಾಜಕೀಯ ಪರ್ವ ಶುರುವಾಗಲಿದೆ. ಬೆಳಗ್ಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಶಶಿಕಲಾ ನಟರಾಜನ್ ಅಧಿಕಾರ ಸ್ವೀಕಾರ ಮಾಡ್ತಿದ್ದಾರೆ.
ಜಯಲಲಿತಾ 2 ಬಾರಿ ಅಧಿಕಾರ ಸ್ವೀಕಾರ ಮಾಡಿದ ಮೂಹೂರ್ತದಲ್ಲೇ ಶಶಿಕಲಾ ಕೂಡಾ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಜಯಲಲಿತಾ ಮೃತಪಟ್ಟಾಗ ಆಕೆ ಸಾವಿಗೆ ಆಪ್ತ ಸ್ನೇಹಿತೆ ಶಶಿಕಲಾರೇ ಕಾರಣ ಅಂತಾ ತುಂಬಾ ಗಂಭೀರವಾದ ಆರೋಪುಗಳು ಕೇಳಿ ಬಂದಿತ್ತು. ಆ ಎಲ್ಲಾ ಆರೋಪಗಳನ್ನು ಮೆಟ್ಟಿನಿಂತು ನಾಳೆ ಶಶಿಕಲಾ ತಮಿಳುನಾಡಿನ 3ನೇ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ.
Advertisement
ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ಶಶಿಕಲಾ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಮತ್ತೊಂದು ಸಂಕಷ್ಟ ಎದುರಾಗಿದೆ. ಮಾಜಿ ಸಿಎಂ ಜಯಲಲಿತಾ ಮತ್ತು ಶಶಿಕಲಾ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ತೀರ್ಪು ಪ್ರಕಟಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
Advertisement
ಈ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಶಶಿಕಲಾಗೆ ಟ್ವಿಟ್ಟರ್‍ನಲ್ಲೇ ಗೂಗ್ಲಿ ಎಸೆದಿದ್ದಾರೆ. ತಮಿಳುನಾಡು ವಿಧಾನಸಭೆ ಸ್ಥಾನಗಳಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ಸದ್ಯದಲ್ಲೇ 234 ಯುವಕರಿಗೆ ಕೆಲಸ ಸಿಗಲಿವೆ ಅಂತ ಟ್ವೀಟ್ ಮಾಡಿದ್ದಾರೆ. ಇನ್ನು ಪಕ್ಷದ ಸದಸ್ಯೆ ಕೆ.ಎಸ್.ಗೀತಾ ಶಶಿಕಲಾ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಶಶಿಕಲಾ ಅವರ ನೂರಾರು ಕೋಟಿ ಮೊತ್ತದ ಡೀಲ್‍ಗಳಿಗೆ ಸಿಎಂ ಪನ್ನೀರ್ ಸೆಲ್ವಂ ಸಹಿ ಹಾಕಲು ನಿರಾಕರಿಸಿದ್ರು. ಹೀಗಾಗಿ ಶಶಿಕಲಾ ಅವರು ಸಿಎಂ ಪನ್ನೀರ್ ಸೆಲ್ವಂ ಮತ್ತು ಶೀಲಾ ಬಾಲಕೃಷ್ಣನ್ ರಾಜೀನಾಮೆಗೆ ಒತ್ತಡ ಹೇರಿದ್ರು ಅಂತ ಹೇಳಿದ್ದಾರೆ.
Advertisement
ಶಶಿಕಲಾ ಮೇಲಿರೋ ಕೇಸ್ ಏನು?
1996ರಲ್ಲಿ ಜಯಲಲಿತಾ ದತ್ತು ಪುತ್ರನಿಗೆ ಅದ್ಧೂರಿ ವಿವಾಹ ಮಾಡಿದ್ದರು. ಈ ಸಂಬಂಧ ಜಯಲಲಿತಾ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣ ದಾಖಲಾಗಿತ್ತು. ಜಯಲಲಿತಾ ಜೊತೆಗೆ ಶಶಿಕಲಾ ನಟರಾಜನ್ ವಿರುದ್ಧವೂ ಕೇಸ್ ದಾಖಲಾಗಿತ್ತು. ತಮಿಳುನಾಡಿನಿಂದ ಕೇಸ್ ವಿಚಾರಣೆಯನ್ನು ಬೇರೆ ಕಡೆ ವರ್ಗಾವಣೆ ಮಾಡುವಂತೆ ಡಿಎಂಕೆ ಸುಪ್ರೀಂ ಕೋರ್ಟ್‍ನಲ್ಲಿ ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿಗೆ ವರ್ಗಾಯಿಸಿ ಇದಕ್ಕಾಗಿ ವಿಶೇಷ ಕೋರ್ಟ್ ಸ್ಥಾಪನೆ ಮಾಡುವಂತೆ 2003 ರಲ್ಲಿ ಆದೇಶ ಪ್ರಕಟಿಸುತ್ತದೆ. 2014ರ ಸೆ. 27ರಂದು ಜಯಾಗೆ 4 ವರ್ಷ ಜೈಲು, 100 ಕೋಟಿ ದಂಡ ಶಶಿಕಲಾ ಮತ್ತು ಇತರರಿಗೆ 4 ವರ್ಷ ಜೈಲು 10 ಕೋಟಿ ದಂಡ ವಿಧಿಸಿ ತೀರ್ಪು ನೀಡುತ್ತದೆ.
Advertisement
2015 ಮೇ.11ರಂದು ಕರ್ನಾಟಕ ಹೈಕೋರ್ಟ್ ವಿಶೇಷ ನ್ಯಾಯಾಲಯದ ತೀರ್ಪು ರದ್ದುಗೊಳಿಸಿ ತೀರ್ಪು ಪ್ರಕಟಿಸುತ್ತದೆ. ಜಯಲಲಿತಾ, ಶಶಿಕಲಾ ಸೇರಿದಂತೆ ಉಳಿದ ಆರೋಪಿಗಳೂ ದೋಷಮುಕ್ತರಾಗುತ್ತದೆ. ಹೈಕೋರ್ಟ್ ತೀರ್ಪಿನ್ನು ಪ್ರಶ್ನಿಸಿ ಕರ್ನಾಟಕ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸುತ್ತದೆ. ಕಳೆದ ಜೂನ್ 7ರಂದು ವಿಚಾರಣೆ ನಡೆಸಿದ ಸುಪ್ರೀಂ ತೀರ್ಪು ಕಾಯ್ದಿರಿಸಿತ್ತು.
ಮತ್ತೊಂದು ಕೇಸ್ ಯಾವುದು?
1995-96ರಲ್ಲಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಮೂರು ಕೇಸ್‍ಗಳ ಶಶಿಕಲಾ ವಿರುದ್ಧ ದಾಖಲಿಸಿತ್ತು. ವಿದೇಶಿ ಸಂಸ್ಥೆಗಳಿಗೆ ಯುಎಸ್, ಸಿಂಗಪೂರ್ ಡಾಲರ್ ರೂಪದಲ್ಲಿ ಪಾವತಿ ಜೆಜೆ ಟಿವಿಗಾಗಿ ತರಂಗಾಂತರ ಉಪಕರಣ ಬಾಡಿಗೆ ಪಡೆದಿದ್ದರು ಎನ್ನುವ ಆರೋಪ ಶಶಿಕಲಾ ಮೇಲಿದೆ. ಈ ಕೇಸನ್ನು ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ.
To all the youngsters in TN, 234 job opportunities to open up shortly.
— Ashwin Ravichandran (@ashwinravi99) February 6, 2017
Guys please cool it down, it is a job creation drive.Nothing to do with Politics.#howmuchtwisting ????
— Ashwin Ravichandran (@ashwinravi99) February 6, 2017