ಸಾಮಾಜಿಕ ಜಾಲತಾಣದಲ್ಲಿ ಹಲವಾರು ಚಾಲೆಂಜ್‍ಗಳು ಅಥವಾ ಹಲವು ವಿಷಯಗಳು ಟ್ರೆಂಡಿಂಗ್ ಆಗುತ್ತಿರುತ್ತದೆ. ಆದರೆ ಈಗ ‘ಸ್ಯಾರಿ ಟ್ವಿಟ್ಟರ್’ ವೈರಲ್ ಆಗುತ್ತಿದ್ದು, ರಾಜಕಾರಣಿಗಳು, ಸಿನಿಮಾ ಕಲಾವಿದರು ಸೇರಿದಂತೆ ಹಲವು ಮಹಿಳೆಯರು ತಾವು ಸೀರೆ ಧರಿಸಿರುವ ಫೋಟೋವನ್ನು ಟ್ವೀಟ್ ಮಾಡುತ್ತಿದ್ದಾರೆ.
ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಸ್ಯಾರಿಟ್ವಿಟ್ಟರ್ ಹ್ಯಾಶ್‍ಟ್ಯಾಗ್ ಟ್ರೆಂಡಿಂಗ್‍ನಲ್ಲಿ ಇತ್ತು. ಆದರೆ ಇಂದು ಬೆಳಗ್ಗೆಯಿಂದ ಹಲವು ಮಹಿಳೆಯರು ಸ್ಯಾರಿಟ್ವಿಟ್ಟರ್ ಹ್ಯಾಶ್‍ಟ್ಯಾಗ್ ಬಳಸಿ ತಾವು ಸೀರೆ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ.
Advertisement
Because #SareeTwitter & I cannot miss tweeting with this hashtag 🙂 pic.twitter.com/VTC2ISlvoy
— Priyanka Chaturvedi???????? (@priyankac19) July 15, 2019
Advertisement
ಈ ಹ್ಯಾಶ್‍ಟ್ಯಾಗ್ ಟ್ರೆಂಡಿಂಗ್ ಆಗುತ್ತಿದ್ದಂತೆ ಕಲಾವಿದರು, ರಾಜಕಾರಣಿಗಳು ಸೀರೆ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಶಿವಸೇನೆಯ ಪ್ರಿಯಾಂಕ ಚರ್ತುವೇದಿ ಸೀರೆ ಧರಿಸಿರುವ ನಾಲ್ಕು ಫೋಟೋ ಟ್ವಿಟ್ಟರಿನಲ್ಲಿ ಹಾಕಿದ್ದಾರೆ.”ಇದು ಸ್ಯಾರಿಟ್ವಿಟ್ಟರ್ ಹಾಗೂ ನಾನು ಈ ಹ್ಯಾಶ್‍ಟ್ಯಾಗ್ ಬಳಸಿ ಟ್ವೀಟ್ ಮಾಡುವುದನ್ನು ಮಿಸ್ ಮಾಡಿಕೊಳ್ಳಲು ಇಷ್ಟವಿಲ್ಲ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.
Advertisement
Here comes a trend I can completely relate to! #SareeTwitter pic.twitter.com/CrP95J5edv
— Nupur Sharma (@NupurSharmaBJP) July 15, 2019
Advertisement
ಬಿಜೆಪಿ ನಾಯಕಿ ನೂಪೂರ್ ಶರ್ಮಾ ಕೂಡ ಸೀರೆ ಧರಿಸಿರುವ ಎರಡು ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ನನಗೆ ಸಂಪೂರ್ಣವಾಗಿ ಸೂಟ್ ಆಗುವಂತಹ ಚಾಲೆಂಜ್ ಈಗ ಟ್ರೆಂಡ್ ಆಗುತ್ತಿದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ. ನಟಿ, ರಾಜಕಾರಣಿ ನಗ್ಮಾ ಅವರು ಕೂಡ ಹಳದಿ ಸೀರೆ ಧರಿಸಿ ಸ್ಯಾರಿ ಟ್ವಿಟ್ಟರ್ ಹ್ಯಾಶ್‍ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಸೆಲೆಬ್ರಿಟಿ ಅಲ್ಲದೆ ಹಲವರು ಈ ಚಾಲೆಂಜ್ ಸ್ವೀಕರಿಸಿ ಸೀರೆ ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ.
Saree dipicts our Indian tradition and culture. It is also supposed to be known as our sexiest costume. One looks dignified , elegant, beautiful , graceful and yet can seem very appealing in it #SareeTwitter pic.twitter.com/gVIuAZ6Uco
— Nagma (@nagma_morarji) July 15, 2019