ತಿರುವಂನಂತಪುರಂ: ಭಾರತದ ಕ್ರಿಕೆಟ್ ತಂಡದ ಆಟಗಾರ ಸಂಜು ಸ್ಯಾಮ್‍ಸನ್ ಅವರು ತಮ್ಮ ಎರಡು ಪಂದ್ಯದ ಫೀಸ್ ಅಂದರೆ ಒಂದೂವರೆ ಲಕ್ಷ ರೂ. ಮೈದಾನದ ಸಿಬ್ಬಂದಿಗೆ ದಾನ ಮಾಡಿದ್ದಾರೆ.
ಶುಕ್ರವಾರ ತಿರುವನಂತಪುರಂನ ಗ್ರೀನ್‍ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಎ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ವಿಕೆಟ್‍ಕೀಪರ್, ಬ್ಯಾಟ್ಸ್ ಮೆನ್ ಸಂಜು ಸ್ಯಾಮ್‍ಸನ್ ಭಾರತ ಎ ಪರ ಅದ್ಭುತವಾಗಿ ಆಡಿದ್ದಾರೆ. ಸಂಜು 48 ಎಸೆತಗಳಲ್ಲಿ 91 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತ ಎ ತಂಡ 4-1 ಸರಣಿಯಿಂದ ಗೆದ್ದಿದೆ.
Advertisement
Advertisement
ಸಂಜು ಸ್ಯಾಮ್‍ಸನ್ ಅವರ ಅತ್ಯುತ್ತಮ ಆಟವಾಗಿದ್ದಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಇದಾದ ಬಳಿಕ ಅವರು ತಮ್ಮ ಎರಡೂ ಪಂದ್ಯದ ಫೀಸ್ ಅಂದರೆ ಒಂದೂವರೆ ಲಕ್ಷ ರೂ. ವನ್ನು ತಿರುವನಂತಪುರಂ ಕ್ರೀಡಾಂಗಣದ ಸಿಬ್ಬಂದಿಗೆ ದಾನ ಮಾಡಿದ್ದಾರೆ. ಸಂಜು ಅವರು ಮೈದಾನದ ಸಿಬ್ಬಂದಿಯ ಕೆಲಸದಿಂದ ಪ್ರಭಾವಿತರಾಗಿದ್ದಾರೆ. ಮಳೆ ಅಡ್ಡಿಪಡಿಸಿದ ಪಂದ್ಯವನ್ನು ಪೂರ್ಣಗೊಳಿಸಲು ಅವರು ಶ್ರಮಿಸಿದ್ದರು.
Advertisement
ಪಂದ್ಯ ಮುಗಿದ ನಂತರ ಮಾತನಾಡಿದ ಸಂಜು ಸ್ಯಾಮ್‍ಸನ್, ಈ ಪಂದ್ಯವನ್ನು ಪೂರ್ಣಗೊಳಿಸಿದ ಶ್ರೇಯಸ್ಸು ಸಂಪೂರ್ಣವಾಗಿ ಕ್ರೀಡಾಂಗಣದ ಸಿಬ್ಬಂದಿಗೆ ಸಲ್ಲುತ್ತದೆ. ಏಕೆಂದರೆ ಅವರಿಂದಾಗಿ ನಾವು ಈ ಪಂದ್ಯವನ್ನು ಆಡಲು ಸಾಧ್ಯವಾಯಿತು. ಕ್ರೀಡಾಂಗಣ ಪಂದ್ಯ ಆಡಲು ಅಂಪೈರ್ ಅನುಮತಿ ನೀಡುತ್ತಿರಲಿಲ್ಲ. ಸಿಬ್ಬಂದಿಯ ಕಠಿಣ ಪರಿಶ್ರಮದಿಂದಾಗಿ ಈ ಪಂದ್ಯ ಆಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.