ನನ್ನ ಬಳಿ 3 ಸೈಟ್, 5 ಕಾರು ಇದೆ: ತನ್ನ ಆಸ್ತಿ ವಿವರ, ದಿನದ ಸಂಬಳ ತಿಳಿಸಿ ತಿರುಗೇಟು ಕೊಟ್ಟ ಸಂಜನಾ

Public TV
4 Min Read
sanjana clarification collage

ಬೆಂಗಳೂರು: ನನ್ನನ್ನು ನೋಡಿದರೆ ರವಿ ಶ್ರೀವತ್ಸ ಅವರಿಗೆ ಹೊಟ್ಟೆ ಕಿಚ್ಚು. ಹಾಗಾಗಿ ಈ ರೀತಿಯ ಟೀಕೆ ಮಾಡುತ್ತಿದ್ದಾರೆ ಎಂದು ಸಂಜನಾ ತಿರುಗೇಟು ಕೊಟ್ಟಿದ್ದಾರೆ.

ಜಾಗ್ವಾರ್ ಕಾರ್, ಕೋಟಿ ರೂ. ಆಸ್ತಿ ಇರುವ ಸಂಜನಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ ಎಂಬ ನಿರ್ದೇಶಕ ರವಿ ಶ್ರೀವತ್ಸವ ಅವರ ಪ್ರಶ್ನೆಗೆ ಪಬ್ಲಿಕ್ ಟಿವಿಯಲ್ಲಿ ಸಂಜನಾ ದೀರ್ಘ ಉತ್ತರ ನೀಡಿದರು.

sanjana clarification

ಸಂಜನಾ ಹೇಳಿದ್ದು ಹೀಗೆ:
ನನ್ನ ಆಸ್ತಿ ಬಗ್ಗೆ ನಾನೇ ಸಂಪೂರ್ಣವಾಗಿ ಎಲ್ಲರಿಗೂ ಹೇಳುತ್ತೇನೆ. ನನ್ನ ಹುಟ್ಟುಹಬ್ಬಕ್ಕೆ ನಾನು ಜಾಗ್ವಾರ್ ಖರೀದಿಸಿದೆ. ನನ್ನ ಹತ್ತಿರ ಬಿಎಂಡಬ್ಲ್ಯೂ, ಹೋಂಡಾ ಸಿವಿಕ್, ವೆರ್ನಾ ಇದ್ದರೆ ತಂಗಿ ಬಳಿ ಆಡಿ ಕಾರಿದೆ. 100*100 ಮನೆ ಮಾತ್ರ ಇಲ್ಲ. ರಾಜನಕುಂಟೆಯಲ್ಲಿ ಸೈಟ್ ಇದೆ ಹಾಗೂ ಹೈದರಾಬಾದ್‍ನಲ್ಲಿ ಸೈಟ್ ಇದೆ. ನಾನು 45 ಸಿನಿಮಾಗಳಲ್ಲಿ ನಟಿಸಿದ್ದೇನೆ. ಪ್ರಭಾಸ್, ಪವನ್ ಕಲ್ಯಾಣ್, ಮೋಹನ್ ಲಾಲ್, ಮುಮ್ಮಟ್ಟಿ, ದರ್ಶನ್ ಅವರ ಜೊತೆಯಲ್ಲಿ ನಾನು ನಟಿಸಿದ್ದೇನೆ. ಅಲ್ಲದೇ 12 ವರ್ಷದಲ್ಲಿ 120 ಜಾಹೀರಾತು ಮಾಡಿದ್ದೇನೆ. ತೆಲುಗು ಕಾರ್ಯಕ್ರಮದಲ್ಲಿ ನಟಿಸುತ್ತಿದ್ದೇನೆ. ಆ ಕಾರ್ಯಕ್ರಮಕ್ಕೆ ಒಂದು ದಿನಕ್ಕೆ 1.5 ಲಕ್ಷ ರೂ. ಸಂಭಾವನೆ ಸಿಗುತ್ತದೆ. ಹೀಗಾಗಿ ನಾನು ಈ ಆಸ್ತಿಯನ್ನು ಸಂಪಾದಿಸಿದ್ದೇನೆ.

sanjana ravi

ಗಂಡ- ಹೆಂಡತಿ ಸಿನಿಮಾ ಮಾಡುವಾಗ ನನಗೆ 16 ವರ್ಷ. ಅಕ್ಟೋಬರ್ 10, 1989 ರಂದು ಮಾತಾಸ್ ಆಸ್ಪತ್ರೆಯಲ್ಲಿ ಹುಟ್ಟಿದ್ದೇನೆ. ವೀಕಿಪಿಡಿಯಾದಲ್ಲಿ ಬರುವುದು ಸರಿಯಿರುವುದಿಲ್ಲ. ಅವರಿಗೆ ಅಷ್ಟು ಅನುಮಾನವಿದ್ದರೆ, ಅವರು ಮಾತಾಸ್ ಆಸ್ಪತ್ರೆಗೆ ಹೋಗಿ ಪರಿಶೀಲಿಸಲಿ ಆಸ್ಪತ್ರೆಯಲ್ಲಿ ನಿಮಗೆ ಈ ದಿನಾಂಕ ಸಿಗಲಿಲ್ಲ ಎಂದರೆ ನಾನು ಚಿತ್ರರಂಗ ಬಿಡುತ್ತೇನೆ. ನನಗೆ ಶ್ರೀವತ್ಸ ಮೇಲೆ ಯಾವುದೇ ದ್ವೇಷವಿಲ್ಲ. ನಾನು ಎಲ್ಲ ಮರೆತು ಆರಮವಾಗಿದ್ದೆ. ಈ ಮೀಟೂ ಬಂದಿದ್ದಕ್ಕೆ ನಾನು ನನ್ನ ಅನುಭವನ್ನು ಹಂಚಿಕೊಂಡೆ. ನನ್ನ ಹುಟ್ಟುಹಬ್ಬಕ್ಕೆ ನಾನು ಇವರನ್ನು ಹಾಗೂ ಚಿತ್ರರಂಗದ ಸದಸ್ಯರನ್ನು ಕರೆದಿದ್ದೆ. 45 ಸಿನಿಮಾದ ಪಯಣದಲ್ಲಿ ನಾನು ಒಂದು ಚಿತ್ರದ ಅನುಭವ ಮಾತ್ರ ಹೇಳಿಕೊಂಡಿದ್ದೇನೆ. ಏಕೆಂದರೆ ಇವರು ಒಂದು ಹೇಳಿ ಸಿನಿಮಾದಲ್ಲಿ ಬೇರೆ ಮಾಡಿಸಿದ್ದು, ಸರಿಯಿಲ್ಲ.

1500360253 sanjjanna sanjana

ಶ್ರೀವತ್ಸ ನನ್ನ ತಂಗಿಯ ವಯಸ್ಸನ್ನು ಹಾಗೂ ನನ್ನ ತಂದೆ ಬಗ್ಗೆ ಮಾತನಾಡುತ್ತಿರುವುದು ಅವರಿಗೆ ನಾಚಿಕೆ ಆಗಬೇಕು. ಶೇಮ್ ಆನ್ ಯೂ ಶ್ರೀವತ್ಸ. ಮೀಟೂ ಅಭಿಯಾನದ ಬಗ್ಗೆ ಮಾತನಾಡುವಾಗ ನಿಮ್ಮ ಅನುಭವ ಹೇಳಿಕೊಳ್ಳಿ ಎಂದು ಕೇಳಿದ್ದಾಗ ನಾನು ನನ್ನ ಅನುಭವವನ್ನು ಹಂಚಿಕೊಂಡೆ. ಆದರೆ ಇವರು ಪ್ರೆಸ್‍ಮೀಟ್ ನಡೆಸಿ ಪಬ್ಲಿಸಿಟಿ ತೆಗೆದುಕೊಳ್ಳುತ್ತಿದ್ದಾರೆ. 12 ವರ್ಷದಿಂದ ನಾನು ಚಿತ್ರಗಳಲ್ಲಿ ದೊಡ್ಡ ನಟರ ಜೊತೆ ನಟಿಸಿದ್ದೇನೆ. ಹಾಗಾಂತ ನನಗೆ ಅವರಿಂದ ಪಬ್ಲಿಸಿಟಿ ಪಡೆಯುವ ಅವಶ್ಯಕತೆ ಇಲ್ಲ.

Sanjana Galrani Photo Shoot Photos 1520255305 186

ಗಂಡ-ಹೆಂಡತಿ ಸಿನಿಮಾದಲ್ಲಿ ನಟಿಸಿದ್ದು ಒಂದು ಶಾಪದಂತೆ ಆಗಿದೆ. ಇದರಿಂದಾಗಿ ನನಗೆ ರಕ್ಷಿತಾ, ರಮ್ಯಾ ಅವರಂತೆ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ. ನಿರ್ದೇಶಕ ರವಿ ಶ್ರೀವತ್ಸ ಸಹ ಯೋಗರಾಜ್ ಭಟ್ ಹಾಗೂ ಸೂರಿಯಂತೆ ಬೆಳೆಯಲು ಆಗಲಿಲ್ಲ.

ನಾನು 2 ವರ್ಷಗಳ ಹಿಂದೆ ‘ಜಿಸ್ಮ್’ ಸಿನಿಮಾ ಮಾಡೋಣ ಎಂದು ಹೇಳಿದೆ. ರವಿ ಇಂದು ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸುವ ಮೊದಲು ನನಗೆ ಅವರ ಮೇಲೆ ಯಾವ ಕೋಪ ಇರಲಿಲ್ಲ. ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ನನ್ನ ತಂಗಿ ಹಾಗೂ ಅಪ್ಪನ ಬಗ್ಗೆ ಮಾತನಾಡಿದ್ದು ನನಗೆ ಇಷ್ಟವಾಗಲಿಲ್ಲ. ಗಂಡ-ಹೆಂಡತಿ ಚಿತ್ರೀಕರಣದ ಸಮಯದಲ್ಲಿ ನಾನು ಅವರು ನನ್ನನ್ನು ಪ್ರಾಣಿಗಳ ರೀತಿ ನಡೆಸಿಕೊಂಡಿದ್ದರು. ಆ ಸಮಯದಲ್ಲಿ ಅವರು ಲೂಸ್, ಸೈಕೋ ತರಹ ಆಡುತ್ತಿದ್ದರು. ಹಾಗಾಗಿ ಅವರು ಈಗಲೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

sanjana nagendra 3

ನಾನು ಹಲವಾರು ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ಯಾರೂ ಕೂಡ ನಿಮ್ಮಂತೆ ನನಗೆ ಟಾರ್ಚರ್ ನೀಡಿಲ್ಲ. ನೀವು ನನಗೆ ಸತ್ತು ಹೋಗು. ಸತ್ತು ಹೋಗು ಎಂದು ಕಿರುಚುತ್ತಾ ಟಾರ್ಚರ್ ನೀಡಿದ್ದೀರಿ. ಹಿಂದಿಯ ಮರ್ಡರ್ ಸಿನಿಮಾ 100 ರಷ್ಟು ಇದ್ದರೆ, ಇವರು 400 ರಷ್ಟು ಸಿನಿಮಾ ಮಾಡಿದ್ದಾರೆ. ಗಂಡ-ಹೆಂಡತಿ ಭಾಗ-2 ಸಿನಿಮಾ ತೆಗೆಯೋವಷ್ಟು ಶೂಟಿಂಗ್ ಮಾಡಿದ್ದಾರೆ. ವೆಬ್ ಸೀರಿಸ್ ಚಿತ್ರಗಳನ್ನು ತೆಗೆಯೋಣ ಎಂದು ಹೇಳಿದೆ. ಅವರು ಈಗ ಬದಲಾಗಿದ್ದಾರೆ ಎನ್ನಿಸಿತ್ತು. ಅಲ್ಲದೇ ನಾನು ಅವರನ್ನು ಕ್ಷಮಿಸಿದ್ದೇನೆ. ನನ್ನ ಮನಸ್ಸು ದೊಡ್ಡದು. ಹಾಗಾಗಿ ನಾನು ನಿಮ್ಮನ್ನು ನನ್ನ ಹುಟ್ಟುಹಬ್ಬಕ್ಕೆ ಕರಿದಿದ್ದೆ.

sanjana galrani 2

ಗಂಡ-ಹೆಂಡತಿ ಸಿನಿಮಾ ಶೂಟಿಂಗ್ ವೇಳೆ ಅವರು ನನ್ನನ್ನು ಬೈದಿದ್ದರು. ಅದನ್ನು ನಾನು ಮೀಟೂ ಅಭಿಯಾನದಲ್ಲಿ ಹೇಳಿಕೊಂಡೆ. ನಾನು ನಿರ್ದೇಶಕರ ಸಂಘಕ್ಕೆ ಹಾಗೂ ನಿರ್ಮಾಪಕರ ಸಂಘದಲ್ಲಿ ಕ್ಷಮೆ ಕೇಳುತ್ತೇನೆ. ಆದರೆ ರವಿ ಶ್ರೀವತ್ಸ ಅವರಲ್ಲಿ ನಾನು ಕ್ಷಮೆ ಕೇಳುವುದಿಲ್ಲ. ರವಿ ಶ್ರೀವತ್ಸ ಅವರೇ ನನ್ನನ್ನು ಕ್ಷಮೆ ಕೇಳಬೇಕು. ಅವರು ನನ್ನ ತಂಗಿ ಹಾಗೂ ನನ್ನ ತಂದೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಹಾಗಾಗಿ ಅವರು ನನ್ನ ಬಳಿ ಕ್ಷಮೆ ಕೇಳಬೇಕು. ನವೆಂಬರ್ 6 ರಂದು ನಾನು ಕಲಾವಿದರ ಸಂಘಕ್ಕೆ ಬಂದು ಕ್ಷಮೆ ಕೇಳುತ್ತೇನೆ.

sanjana galrani 3

ಸಾಲ ಕೇಳಿದ್ರು: ಇಡೀ ಚಿತ್ರರಂಗ ನಿಮ್ಮನ್ನು ಪ್ಲಾಪ್ ನಟಿ ಎಂದು ಕರೆಯುತ್ತದೆ. ಆದರೆ ನನ್ನನ್ನು ಯಾರೂ ಪ್ಲಾಪ್ ನಿರ್ದೇಶಕರೆಂದು ಕರೆಯುವುದಿಲ್ಲ. ಸಂಜನಾ ಎಲ್ಲಾದರೂ ವಿವಾದ ಮಾಡಿಸಿಕೊಂಡರೆ ಆ ವಿವಾದನನ್ನು ನಿಲ್ಲಿಸುವುದ್ದಕ್ಕೆ ಅವರಿಗೆ ಮೊಬೈಲ್ ಫೋನ್ ಗಿಫ್ಟ್ ನೀಡುತ್ತಾರೆ ಎಂದು ರವಿ ಆರೋಪಿಸಿದರು. ಇದಕ್ಕೆ ಸಂಜನಾ, ರವಿ 1 ಲಕ್ಷ ರೂ. ಸಾಲ ಬೇಕೆಂದು ಕೇಳಿದ್ದರು. ಆಗ ನಾನು ನೀವು ನನ್ನ ವೆಬ್ ಸೀರಿಸ್ ಸಿನಿಮಾ ಮಾಡಿದರೆ ಸಂಬಳವಾಗಿ ನಿಮಗೆ 1 ಲಕ್ಷ ನೀಡುತ್ತೇನೆ ಎಂದು ತಿಳಿಸಿದ್ದೆ ಎಂಬುದಾಗಿ ಸಂಜನಾ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=Fngx4OL8iUY

https://www.youtube.com/watch?v=2YYfQAOr3SM

https://www.youtube.com/watch?v=EhTC1JWIn1I

https://www.youtube.com/watch?v=mst7VaRbRP4

https://www.youtube.com/watch?v=EYjWyRuUtGY

https://www.youtube.com/watch?v=bI0PW29YLrU

Share This Article
Leave a Comment

Leave a Reply

Your email address will not be published. Required fields are marked *