ಬೆಂಗಳೂರು: ಡಿಸಿಎಂ ವಾರ್ನಿಂಗ್ ಮಾಡೋದು ಸರಿಯಲ್ಲ. ಗೋಕಾಕ್ ಚಳವಳಿ ಮಾಡಿ ಚಿತ್ರರಂಗ ಸರ್ಕಾರವನ್ನೇ ಬೀಳಿಸಿತ್ತು ಎಂದು ನಿರ್ಮಾಪಕ ಸಾರಾ ಗೋವಿಂದು (Sa Ra Govindu) ಹೇಳಿದರು.
ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಭಾಷೆಗೆ ಅನ್ಯಾಯವಾದಾಗ ಸ್ಪಂದಿಸುವುದು ನಮ್ಮ ಕರ್ತವ್ಯವಾಗಿದೆ. ಮಾತು ಅತಿರೇಕಕ್ಕೆ ಹೋಗಬಾರದು. ಕಲಾವಿದರಿಗೆ ಗೌರವ ಕೊಡಬೇಕು. ನಿಮ್ಮ ಮಾತಿನ ನೋವು ನಮಗೆ ಅರ್ಥವಾಗುತ್ತದೆ. ಆದರೆ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮಹದಾಯಿ, ಕಳಸ ಬಂಡೂರಿ ವಿಚಾರಕ್ಕೆ ಬಂದಾಗ ನಾವು ಹೋರಾಟ ಮಾಡಿದ್ದೇವೆ ಎಂದರು. ಇದನ್ನೂ ಓದಿ: ‘ಅರಗಿಣಿ ಮೇಲೆ ‘ವಿದ್ಯಾಪತಿ’ಗೆ ಲವ್- ನಾಗಭೂಷಣ್, ಮಲೈಕಾ ರೊಮ್ಯಾಂಟಿಕ್ ಸಾಂಗ್ ಔಟ್
ಕನ್ನಡ ಪರ ಸಂಘಟನೆಗಳು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿತ್ತು. ರಾಜಭವನ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಹಿನ್ನೆಲೆ ರಾಜಭವನಕ್ಕೆ ಮುತ್ತಿಗೆ ಹಾಕಲು ಬಂದ ಕನ್ನಡಪರ ಸಂಘಟನೆಗಳಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಇದನ್ನೂ ಓದಿ: ಡಿಕೆಶಿ ಲೂಸ್ ಲೂಸಾಗಿ ಮಾತನಾಡಿರಬಹುದು – ಸಿ.ಟಿ.ರವಿ ಟಕ್ಕರ್
ಈ ವೇಳೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಪ್ರತಿಕ್ರಿಯಿಸಿ, ಎಂಇಎಸ್ ನಿಷೇಧ, ಮೇಕೆದಾಟು, ಕಳಸಬಂಡೂರಿ ಯೋಜನೆ ಅನುಷ್ಠಾನ, ಕನ್ನಡಿಗರರಿಗೆ ಉದ್ಯೋಗ, ಬೆಳಗಾವಿಯಲ್ಲಿ ಹಲ್ಲೆ ಪ್ರಕರಣ ಇವೆಲ್ಲದರ ವಿರುದ್ಧ ಕನ್ನಡಿಗರ ಸಮರ. ಹೀಗಾಗಿಯೇ ಅಖಂಡ ಕರ್ನಾಟಕ ಬಂದ್ ಕರೆದಿದ್ದೇವೆ. ಮೆಟ್ರೋ ದರ ಏರಿಕೆಯನ್ನು ಸೇರಿಸಿದ್ದೇವೆ. ಬಂದ್ ದಿನ ಮೆಟ್ರೋ ಓಡಬಾರದು. ಗ್ರೇಟರ್ ಬೆಂಗಳೂರು ಮಾಡಿ ತಮಿಳು, ತೆಲುಗು, ಪಂಜಾಬಿಗೊಂದು ಬೆಂಗಳೂರನ್ನು ಕೊಡಲು ನಿರ್ಧರಿಸಿದ್ದಾರೆ ಎಂದು ಕಿಡಿಕಾರಿದರು.
22 ರಂದು ಮಾರ್ಚ್ ಬಂದ್ ಆಗೇ ಆಗುತ್ತದೆ. ಬಂದ್ ದಿನಾಂಕ ಬದಲಾವಣೆ ಮಾಡಲ್ಲ. ಒಂದು ದಿನ ಕರ್ನಾಟಕಕ್ಕೆ ತ್ಯಾಗ ಮಾಡಿ. ಸಾರಿಗೆ ಸಚಿವರೇ ನೀವಾಗಿ ನೀವೇ ಬಸ್ ನಿಲ್ಲಿಸಬೇಕು. ಪರೀಕ್ಷೆ, ದೇವಸ್ಥಾನ ಅಂತೆಲ್ಲ ನೋಡೋಕೆ ಆಗಲ್ಲ. ಪರೀಕ್ಷೆಯನ್ನು ಮುಂದೂಡಲಿ ಅದು ಅವರ ಕರ್ತವ್ಯ ಎಂದರು. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಕರ್ನಾಟಕ ಎಲ್ಲಿದೆ ಗೊತ್ತಿಲ್ಲ ಅಂದಿದ್ರು – ಶಾಸಕ ರವಿ ಗಣಿಗ ನಿಗಿನಿಗಿ ಕೆಂಡ