ಚಿಕ್ಕೋಡಿ: ರಾಜ್ಯ ಅಷ್ಟೇ ಅಲ್ಲದೇ ಬೆಳಗಾವಿ ಜಿಲ್ಲೆಯಿಂದಲೂ ಉಕ್ರೇನ್‍ನಲ್ಲಿ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ವಿದ್ಯಾರ್ಥಿ ಕೂಡ ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದಾರೆ. ಪಾಲಕರ ಜೊತೆ ಸಂಪರ್ಕದಲ್ಲಿದ್ದರು. ಆದರೆ ಶನಿವಾರದಿಂದ ಸಂಪರ್ಕಕ್ಕೆ ಬಂದಿಲ್ಲ ಎಂಬ ಪಾಲಕರಿಂದ ಮಾಹಿತಿ ಬಂದಿದೆ. ಸಿಎಂ ಅವರಿಗೂ ಈ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ. ಮಕ್ಕಳೆಲ್ಲಿದ್ದಾರೆ ಎಂಬ ಮಾಹಿತಿ ಪಡೆಯುವ ಕಾರ್ಯ ನಡೆಯುತ್ತಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಜೊತೆ ಚರ್ಚೆ ನಡೆಸಿದೆ ಎಂದಿದ್ದಾರೆ. ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷೆಗೆ ಡ್ರೆಸ್ ಕೋಡ್ ಕಡ್ಡಾಯ!
ವಿದೇಶಾಂಗ ಇಲಾಖೆ ಬಸವರಾಜ್ ಬೊಮ್ಮಾಯಿಯವರು ಕರ್ನಾಟಕದ ಎಲ್ಲ ವಿದ್ಯಾರ್ಥಿಗಳನ್ನು ಕರೆ ತರಲು ಪ್ರಯತ್ನ ಪಡುತ್ತಿದ್ದಾರೆ. ಕೆಲವೊಂದು ಟೆಕ್ನಿಕಲ್ ಸಮಸ್ಯೆ ಇದೆ. ನಾನೂ ಡಿಸಿ ಅವರ ಜೊತೆ ಮಾತನಾಡಿದ್ದೇನೆ. ಯಾವುದೇ ಟೆಕ್ನಿಕಲ್ ಸಮಸ್ಯೆ ಇದ್ದರೂ ವಿದೇಶಾಂಗ ಸಚಿವರ ಹತ್ತಿರ ಮಾತನಾಡಿ ಆದಷ್ಟು ಬೇಗ ಮಕ್ಕಳನ್ನು ದೇಶಕ್ಕೆ ತರಲು ಕಾರ್ಯರೂಪದಲ್ಲಿದ್ದೇವೆ. ಈ ಹಿಂದೆ ಕೂಡ ತಾಲಿಬಾನ್‍ನಲ್ಲೂ ಇದೇ ರೀತಿಯಾದಾಗ ದೇಶಕ್ಕೆ ವಾಪಸ್ ತರುವ ಕೆಲಸ ಆಗಿದೆ. ಸಿಎಂ ಅವರು ಪ್ರಧಾನಿಗಳು ಹಾಗೂ ವಿದೇಶಾಂಗ ಇಲಾಖೆ ಯಾರಿಗೂ ತೊಂದರೆಯಾಗದಂತೆ ಸುರಕ್ಷಿತವಾಗಿ ಕರೆ ತರಲಾಯಿತು. ಮಕ್ಕಳೆಲ್ಲಿದ್ದರೂ ಅವರನ್ನು ಕರೆ ತರುವ ವ್ಯವಸ್ಥೆ ಮಾಡುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶುಭ ಭಾನುವಾರ, ಶುಭ ಗಳಿಗೆಯಲ್ಲಿ ಇಂದು ಪಾದಯಾತ್ರೆಗೆ ಚಾಲನೆ: ಡಿಕೆಶಿ