ಬೆಂಗಳೂರು: ಸ್ಯಾಂಟ್ರೋ ರವಿ (Santro Ravi) ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸ್ಯಾಂಟ್ರೋ ರವಿ ಚಲನವಲಗಳ ಮೇಲೆ ನಿಗಾ ಇಡುವ ಕೆಲಸ ಆಗ್ತಿದೆ. ಈಗಾಗಲೇ ಅವರ ಹಿಂಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಎಲ್ಲಾ ರೀತಿಯ ಹುಡುಕಾಟ ನಡೆಯುತ್ತಿದೆ. ಬೇರೆ ಬೇರೆ ಆಯಾಮದಲ್ಲಿ ತನಿಖೆ ಆಗ್ತಿದೆ. ಶೀಘ್ರವೇ ಸ್ಯಾಂಟ್ರೋ ರವಿ ಬಂಧನ ಆಗುತ್ತೆ ಹೇಳಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ವಿರುದ್ಧ 6 ತಿಂಗಳ ಹಿಂದೆಯೇ ಡಿಜಿ -ಐಜಿಪಿಗೆ ದೂರು ನೀಡಲು ಮುಂದಾಗಿದ್ದ ಒಡನಾಡಿ ಸಂಸ್ಥೆ
Advertisement
Advertisement
ಆತನ ಮೇಲೆ ಇರುವ ಎಲ್ಲಾ ಕೇಸ್‌ಗಳ ಬಗ್ಗೆ ತನಿಖೆ ಮಾಡ್ತೀವಿ ಎಂದರು. ಅಲ್ಲದೇ ಮಹಿಳೆ ಮೇಲೆ ಪೊಲೀಸರೇ ಸುಳ್ಳು ಕೇಸ್ ದಾಖಲು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಸುಳ್ಳು ಕೇಸ್ ಹಾಕಿ ಬಂಧನ ಮಾಡಿರೋದು ಗೊತ್ತಾಗಿದೆ. ಈಗಾಗಲೇ ವರದಿ ರೆಡಿ ಆಗಿದೆ. ಈ ಸಂಬಂಧ ಕಾನೂನು ಕ್ರಮ ಆಗುತ್ತೆ. ಯಾವ ಅಧಿಕಾರಿ ಇದ್ದರೂ ಅವರ ವಿರುದ್ಧ ಕ್ರಮ ಆಗುತ್ತೆ ಎಂದು ಮಾಹಿತಿ ನೀಡಿದ್ದಾರೆ.
Advertisement
ಸರ್ಕಾರವೇ ಸ್ಯಾಂಟ್ರೋ ರವಿಯನ್ನ ಬಚ್ಚಿಟ್ಟಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮಾತಿಗೆ ನಾನು ಏನು ಹೇಳುವುದಿಲ್ಲ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡ್ತಿದ್ದಾರೆ. ಸ್ಯಾಂಟ್ರೋ ರವಿ ಬಂಧನ ಮಾಡೋಕೆ ಎಲ್ಲಾ ಪ್ರಯತ್ನ ಮಾಡ್ತಿದ್ದಾರೆ. ಅತಿ ಶೀಘ್ರವೇ ಬಂಧನ ಆಗುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪತ್ನಿ ವಿರುದ್ಧ ಸುಳ್ಳು ಕೇಸ್ – ಸ್ಯಾಂಟ್ರೋ ರವಿಯ ಷಡ್ಯಂತ್ರಕ್ಕೆ ಇನ್‌ಸ್ಪೆಕ್ಟರ್ ಸಾಥ್
Advertisement
ಆರಗ ಜ್ಞಾನೇಂದ್ರ ಮನೆಯಲ್ಲಿ ಹುಡುಕಿದ್ರೆ ಸ್ಯಾಂಟ್ರೋ ರವಿ ಸಿಗಬಹುದು ಎಂಬ ಕಾಂಗ್ರೆಸ್ ಟ್ವೀಟ್‌ಗೆ ತಿರುಗೇಟು ನೀಡಿದ ಸಚಿವರು, ಇದು ಚುನಾವಣೆ ಸಂದರ್ಭ. ಹೀಗಾಗಿ ಕಾಂಗ್ರೆಸ್ ಚುನಾವಣೆಗೆ ಹೀಗೆ ಮಾತಾಡ್ತಿದೆ. ನಾನು ಕೂಡ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮನೆಯಲ್ಲಿ ಹುಡುಕಿದರೆ ಸಿಗಬಹುದು ಅಂತ ಹೇಳಬಹುದು. ಆದರೆ ಇದು ಜವಾಬ್ದಾರಿಯುತ ಮಾತಲ್ಲ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k