– ಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗಲ್ಲ ಎಂದ ಸಚಿವ
ಹುಬ್ಬಳ್ಳಿ: ಸುಪ್ರೀಂ ಕೋರ್ಟ್ ಹೇಳಿರುವ ಜಾಗದಲ್ಲಿ ಇವರು ರಾಮಮಂದಿರ (Ram Mandir) ಕಟ್ಟಿಲ್ಲ. ಅದನ್ನು ಬಿಟ್ಟು ಬೇರೆ ಜಾಗದಲ್ಲಿ ಕಟ್ಟಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ (Santosh Lad) ಆರೋಪಿಸಿದ್ದಾರೆ.
Advertisement
ನಗರದಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಅಪೂರ್ಣವಾಗಿದೆ. ಬರೀ 40% ಮಾತ್ರ ಕಟ್ಟಲಾಗಿದೆ. ಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗಲ್ಲ. ಮಂದಿರ ನಿರ್ಮಾಣ ಮಾಡಿದ್ದು ರಾಜಕೀಯ ಇಚ್ಛಾಶಕ್ತಿಯಿಂದ. ಈಗ ಇದನ್ನೇ ಇಟ್ಟುಕೊಂಡು ಬಿಜೆಪಿಯವರು ವೋಟು ಕೇಳತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಂಜಯ್ ಗಾಂಧಿ ಟ್ರಾಮಾ & ಅಸ್ಥಿ ಚಿಕಿತ್ಸಾ ಕೇಂದ್ರಕ್ಕೆ ಅಂಬುಲೆನ್ಸ್ ಉಚಿತ ಕೊಡುಗೆ – ರೋಹನ್ ಬೋಪಣ್ಣ ಹಸ್ತಾಂತರ
Advertisement
Advertisement
ಈ ದೇಶ ಎಲ್ಲರಿಗೂ ಸೇರಿದ್ದು, ಬಿಜೆಪಿಯವರು (BJP) ದೇಶಕ್ಕೆ ಏನೋ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ದೇಶಕ್ಕೆ ಬಿಜೆಪಿಯವರು ಏನೂ ಮಾಡಿದ್ದಾರೆ? ದೇಶ ಸಾಲದಲ್ಲಿ ಮುಳುಗಿ ಹೋಗಿದೆ. ಮೋದಿ ಸಾಹೇಬರು ಮುಖ್ಯಮಂತ್ರಿ ಇದ್ದಾಗ ಮಾತಾಡಿರೋ ವಿಡಿಯೋ ಇದೆ. ಅದನ್ನು ಬಿಜೆಪಿಯವರು ಕೇಳಬೇಕು. ನಾವು ತೆರಿಗೆ ಕೇಳಿದ್ರೆ ಸುಳ್ಳು ರಾಮಯ್ಯ ಎನ್ನುತ್ತಿದ್ದಾರೆ. ಹೌದು ಸುಳ್ಳು ರಾಮಯ್ಯ ಎಂದರೆ ಹತ್ತು ವರ್ಷದಲ್ಲಿ ಇವರು ಏನು ಮಾಡಿದ್ದಾರೆ? ಮೇಕ್ ಇನ್ ಇಂಡಿಯಾ, ರೈತರ ಆದಾಯ ದುಪ್ಪಟ್ಟು, ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಮಾತಾಡಿದ್ದರು. ಈಗ ಬರುವ 90 ದಿನಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಯಾಗಲಿ ಎಂದು ಸವಾಲು ಹಾಕಿದ್ದಾರೆ.
Advertisement
ನಿರ್ಮಲಾ ಸೀತಾರಾಮನ್ ಮೂರು ಕೋಟಿ ಮನೆ ನಿರ್ಮಾಣ ಅಂದ್ರೆ, ಮೋದಿ ಅವರು ನಾಲ್ಕು ಕೋಟಿ ಮನೆ ನಿರ್ಮಾಣ ಅಂತಾರೆ. ನರೇಗಾದಲ್ಲಿ ಇವರ ಸಾಧನೆ ಏನು? ಕಾಂಟ್ರವರ್ಸಿ ಬಗ್ಗೆ ಮಾತಾಡದೆ, ಅಭಿವೃದ್ಧಿ ಬಗ್ಗೆ ಮಾತಾಡಲಿ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪರ್ಫ್ಯೂಮ್ ಗೋಡೌನ್‌ಗೆ ಬೆಂಕಿ – ಮೂವರು ಸಜೀವ ದಹನ