‘ಬಿಗ್ ಬಾಸ್ ಕನ್ನಡ ಸೀಸನ್ 7’ರ ಸ್ಪರ್ಧಿ (Bigg Boss Kannada 7) ದೀಪಿಕಾ ದಾಸ್ (Deepika Das) ಅವರು ಪತಿ ಜೊತೆ ವಿದೇಶಕ್ಕೆ ಹಾರಿದ್ದಾರೆ. ಸದ್ಯ ನಟಿ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಪ್ರವಾಸದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.
Advertisement
ಪತಿ ದೀಪಕ್ (Deepak) ಜೊತೆ ಐಲ್ಯಾಂಡ್ ಪುಕೆಟ್‌ಗೆ ದೀಪಿಕಾ ದಾಸ್ ತೆರಳಿದ್ದಾರೆ. ಬೋಟ್ ಮಧ್ಯೆ ಕುಳಿತು ಪತಿ ಜೊತೆ ರೊಮ್ಯಾಂಟಿಕ್ ಆಗಿ ಪೋಸ್ ನೀಡಿದ್ದಾರೆ. ಫೋಟೋದಲ್ಲಿ ನಟಿ ತಾಳಿ ಧರಿಸದೇ ಇರೋದನ್ನು ಗಮನಿಸಿ ಯಾವ ದೇಶಕ್ಕೆ ಹೋದ್ರು ನಮ್ಮ ಸಂಸ್ಕೃತಿ ಮರಿಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
Advertisement
View this post on Instagram
Advertisement
ಅಂದಹಾಗೆ, ದೀಪಿಕಾ ದಾಸ್‌ಗೆ ಗೋವಾದಲ್ಲೇ ಮದುವೆಯಾಗುವ ಕನಸು ಇತ್ತಂತೆ. ಹೀಗಾಗಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಟಿ ದೀಪಿಕಾ ದಾಸ್ ಉದ್ಯಮಿ ದೀಪಕ್ ಎಂಬುವವರ ಜೊತೆ ಮಾರ್ಚ್ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
Advertisement
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ನಟಿ ಮಾತನಾಡಿ, ದೀಪಕ್ ಅವರ ಮೇಲೆ ನಿಮಗೆ ಲವ್ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ ನಟಿ ದೀಪಿಕಾ ದಾಸ್ ಮನಬಿಚ್ಚಿ ಮಾತನಾಡಿದ್ದರು. ದೀಪಕ್ ಮತ್ತು ನಾನು ನಾಲ್ಕು ವರ್ಷದಿಂದ ಸ್ನೇಹಿತರು. 4 ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭೇಟಿಯಾದೆವು. ಕಳೆದ ಒಂದು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ವಿ. ಕುಟುಂಬಸ್ಥರು ಕೂಡ ನಮ್ಮ ಪ್ರೀತಿಗೆ ಓಕೆ ಎಂದರು.
ದೀಪಕ್ ಅವರಿಗೂ ಚಿತ್ರರಂಗಕ್ಕೂ ನಂಟಿಲ್ಲ. ಅವರು ಉದ್ಯಮಿ. ಮುಂದಿನ ದಿನಗಳಲ್ಲಿ ಪ್ರೊಡಕ್ಷನ್ ಹೌಸ್ ಮಾಡುವ ಮೂಲಕ ಚಿತ್ರರಂಗಕ್ಕೆ ಕರೆತರುವ ಯೋಜನೆ ಇದೆ. ಅವರು ಜಾಸ್ತಿ ಮಾತಾಡೋದಿಲ್ಲ. ನಾನೇ ಕಮ್ಮಿ ಮಾತಾಡುತ್ತೇನೆ ಅಂದುಕೊಂಡಿದ್ದೆ, ಆದರೆ ನನಗಿಂತ ಕಮ್ಮಿ ಮಾತಾಡುವ ಹುಡುಗ ನನಗೆ ಸಿಕ್ಕಿದ್ದಾರೆ. ನಾನು ಮದುವೆಯಾಗುವ ಹುಡುಗ ಹೀಗೆ ಇರಬೇಕು, ಹಾಗೇ ಇರಬೇಕು ಎಂದು ಅಂದುಕೊಂಡಿರಲಿಲ್ಲ. ಆದರೆ ನಾನು ಪ್ರೀತಿ ಅಂತಾ ಹುಡುಕಿಕೊಂಡು ಹೋಗಿಲ್ಲ. ನನ್ನ ಮದುವೆಯಾಗುವ ಹುಡುಗ ಮನಸ್ಸು ಚೆನ್ನಾಗಿರಬೇಕು. ನನ್ನ ಚೆನ್ನಾಗಿ ನೋಡಿಕೊಳ್ಳುವವನಾಗಿರಬೇಕು. ನನಗೆ ಟೈಮ್ ಕೊಡುವವನಾಗಿರಬೇಕು ಜೊತೆಗೆ ದೇಶ ಸುತ್ತುವವನಾಗಿರಬೇಕು ಅಂತಾ ಈ ಹಿಂದೆ ಹೇಳಿದ್ದೆ. ನಾನು ಅಂದುಕೊಂಡ ಹಾಗೇ ನನಗೆ ನನ್ನ ಸಂಗಾತಿ ಸಿಕ್ಕಿದ್ದಾರೆ ಅಂತ ಮಾತನಾಡಿದ್ದರು.