‘ಸಪ್ತಸಾಗರದಾಚೆ ಎಲ್ಲೋ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಡೈರೆಕ್ಟರ್ ಹೇಮಂತ್ ರಾವ್ (Hemanth Rao) ಇದೀಗ ಸೂಪರ್ ಸ್ಟಾರ್‌ಗೆ ಆ್ಯಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಜೊತೆ ಕೆಲಸ ಮಾಡೋಕೆ ಮುಂದಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಸ್ವೀಟ್ ಸರ್ಪ್ರೈಸ್ ಸಿಕ್ಕಿದೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ವರುಣ್ ಧವನ್ ಪತ್ನಿ ನತಾಶಾ
‘ಘೋಸ್ಟ್’ ಖ್ಯಾತಿಯ ನಿರ್ಮಾಪಕ ಸಂದೇಶ್ ನಾಗರಾಜ ಅವರು ಸುದೀಪ್ ಜೊತೆ ಸಿನಿಮಾ ಮಾಡೋದಾಗಿ ಇತ್ತೀಚೆಗೆ ಅಧಿಕೃತ ಘೋಷಣೆ ಮಾಡಿದ್ದರು. ಆದರೆ ನಿರ್ದೇಶನ ಯಾರದ್ದು, ಎಂಬುದನ್ನು ರಿವೀಲ್ ಆಗಿರಲಿಲ್ಲ. ಆದರೆ ಸಂದೇಶ್ ಮತ್ತು ಸುದೀಪ್ ಕಾಂಬಿನೇಷನ್ ಚಿತ್ರಕ್ಕೆ ಹೇಮಂತ್ ರಾವ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಬೇಕಿದೆ.
ಪ್ರತಿ ಸಿನಿಮಾದಲ್ಲೂ ಒಂದಕ್ಕಿಂತ ಒಂದು ವಿಭಿನ್ನ ಕಂಟೆಂಟ್ ಕೊಡುವ ಹೇಮಂತ್ ರಾವ್ ಅವರು ಸುದೀಪ್‌ಗೂ ಉತ್ತಮ ಕಥೆಯನ್ನೇ ಬರೆದಿರುತ್ತಾರೆ ಎಂದು ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮೂವರ ಕಾಂಬಿನೇಷನ್ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.
ಅಂದಹಾಗೆ, ಕೆಲ ದಿನಗಳ ಹಿಂದೆ ಶಿವರಾಜ್‌ಕುಮಾರ್ ಜೊತೆ ಹೇಮಂತ್ ರಾವ್ ಸಿನಿಮಾ ಮಾಡುವ ಬಗ್ಗೆ ಅನೌನ್ಸ್ ಆಗಿತ್ತು. ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಬಳಿಕ ಸ್ಟಾರ್ ನಟರಿಗೆ ಹೇಮಂತ್ ನಿರ್ದೇಶನ ಮಾಡುತ್ತಿದ್ದಾರೆ. ಅವರ ಸಿನಿಮಾಗಳು ಹೇಗಿರಲಿದೆ ಎಂಬುದು ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ.