ಧಾರವಾಡ: ಸರಳವಾಸ್ತು ಚಂದ್ರಶೇಖರ್ ಗುರೂಜಿ ಕೊಲೆ ನಡೆದು ಇಂದಿಗೆ ನಾಲ್ಕು ದಿನ ಕಳೆದಿವೆ. ಈಗಾಗಲೇ ಆರೋಪಿಗಳಾದ ಮಹಾಂತೇಶ್ ಹಾಗೂ ಮಂಜುನಾಥ್ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ಎದುರಿಸುತ್ತಿದ್ದಾರೆ. ಇಷ್ಟರಲ್ಲೇ ಕೊಲೆಗಾರ ಮಂಜುನಾಥ್ ಮರೇವಾಡ ಬಗ್ಗೆ ಇನ್ನು ಹಲವು ಅಂಶ ಬೆಳಕಿಗೆ ಬಂದಿದ್ದು, ಆತ ವಿದ್ಯಾಕಾಶಿ ಧಾರವಾಡದಲ್ಲಿ ಬಿಲ್ಡಿಂಗ್ ಕಟ್ಟುವ ಗುತ್ತಿಗೆ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ.
Advertisement
ನಗರದ ಸಿದ್ಧಾರೂಢ ಕಾಲೋನಿಯಲ್ಲಿ ಒಡೆಯರ್ ಹಾಗೂ ಹಂಚನಾಳ ಮನೆಗಳನ್ನ ಕಟ್ಟುವ ಗುತ್ತಿಗೆ ಪಡೆದಿದ್ದ ಕೊಲೆಗಾರ ಮಂಜುನಾಥ್ ಮರೇವಾಡ, ಹಂಚಿನಾಳ ಅವರಿಂದ 13 ಲಕ್ಷ ಹಣ ಪಡೆದಿದ್ದಾನೆ. ಆದರೆ ಅವರ ಮನೆಯ 6 ಲಕ್ಷ ರೂ.ಗಷ್ಟೇ ಕೆಲಸ ಮಾಡಿದ್ದಾನೆ. ಅಲ್ಲದೇ ಒಡೆಯರ್ ಎನ್ನುವವರ ಮನೆಯ ಕೆಲಸ ಕೂಡಾ ಅರ್ಧಕ್ಕೆ ನಿಂತಿದೆ. ಇದೇ ಕಾಲೋನಿಯಲ್ಲಿ ಹಲವು ಬಿಲ್ಡಿಂಗ್ ಕೆಲಸ ಮಾಡಿದ್ದಕ್ಕೆ, ಇವನಿಗೆ ಕಾಲೋನಿಯಲ್ಲಿ ಸಿದ್ಧಾರೂಢರ ದೇವಸ್ಥಾನ ಕಟ್ಟುವ ಗುತ್ತಿಗೆ ಕೂಡಾ ನೀಡಲಾಗಿದೆ. ಇದನ್ನೂ ಓದಿ: ವೀರ ಮದಕರಿ ನಾಯಕ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ – ಪ್ರೋಫೆಸರ್ ಕ್ಷಮೆಯಾಚನೆ
Advertisement
Advertisement
ಕಳೆದ ನಾಲ್ಕು ತಿಂಗಳ ಹಿಂದೆ 5 ಲಕ್ಷಕ್ಕೆ ದೇವಸ್ಥಾನ ಕಟ್ಟಿಸಿ ಕೊಡಬೇಕು ಎಂದು ಗಡುವನ್ನು ನೀಡಿ 50 ಸಾವಿರ ಮುಂಗಡ ಹಣ ಕೂಡಾ ಕೊಡಲಾಗಿದೆ. ಆದರೆ ಈತ ಗುರೂಜಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಈ ಹಣ ಕೊಟ್ಟವರಿಗೆ ದೊಡ್ಡ ಸಂಕಷ್ಟ ಬಂದು ಒದಗಿದೆ. ಅಲ್ಲದೇ ಕೆಲ ಕಾರ್ಮಿಕರ ಸಂಬಳ ಕೂಡಾ ಈತ ನೀಡಬೇಕಾಗಿದ್ದು, ಅದೂ ಕೂಡಾ ಮಂಜುನಾಥ್ ಉಳಿಸಿಕೊಂಡಿದ್ದಾನೆ.
Advertisement
ಮಂಜುನಾಥ್ ಮರೇವಾಡ ಜೈಲು ಸೇರಿದ ಮೇಲೆ ಯಾವಾಗ ಅವನು ಅಲ್ಲಿಂದ ಬಿಡುಗಡೆಯಾಗಿ ಬಂದು ನಮ್ಮ ಕೆಲಸ ಮುಗಿಸಿಕೊಡಬೇಕು, ಯಾವಾಗ ನಾವು ಆ ಮನೆಯಲ್ಲಿ ಇರಬೇಕು ಎಂದು ಮನೆ ಗುತ್ತಿಗೆ ಕೊಟ್ಟ ಮಾಲೀಕರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ದೇವಸ್ಥಾನದ ಕೆಲಸ ಕೂಡಾ ಇದೇ ರೀತಿಯಾಗಿದೆ ಎಂಬ ಮಾತುಗಳು ಹೇಳಿ ಬರುತ್ತಿದೆ.