BollywoodCinemaLatestMain PostNational

‘ನಿಮ್ಮ ಶಾಯರಿ ಏಕೆ ಕೆಟ್ಟದಾಗಿದೆ’ – ಟ್ರೋಲಿಗರ ಪ್ರಶ್ನೆಗೆ ಸಾರಾ ಖಡಕ್ ಉತ್ತರ

ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರಿಗೆ ಟ್ರೋಲಿಗರು ‘ನಿಮ್ಮ ಶಾಯರಿ ಏಕೆ ಇಷ್ಟು ಕೆಟ್ಟದಾಗಿದೆ’ ಎಂದು ಕೇಳಿದ್ದು, ಇದಕ್ಕೆ ಸಾರಾ ಖಡಕ್ ಉತ್ತರ ಕೊಟ್ಟಿದ್ದಾರೆ.

ಸಾರಾ ಅಲಿ ಖಾನ್ ಇನ್‍ಸ್ಟಾಗ್ರಾಮ್ ನಲ್ಲಿ, ನೀವು ನನಗೆ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು ಎಂದು ಬರೆದುಕೊಂಡಿದ್ದರು. ಅಭಿಮಾನಿಗಳ ಪ್ರಶ್ನೆ ಕೇಳುತ್ತಿದ್ದು, ಅದಕ್ಕೆ ಸಾರಾ ಉತ್ತರ ಕೊಡುತ್ತಿದ್ದರು. ಈ ವೇಳೆ ಟ್ರೋಲಿಗರು, ನಿಮ್ಮ ಶಾಯರಿಗಳು ಕೆಟ್ಟದಾಗಿ ಇರುತ್ತೆ ಎಂದು ಕಳುಹಿಸಿದರು. ಇದನ್ನೂ ಓದಿ: ನಾನು Useless ಬಾಯ್‍ಫ್ರೆಂಡ್ಸ್ ಜೊತೆ ಡೇಟಿಂಗ್ ಮಾಡಿದ್ದೇನೆ: ತಾಪ್ಸಿ ಪನ್ನು

ಅದಕ್ಕೆ ಉತ್ತರಿಸಿದ ಸಾರಾ, ಆ ಶಾಯರಿಯಿಂದ ನಾನು ನಿಮ್ಮಂತಹ ಜನರನ್ನು ಹುಚ್ಚನನ್ನಾಗಿ ಮಾಡುತ್ತೇನೆ. ನಿಮ್ಮ ಅಸಭ್ಯ ಕಾಮೆಂಟ್ ಗಳು ನನಗೆ ನೋವನ್ನು ಉಂಟು ಮಾಡುವುದಿಲ್ಲ. ನಾನು ನನ್ನ ತಂದೆ, ತಾಯಿಯ ಪ್ರಯತ್ನ ಮೀರಿ ಬೆಳೆದಿದ್ದೇನೆ. ಇದು ನನ್ನ ನಗು ಮತ್ತು ನನ್ನ ಸುತ್ತಮುತ್ತಲಿನ ಸಕಾರತ್ಮಕ ಫಲಿತಾಂಶವಾಗಿದೆ. ನಾನು ಸಂತೋಷಪಡುತ್ತೇನೆ. ನೀವು ನಿಜವಾಗಿಯೂ ನನ್ನ ಶಾಯರಿಯನ್ನು ಇಷ್ಟಪಡುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬರೆದು ತಮ್ಮ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.

ಸಾರಾ ಅವರ ಶಾಯರಿಗಳ ಬಗ್ಗೆ ಹಲವು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಅವುಗಳಲ್ಲಿ ಉದಾಹರಣೆಗೆ: ನನ್ನ ಕೂದಲಿನಲ್ಲಿ ಗಾಳಿ ತಪ್ಪಿದೆ. ಸುಣ್ಣಬಣ್ಣದ ಮುಖ, ಗಲೀಜು ಕೂದಲು. ಹಾಗಾಗಿ ನಾನು ಹಂಚಿಕೊಳ್ಳಲು ಯೋಚಿಸಿದ ಒಂದು ಝಲಕ್ ಇಲ್ಲಿದೆ. ಇಡೀ ದಿನ ತಣ್ಣಗಾಗುವುದು – ಎಲ್ಲೆಡೆ ಸೂರ್ಯೋದಯ ಸೂರ್ಯಾಸ್ತದ ಅದ್ಭುತ ವೈಬ್‍ಗಳು ಎಂದು ಬರೆದು ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದರು.

ಇದೇ ರೀತಿ ಸಾರಾ ತಮ್ಮ ಫೋಟೋಗಳಿಗೆ ಶಾಯರಿಗಳನ್ನು ಬರೆದು ಪೋಸ್ಟ್ ಮಾಡುತ್ತಿರುತ್ತಾರೆ. ಈ ಶಾಯರಿ ಓದಿದ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ನಟನೆ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾರಾ ಅವರ ಶಾಯರಿಗೆ ಫೇಮಸ್ ಆಗಿದ್ದಾರೆ.

2018 ರಲ್ಲಿ ‘ಕೇದಾರನಾಥ್’ ಸಿನಿಮಾ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ ಸಾರಾ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್, ರಣ್‍ವೀರ್ ಸಿಂಗ್ ಮತ್ತು ಕಾರ್ತಿಕ್ ಆರ್ಯನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ವರುಣ್ ಧವನ್ ಜೊತೆಗೆ ‘ಕೂಲಿ ನಂ 1’ ರಿಮೇಕ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಕ್ಷಯ್ ಕುಮಾರ್ ಮತ್ತು ಧನುಷ್ ಜೊತೆ ‘ಅತ್ರಾಂಗಿ ರೇ’ ಸಿನಿಮಾದಲ್ಲಿ ಸಾರಾ ಕೊನೆಯದಾಗಿ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡರು. ಇದನ್ನೂ ಓದಿ: ‘ಮರಳಿ ಬರುತ್ತಿದ್ದೇನೆ’ – 56ರ ಹರೆಯದಲ್ಲೂ ಜಿಮ್‍ನಲ್ಲಿ ಬೆವರಿಳಿಸುತ್ತಿದ್ದಾರೆ ಸಲ್ಲು

 

View this post on Instagram

 

A post shared by Sara Ali Khan (@saraalikhan95)

ಸಾರಾ ಅಲಿ ಖಾನ್, ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಪುತ್ರಿಯಾಗಿದ್ದು, ಅವರು ಸಹ ಕಲಾವಿದರು. ಪ್ರಸ್ತುತ ಅಮೃತಾ ಸಿಂಗ್ ಅವರನ್ನು ಬಿಟ್ಟು ಸೈಫ್ ಅಲಿ ಖಾನ್, ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಅವರನ್ನು ಮದುವೆಯಾಗಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸಾರಾ ಅವರ ಅಜ್ಜಿ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಆಗಿದ್ದು, ಇವರ ಕುಟುಂಬವೇ ಸಿನಿಮಾರಂಗದಲ್ಲಿದೆ.

Leave a Reply

Your email address will not be published.

Back to top button