Connect with us

Bengaluru City

ಗಲಾಟೆಯಾಗಿಲ್ಲ, ಸಾಕ್ಷಿಗೆ ನನ್ನ ಬಳಿ ವಿಡಿಯೋ ಇದೆ: ಸಂಜನಾ ಸ್ಪಷ್ಟನೆ

Published

on

– ನನಗೆ ಇಂತಹ ಕೆಟ್ಟ ಪಬ್ಲಿಸಿಟಿ ಬೇಡ

ಬೆಂಗಳೂರು: ನಗರದ ಸ್ಟಾರ್ ಹೋಟೆಲ್‍ನಲ್ಲಿ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಜೊತೆಗೆ ನಡೆದ ಗಲಾಟೆಯ ವಿಚಾರವನ್ನು ನಟಿ ಸಂಜನಾ ಗಲ್ರಾನಿ ತಳ್ಳಿ ಹಾಕಿದ್ದಾರೆ. ಅಷ್ಟೇ ಅಲ್ಲದೆ ನನ್ನ ಹೆಸರು ಹಾಳು ಮಾಡಲು ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ನಟಿ ಸಂಜನಾ, ಈಗ ರೂಮರ್ಸ್ ಆಗಿರುವುದು ಸುಳ್ಳು. ನಾನು ಹಾಗೂ ನನ್ನ ಗೆಳತಿ ವಂದನಾ ಜೈನ್ ಮಧ್ಯೆ ಏನೋ ಸಣ್ಣ ಪುಟ್ಟ ಗಲಾಟೆ, ವಾದ ಆಯ್ತು. ಅವರೇನೋ ಜೋಷ್‍ನಲ್ಲಿ ಪೊಲೀಸ್ ಸ್ಟೇಷನ್‍ಗೆ ಹೋದರು. ನಡೆದಿದ್ದು ಅಷ್ಟೇ. ಈ ವೇಳೆ ನನ್ನ ಅಣ್ಣ ಅಲ್ಲೇ ಇದ್ದರು. ಅವರು ಎಲ್ಲವನ್ನೂ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದರು.

ನನ್ನ ವಿರುದ್ಧ ಯಾರದರು ಏನಾದ್ರೂ ಮಾತನಾಡಿದರೆ ಆ ವಿಡಿಯೋ ಸೇಫ್ಟಿಗೆ ಅಂತ ಇದೆ. ಸುಮ್ಮನೆ ಆ ವಿಡಿಯೋವನ್ನು ತೆಗೆದು ಬಿಟ್ಟು, ಈ ಕಥೆಯಲ್ಲಿ ಮಸಾಲ ಹಾಕುವ ಅವಶ್ಯಕತೆ ನನಗಿಲ್ಲ. ಇಂತಹ ಪಬ್ಲಿಸಿಟಿ ನನಗೆ ಬೇಕಾಗಿಲ್ಲ. ನಾನು ನನ್ನ ಮನೆಯಲ್ಲಿ ಆರಾಮಾಗಿ ಇದ್ದೇನೆ ಎಂದು ಹೇಳಿದ್ದಾರೆ.

ನನ್ನ ಗೆಳತಿ ಹಾಗೂ ನಾನು ಯಾರ ಜೊತೆ ಜಗಳವಾಡಿದ್ದೆವೋ ಅವರು ತಮ್ಮ ಮನೆಯಲ್ಲಿ ಆರಾಮಾಗಿದ್ದಾರೆ. ಕಥೆ ಮುಗಿದು ಹೋಯಿತು. ಈ ಕಥೆಯನ್ನ ಮುಂದುವರಿಸುವುದು ಬೇಡ. ಏನಾಯಿತು, ಯಾಕಾಯ್ತು ಎನ್ನುವ ವಿಚಾರ ಬೇಡ. ನಾವು ಇಬ್ಬರೂ ಸ್ನೇಹಿತೆಯರು, ಸಣ್ಣ-ಪುಟ್ಟ ವಾದ ಮಾಡುತ್ತೇವೆ ಅಷ್ಟೇ. ಅದು ನಮ್ಮ ಮಧ್ಯದಲ್ಲೇ ನಡೆದಿದ್ದು ಅಲ್ವಾ? ಎಲ್ಲವನ್ನೂ ಪಬ್ಲಿಕ್‍ನಲ್ಲಿ ತಂದು ಕೊಡುವುದು, ಬಂದು ಹೇಳುವಂತದ್ದು ಏನಿದೆ ಎಂದು ಪ್ರಶ್ನಿಸಿದರು.

ನಾವು ಕಲಾವಿದರಾಗಿರುವುದರಿಂದ ನಮಗೆ ವೈಯಕ್ತಿಕ ಜೀವನ ಇಲ್ವಾ? ಸಮಾಜ ಕಾಳಜಿ ನಮಗೂ ಇದೆ. ಹೀಗಾಗಿ ನಾವು ಈ ವಿಷಯದಲ್ಲಿ ಇಲ್ಲ. ನಾವಿಬ್ಬರು ಆರಾಮಾಗಿ, ಖುಷಿಯಿಂದಲೇ ಇದ್ದೇವೆ. ನನಗೆ ಇಂತಹ ಕೆಟ್ಟ ಪಬ್ಲಿಸಿಟಿ ಬೇಡ. ದಯವಿಟ್ಟು ಇದರಿಂದ ನನ್ನನ್ನು ಆಚೆ ಇಡಿ ಎಂದು ಸಂಜನಾ ಹೇಳಿದರು.

ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟಿ ಸಂಜನಾ, ದೂರು ದಾಖಲಾಗಿರುವ ಪ್ರತಿಯನ್ನು ನನಗೆ ಕೊಡಿ. ನನ್ನ ಹೆಸರು ಕೆಡಿಸಲು ಹೀಗೆ ಮಾಡುತ್ತಿದ್ದಾರೆ. ರೂಮರ್ಸ್ ಹರಬೇಡಿ, ನನ್ನ ಹಾಗೂ ವಂದನಾ ಜೈನ್ ಮಧ್ಯೆ ವಾದ ಆಗಿದೆ. ಆದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೆ. ಎಫ್‍ಐಆರ್ ಪ್ರತಿ ತೋರಿಸಲಿ ಎಂದು ಅಸಮಾಧಾನ ಹೊರ ಹಾಕಿದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಚೇತನ್ ಸಿಂಗ್ ಅವರು, ಸಂಜನಾ ಅವರು ಸ್ನೇಹಿತೆ ವಂದನಾ ಜೈನ್ ಜೊತೆಗೆ ಡಿಸೆಂಬರ್ 24ರಂದು ರಾತ್ರಿ ಹಳೇ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಸಂಜನಾ ಅಸಭ್ಯವಾಗಿ ವರ್ತಿಸಿದ್ದಾರೆ ಹಾಗೂ ಗಲಾಟೆ ಮಾಡಿ ಮಾಡಿದ್ದಾರೆ ಎಂದು ವಂದನಾ ಜೈನ್ ಹೇಳಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ. ಕೋರ್ಟ್ ನಿಂದ   ತನಿಖೆಗೆ ಆದೇಶ ಬಂದರೆ ತನಿಖೆ ಮುಂದುವರಿಸುತ್ತೇವೆ ಎಂದರು.

ಹೋಟೆಲಿನಲ್ಲಿ ಏನಾಯ್ತು? 
ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಅವರಿಗೆ ಬೆಂಗಳೂರು ಅಂದರೆ ಬಹಳ ಇಷ್ಟ. ಹೀಗಾಗಿ ಬೆಂಗಳೂರಿನಲ್ಲಿಯೇ ಕಾಲ ಕಳೆಯುತ್ತಿದ್ದ ಅವರಿಗೆ ಸ್ಯಾಂಡಲ್‍ವುಡ್ ನಟಿ ಸಂಜನಾ ಜೊತೆ ಸ್ನೇಹವಾಗಿದೆ. ಹೀಗೆ ಇಬ್ಬರೂ ಸ್ಟಾರ್ ಹೋಟೆಲ್‍ನಲ್ಲಿ ಪಾರ್ಟಿ ಮಾಡುತ್ತಿದ್ದರು. ಒಂದೇ ಟೇಬಲ್‍ನಲ್ಲಿ ಕುಳಿತು ಕುಡಿಯುತ್ತಾ ಇದ್ದ ಇಬ್ಬರ ಮಧ್ಯೆ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ. ಮಾತು ಅತಿರೇಕಕ್ಕೆ ಹೋಗಿದ್ದೇ ತಡ, ಇಬ್ಬರೂ ಪರಸ್ಪರ ಕೆಟ್ಟ ಮಾತುಗಳಿಂದ ಬೈದುಕೊಂಡರು.

ಈ ವೇಳೆ ಸಿಟ್ಟಿಗೆದ್ದ ಸಂಜನಾ ಅವರು ವಂದನಾರಿಗೆ ಹೊಡೆಯಲು ಮುಂದಾಗಿದ್ದು, ತನ್ನ ಕೈಯಲ್ಲಿದ್ದ ವಿಸ್ಕಿ ಗ್ಲಾಸನ್ನು ವಂದನಾ ಮೇಲೆ ಬಿಸಾಕಿದ್ದಾರೆ. ನಟಿ ಬಿಸಾಡಿದ ವೇಗಕ್ಕೆ ಗ್ಲಾಸ್ ನಿರ್ಮಾಪಕಿಯ ಹಣೆಗೆ ಬಂದು ಬಡಿದಿದೆ. ಇದಾದ ಬಳಿಕ ನಿರ್ಮಾಪಕಿಯು ನಟಿಯ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತ ನಿರ್ಮಾಪಕಿ ಗರಂ ಆಗಿದ್ದನ್ನು ಕಂಡ ಸಂಜನಾ ಫುಲ್ ಸೈಲೆಂಟ್ ಆಗಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ರಾಜಿ ಪಂಚಾಯ್ತಿ ಮಾಡಿಸಿಕೊಂಡರು.

Click to comment

Leave a Reply

Your email address will not be published. Required fields are marked *