ಬೆಂಗಳೂರು: ಸ್ಯಾಂಟ್ರೋ ರವಿ (Santro Ravi) ಸಂಬಂಧ ಬಿಜೆಪಿ (BJP)-ಕಾಂಗ್ರೆಸ್ ಜಟಾಪಟಿ ಮುಂದುವರಿದಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿಯು ಸರಣಿ ಟ್ವೀಟ್‌ಗಳ ಮೂಲಕ ಆರೋಪಗಳ ಬಾಣ ಹೂಡಿದೆ.
ಸ್ಯಾಂಟ್ರೋ ರವಿಯ ಅನೈತಿಕ ಜಾಲ ಬೆಳೆದು ಹೆಮ್ಮರವಾಗಿದ್ದೇ ಕಾಂಗ್ರೆಸ್ (Congress) ಸರ್ಕಾರದ ಅವಧಿಯಲ್ಲಿ ಆತನ ಮಹಾಪೋಷಕರೇ ಕೈ ಪಕ್ಷದವರು. ಕೊನೆಗೂ ಜೈಲಿಗೆ ಹೋದ ಸ್ಯಾಂಟ್ರೋ ರವಿ ಹೊರ ಬಂದದ್ದು ಕಾಂಗ್ರೆಸ್ ಅವಧಿಯಲ್ಲೇ. ಅವನ ವಿಳಾಸ ಕಾಂಗ್ರೆಸ್ ನಾಯಕರಿಗೆ ಗೊತ್ತಿರಬೇಕು, ಗೊತ್ತಿದೆ ಸಹ ಎಂದು ಟ್ವೀಟ್ ಮೂಲಕ ಬಿಜೆಪಿಯು ಕಾಂಗ್ರೆಸ್ ನಾಯಕರ ಕಾಲೆಳೆದಿದೆ. ಇದನ್ನೂ ಓದಿ: ಬಿಜೆಪಿಯ ಆಪರೇಷನ್ ಓಲ್ಡ್ ಮೈಸೂರಿಗೆ ಸಂಸದೆ ಸುಮಲತಾ ಡಾಕ್ಟರ್ – ಡಿಕೆಶಿಗೆ ಟ್ರಬಲ್?
Advertisement
ಸ್ಯಾಂಟ್ರೊ ರವಿಯ ಅಕ್ರಮಕ್ಕೆ 20 ವರ್ಷಗಳ ಇತಿಹಾಸವಿದ್ದು, ಆತ ಯಾವ ಯಾವ ನಾಯಕರುಗಳೊಂದಿಗೆ ಸಂಪರ್ಕ ಹೊಂದಿದ್ದ ಎನ್ನುವ ಎಲ್ಲ ಸತ್ಯ ತನಿಖೆಯಿಂದ ಹೊರಬರಲಿದೆ.#CriminalCongress
4/4
— BJP Karnataka (@BJP4Karnataka) January 12, 2023
Advertisement
ಈಗಾಗಲೇ ಮುಖ್ಯಮಂತ್ರಿಯವರು ಸ್ಯಾಂಟ್ರೋ ರವಿಯ ವಿರುದ್ಧ ಸಮಗ್ರ ತನಿಖೆಗೆ ಆದೇಶ ನೀಡಿದ್ದಾರೆ. ತನಿಖೆಗೆ ಆದೇಶಿಸಿರುವುದು ಕಾಂಗ್ರೆಸ್ ನಾಯಕರಿಗೆ ನಡುಕ ಹುಟ್ಟಿಸಿದೆ. ಸ್ಯಾಂಟ್ರೋ ರವಿಯ ಅಕ್ರಮಕ್ಕೆ 20 ವರ್ಷಗಳ ಇತಿಹಾಸವಿದೆ. ಆತ ಯಾವ ಯಾವ ನಾಯಕರೊಂದಿಗೆ ಸಂಪರ್ಕ ಹೊಂದಿದ್ದ ಎನ್ನುವ ಎಲ್ಲ ಸತ್ಯ ತನಿಖೆಯಿಂದ ಹೊರಬರಲಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ. ಇದನ್ನೂ ಓದಿ: ಜಾಹೀರಾತಿಗೆ ಸರ್ಕಾರಿ ಹಣ ದುರ್ಬಳಕೆ – 10 ದಿನದಲ್ಲಿ 163 ಕೋಟಿ ವಾಪಸ್ ಕೊಡಿ AAPಗೆ ನೋಟಿಸ್
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k