ಯುದ್ಧವು ಯಾವುದೇ ದೇಶದ ಖ್ಯಾತಿಗೆ ಒಳ್ಳೆಯದಲ್ಲ ಅಂತ ನಟಿ ಸಂಜನಾ ಗಲ್ರಾನಿ (Sanjjanaa Galrani) ಹೇಳಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ಸಿನಿಮಾದಲ್ಲಿ ‘ಕಿಸ್ಸಿಕ್’ ಬೆಡಗಿ ಐಟಂ ಡ್ಯಾನ್ಸ್?
‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆ ಕುರಿತು ಇನ್‌ಸ್ಟಾ ಪೋಸ್ಟ್‌ವೊಂದನ್ನು ಅವರು ಹಂಚಿಕೊಂಡಿದ್ದಾರೆ. ಪ್ರತಿಯೊಂದು ಕ್ರಿಯೆಗೂ ಸಮನಾದ ಹಾಗೂ ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ. ನಾನು ದೇಶಪ್ರೇಮಿಯೇ, ಅದೇ ಸಮಯದಲ್ಲಿ ಸಂಪೂರ್ಣ ಶಾಂತಿ ಪ್ರಿಯಳೂ ಹೌದು. ಸಣ್ಣ ಅಥವಾ ದೊಡ್ಡ ಯುದ್ಧದ ಯಾವುದೇ ಸೂಚನೆಯು ದೇಶದ ಖ್ಯಾತಿಗೆ ಒಳ್ಳೆಯದಲ್ಲ. ಅದು ಭಾರತದ ಆರ್ಥಿಕತೆ, ಅಂತಾರಾಷ್ಟ್ರೀಯ ಪ್ರವಾಸಿಗರ ಮೇಲೆ ಪರಿಣಾಮ ಬೀರಬಹುದು. ಯುದ್ಧದಲ್ಲಿ ಭಾಗಿಯಾದ ದೇಶಕ್ಕೆ ಆಗುವ ಹಾನಿಯಾಗುವುದೇ ಹೆಚ್ಚು. ಅದು ಊಹೆಗೂ ಮೀರಿದ್ದಾಗಿದೆ. ತಕ್ಷಣವೇ ಎಲ್ಲವೂ ಶಾಂತಿಯೊಂದಿಗೆ ಕೊನೆಗೊಳ್ಳಲಿ ಎಂದು ಕೇಳಿಕೊಳ್ಳುತ್ತೇನೆ. ಜೈ ಹಿಂದ್ ಎಂದು ಸಂಜನಾ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ: ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸುವ ನಮ್ಮ ಸೈನಿಕರಿಗೆ ಥ್ಯಾಂಕ್ಯೂ ಎಂದ ರಶ್ಮಿಕಾ ಮಂದಣ್ಣ
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ 9 ಅಡಗುತಾಣಗಳ ಮೇಲೆ ದಾಳಿ ನಡೆಸುವ ಪ್ರತೀಕಾರ ತೀರಿಸಿಕೊಂಡಿದೆ. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ 100 ಉಗ್ರರನ್ನ ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.