ಮೈಸೂರು: ಒಂದು ವರ್ಷದ ಹಿಂದೆ ನಾನಾ-ನೀನಾ ಎಂದು ಪರಸ್ಪರ ದಿನವೂ ಕಿತ್ತಾಡಿಕೊಂಡು ಆಣೆ ಪ್ರಮಾಣ ಮಾಡಲು ಹೊರಟಿದ್ದ ಮೈಸೂರಿನ ಎಚ್.ವಿಶ್ವನಾಥ್ ಹಾಗೂ ಸಾರಾ ಮಹೇಶ್ ಈಗ ದೋಸ್ತಿಗಳು.
ಹೌದು, ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣಕ್ಕೆ ಹೋಗಿದ್ದ ಸಾರಾ ಮಹೇಶ್ ಈಗ ಎಚ್. ವಿಶ್ವನಾಥ್ ಅವರ 75ನೇ ವರ್ಷದ ಹುಟ್ಟುಹಬ್ಬ ಆಚರಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಕೆ.ಆರ್. ನಗರದಲ್ಲಿ ಎರಡು ದಿನ ಅದ್ಧೂರಿಯಾಗಿ ಎಚ್. ವಿಶ್ವನಾಥ್ ಹುಟ್ಟುಹಬ್ಬ ನಡೆಯಲಿದೆ. ಈ ಸಮಾರಂಭ ಆಯೋಜನೆಗೆ ಸಾರಾ ಮಹೇಶ್ ಅಧ್ಯಕ್ಷರಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇದನ್ನೂ ಓದಿ: ಆಣೆ ಪ್ರಮಾಣವಾದ 1 ವರ್ಷಕ್ಕೆ ನ್ಯಾಯದೇವತೆಯಿಂದ ವಿಶ್ವನಾಥ್‌ಗೆ ಶಿಕ್ಷೆ – ಸಾರಾ ಮಹೇಶ್
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಾ ಮಹೇಶ್, ಇದು ರಾಜಕೀಯ ದೋಸ್ತಿಯಲ್ಲ. ಮಾನವೀಯವಾದ ಸ್ನೇಹ. ಎಚ್. ವಿಶ್ವನಾಥ್ ಕೆ.ಆರ್. ನಗರದ ಹಿರಿಯ ರಾಜಕಾರಣಿ. ಅವರ 75ನೇ ಹುಟ್ಟುಹಬ್ಬ ಮಾಡುವುದು ನಮ್ಮ ಕರ್ತವ್ಯ ಇದರಲ್ಲಿ ರಾಜಕಾರಣ ಇಲ್ಲ. ನಮ್ಮಷ್ಟು ರಾಜಕೀಯವಾಗಿ ಕಿತ್ತಾಡಿಕೊಂಡವರು ಯಾರು ಇಲ್ಲ. ಅಷ್ಟು ಬೈಯ್ದಾಡಿಕೊಂಡಿದ್ದೇವೆ. ಆದರೆ, ಇದು ಸ್ನೇಹ ಪೂರ್ವಕವಾಗಿ ಸಮಾರಂಭ ಮಾಡುತ್ತಿದ್ದೇವೆ. ರಾಜಕಾರಣದ ಬಂದಾಗ ಮತ್ತೆ ಹೇಳಿಕೆ ಪ್ರತಿ ಹೇಳಿಕೆ ಇರುತ್ತದೆ ಎಂದರು. ಇದನ್ನೂ ಓದಿ: ಮಸೀದಿಗಳಿಗೆ ಶ್ರೀರಾಮುಲು ದೇಣಿಗೆ- ಇದು ಓಲೈಕೆ ರಾಜಕಾರಣ ಎಂದ ಮುಸ್ಲಿಮರು