ರಾಯಚೂರು: ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ (Makara Sankranti) ಹಿನ್ನೆಲೆ ಗುರುರಾಯರ ಸನ್ನಿಧಿ ಮಂತ್ರಾಲಯಕ್ಕೆ (Mantralaya) ಭಕ್ತ ಸಾಗರ ಹರಿದು ಬಂದಿದೆ. ರಾಯರ ದರ್ಶನ ಹಾಗೂ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನಕ್ಕೆ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿದ್ದಾರೆ.
ಮಂತ್ರಾಲಯ ರಾಯರ ಮಠದಲ್ಲಿ ಸಂಕ್ರಾಂತಿ ಹಿನ್ನೆಲೆ ಬೆಳಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದೆ. ತುಂಗಭದ್ರಾ ನದಿಯಲ್ಲಿ ಭಕ್ತರು ಮಿಂದೇಳುತ್ತಾ ಪುನೀತರಾಗುತ್ತಿದ್ದಾರೆ. ನದಿ ಪಾತ್ರದಲ್ಲಿ ಸುಮಾರು ಎರಡು ಕಿ.ಮೀವರೆಗೂ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ನದಿಯಲ್ಲಿ ನೀರಿನ ಕೊರತೆ ಹಿನ್ನೆಲೆ ಅಲ್ಪಸ್ವಲ್ಪ ನೀರಿನಲ್ಲೇ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದು, ನದಿಯಲ್ಲಿ ದೀಪಗಳನ್ನು ಹರಿಬಿಟ್ಟು ಹರಕೆಗಳನ್ನು ತೀರಿಸುತ್ತಿದ್ದಾರೆ. ಇದನ್ನೂ ಓದಿ: ಕಾರು ಅಪಘಾತದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಬೆನ್ನುಮೂಳೆ ಮುರಿತ – ಸಚಿವೆ ಆರೋಗ್ಯದ ಬಗ್ಗೆ ವೈದ್ಯರು ಹೇಳೋದೇನು?
ದೂರದ ಊರುಗಳಿಂದ ಬಂದ ಭಕ್ತರು ಪುಣ್ಯ ಸ್ನಾನದ ಬಳಿಕ ನದಿ ದಂಡೆಯಲ್ಲಿ ತಾವು ಕಟ್ಟಿಕೊಂಡು ಬಂದ ಬುತ್ತಿಯ ಊಟ ಮಾಡಿ ಸಂಕ್ರಾಂತಿ ಆಚರಿಸುತ್ತಿದ್ದಾರೆ. ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಶೇಂಗಾ ಹೋಳಿಗೆ, ಬರ್ತಾ, ಬದನೆಕಾಯಿ ಪಲ್ಯ ಸೇರಿದಂತೆ ಬಗೆಬಗೆಯ ಖಾದ್ಯಗಳನ್ನ ತಯಾರಿಸಿಕೊಂಡು ಬಂದು ಸವಿಯುತ್ತಿದ್ದಾರೆ. ಇದನ್ನೂ ಓದಿ: ಎಂ.ಎಸ್.ಪಾಳ್ಯ ಟು ಯಲಹಂಕ ಲವ್‌ಸ್ಟೋರಿ – ಟಿಕೆಟ್ ಕೊಡುತ್ತಲೇ ಯುವತಿಯನ್ನ ಪಟಾಯಿಸಿದ್ದ ಕಂಡಕ್ಟರ್