BellaryDistrictsKarnatakaLatestMain Post

ಮಸೀದಿಗಳಿಗೆ ಶ್ರೀರಾಮುಲು ದೇಣಿಗೆ- ಇದು ಓಲೈಕೆ ರಾಜಕಾರಣ ಎಂದ ಮುಸ್ಲಿಮರು

ಬಳ್ಳಾರಿ: ಜಿಲ್ಲೆಯ ಮಸೀದಿಗಳಿಗೆ ಸಚಿವ ಶ್ರೀರಾಮುಲು 20 ಲಕ್ಷ ರೂ. ದೇಣಿಗೆಯನ್ನು ನೀಡಿದ ವಿಚಾರ ಈಗ ಚರ್ಚೆಗೆ ಗ್ರಾಸವಾಗುತ್ತಿದೆ.

ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ನಿರ್ಣಾಯಕರಾಗಿದ್ದಾರೆ. ಕೌಲಬಜಾರ ವ್ಯಾಪ್ತಿಯಲ್ಲಿ ಬರುವ 9 ವಾರ್ಡ್‍ಗಳಲ್ಲಿ ಅತಿ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಹೀಗಾಗಿ ಒಂದೊಂದು ಮಸೀದಿಗೆ 20 ಲಕ್ಷ ದೇಣಿಗೆ ನೀಡುವ ಮೂಲಕ ಮುಸ್ಲಿಂ ಮತದಾರರ ಒಲೈಕೆ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಹಿಜಬ್, ಹಲಾಲ್, ಸಿಎಎ ಗಲಾಟೆ ವೇಳೆ ಮುಸ್ಲಿಂ ಪರ ಮಾತನಾಡದ ನಾಯಕರು ಇದೀಗ ಒಲೈಕೆ ರಾಜಕಾರಣ ಮಾಡುತ್ತಿದ್ದಾರೆಂದು ಮುಸ್ಲಿಂ ಮುಖಂಡರು ಆರೋಪಿಸಿದ್ದಾರೆ. ಇದನ್ನೂ ಓದಿ: ವರ್ತೂರು ಪ್ರಕಾಶ್, ಮಂಜುನಾಥಗೌಡ ಬಿಜೆಪಿಗೆ ಸೇರ್ಪಡೆ

ಶ್ರೀರಾಮುಲು ಈ ಬಗ್ಗೆ ಮಾತನಾಡಿ, ದೇಣಿಗೆ ನಾನು ಕೊಟ್ಟಿಲ್ಲ. ದಾನಿಗಳು ನನ್ನ ಮೂಲಕ ಕೊಡಿಸಿದ್ದಾರೆಂದು ಹೇಳುತ್ತಿದ್ದಾರೆ. ಧರ್ಮದ ಕೆಲಸ ಈ ಕೈಕೊಟ್ಟಿದ್ದು ಮತ್ತೊಂದು ಕೈಗೆ ಕಾಣಬಾರದು. ನಾನು ಒಂದು ರೂಪಾಯಿಯನ್ನು ಕೊಟ್ಟಿಲ್ಲ. ಬೇರೆಯವರ ಕೈಯಿಂದ ಕೊಡಿಸಿದ್ದೇನೆ. ನನ್ನ ಮೂಲಕ ದೇಣಿಗೆ ದೇವಸ್ಥಾನ, ಮಸೀದಿಗೆ ಮುಟ್ಟುತ್ತದೆ ಅಂದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಆಪ್ ಪಂಜಾಬ್ ಪೊಲೀಸರನ್ನು ದುರಪಯೋಗಪಡಿಸಿಕೊಂಡಿದೆ: ಬಿಜೆಪಿ ಆರೋಪ

Leave a Reply

Your email address will not be published.

Back to top button