– ನಾನು ನಿಜವಾದ ಶಿವ ಸೈನಿಕ
– ಜೈಲಿಗೆ ಹಾಕಿದರೂ ನಾನು ಹೆದರುವುದಿಲ್ಲ
ನವದೆಹಲಿ: ಶೂಟ್ ಮಾಡಿದರೂ, ಜೈಲಿಗೆ ಹಾಕಿದರೂ ನಾನು ಹೆದರುವುದಿಲ್ಲ ಎಂದು ಬಿಜೆಪಿ ವಿರುದ್ಧ ಶಿವಸೇನಾ ಸಂಸದ ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಜಯ್ ರಾವತ್ ಮಾತನಾಡಿ, ಕೇಂದ್ರ ಸರ್ಕಾರದ ಏಜೆನ್ಸಿಗಳು ನನ್ನ ಎಲ್ಲಾ ಆಸ್ತಿಯನ್ನು ವಶಪಡಿಸಿಕೊಂಡರೂ, ನನ್ನ ಶೂಟ್ ಮಾಡಿದರೂ, ಜೈಲಿಗೆ ಕಳುಹಿಸಿದರೂ ನಾನು ಹೆದರುವುದಿಲ್ಲ. ನಾನು ನಿಜವಾದ ಶಿವ ಸೈನಿಕ. ನನಗೆ ಸಂಬಂಧಿಸಿದ 1 ರೂ. ಕಪ್ಪು ಹಣ ಸಿಕ್ಕರೂ ನನ್ನ ಸಂಪೂರ್ಣ ಆಸ್ತಿಯನ್ನು ಬಿಜೆಪಿಗೆ ದಾನ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದೂಗಳನ್ನು ಗುತ್ತಿಗೆ ಪಡೆಯಲು ಬಿಜೆಪಿಗೆ ಸಾಧ್ಯವಿಲ್ಲ: ಕೆ.ಎಂ.ಗಣೇಶ್
Advertisement
#UPDATE | Enforcement Directorate attached Shiv Sena leader Sanjay Raut’s Alibaug plot & one flat in Dadar, Mumbai in connection with the Rs 1,034 crore Patra Chawl land scam case.
— ANI (@ANI) April 5, 2022
ನನ್ನ ವಿರುದ್ಧ ಏನೇ ಷಡ್ಯಂತ್ರ ರೂಪಿಸಿದರೂ ನಾನು ಹೆದರುವುದಿಲ್ಲ. ಕೊನೆಗೂ ಸತ್ಯವೇ ಮೇಲುಗೈ ಸಾಧಿಸುತ್ತದೆ. ನಾನು ಯಾವುದಕ್ಕೂ ಹೆದರುವವನಲ್ಲ. ನನ್ನ ಆಸ್ತಿಯನ್ನು ವಶಪಡಿಸಿಕೊಳ್ಳುವುದಷ್ಟೇ ಅಲ್ಲ, ನನ್ನನ್ನು ಗುಂಡಿಕ್ಕಿ ಅಥವಾ ಜೈಲಿಗೆ ಕಳುಹಿಸಿದರೂ ನಾನು ಭಯ ಪಡುವುದಿಲ್ಲ. ಎಲ್ಲರ ವಿರುದ್ಧ ಹೋರಾಡಿ ನಾನು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಲಿಂಗ ಪಕ್ಷಪಾತ ಇದೆಯೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
Advertisement
Enforcement Directorate attached Shiv Sena leader Sanjay Raut’s property in connection with Rs 1,034 crore Patra Chawl land scam case, the agency said.
(File pic) pic.twitter.com/ocaQgh2Jnt
— ANI (@ANI) April 5, 2022
ಜಾರಿ ನಿರ್ದೇಶನಾಲಯ ಜಪ್ತಿ: ಸುಮಾರು ರೂ. 1,034 ಕೋಟಿ ರೂ. ಮೌಲ್ಯದ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಸಂಬಂಧಿಸಿದ ಕೆಲ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಇಂದು ಜಪ್ತಿ ಮಾಡಿದೆ. ಮಹಾರಾಷ್ಟ್ರದ ಅಲಿಬಾಗ್‍ನಲ್ಲಿರುವ 9 ಕೋಟಿ ರೂ. ಮೌಲ್ಯದ ಭೂಮಿ ಮತ್ತು ದಾದರ್ ಉಪನಗರದಲ್ಲಿರುವ 2 ಕೋಟಿ ರೂ. ಮೌಲ್ಯದ ಫ್ಲ್ಯಾಟ್ ಜಪ್ತಿ ಮಾಡಲಾಗಿದೆ.