ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ, ಖ್ಯಾತ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹುಬ್ಬಳ್ಳಿ ಉಣಕಲ್ ನಲ್ಲಿರುವ ಖಾಸಗಿ ಹೊಟೆಲ್‌ನಲ್ಲಿ ಹಾಡಹಗಲೇ ಭಕ್ತರ ಸೋಗಿನಲ್ಲಿ ಬಂದ ಇಬ್ಬರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಪರಿಚಯಸ್ಥರಿಂದಲೇ ಈ ಹತ್ಯೆ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಹತ್ಯೆ ಹೇಗಾಯ್ತು?
ಚಂದ್ರಶೇಖರ್ ಗುರೂಜಿ ಇಂದು ಹೋಟೆಲಿನಲ್ಲಿ ತಂಗಿದ್ದರು. ಹೋಟೆಲಿನಲ್ಲಿ ತಂಗಿದ್ದ ಇವರನ್ನು ಕರೆ ಮಾಡಿದ ಇಬ್ಬರು ರಿಸೆಪ್ಶನಿಸ್ಟ್ ಜಾಗಕ್ಕೆ ಬರಲು ಹೇಳಿದ್ದಾರೆ. ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯಕ್ಕೆ ಎರಡೂವರೆ ವರ್ಷದ ಮಗು ಸಾವು
ಗುರೂಜಿ ಇವರ ಬಳಿ ಬರುತ್ತಿದ್ದಂತೆ ಇಬ್ಬರು ಎದ್ದು ನಿಂತಿದ್ದಾರೆ. ಗುರೂಜಿ ಕುಳಿತ ಬಳಿಕ ಒಬ್ಬ ಆಶೀರ್ವಾದ ಪಡೆಯುವ ನಾಟಕ ಮಾಡಿದ್ದರೆ ಮತ್ತೊಬ್ಬ ನಿಂತಿದ್ದ. ಕೆಲ ಕ್ಷಣದಲ್ಲೇ ಮುಂದುಗಡೆ ನಿಂತಿದ್ದ ಯುವಕ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಮತ್ತೊಬ್ಬ ಚಾಕುವಿನಿಂದ ಇರಿದಿದ್ದಾನೆ. ನಂತರ ಇಬ್ಬರು ಮನ ಬಂದಂತೆ ಇರಿದು ಬರ್ಬರವಾಘಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಒಟ್ಟು 20 ಸೆಕೆಂಡ್‌ನಲ್ಲಿ 60 ಬಾರಿ ಚಾಕುವಿನಿಂದ ಇರಿಯಲಾಗಿದೆ.