ಮುಂಬೈ: ಪತ್ರಾ ಚಾವ್ಲ್ ಭೂ ಹಗರಣ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಪತ್ನಿ ವರ್ಷಾ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ಸಮನ್ಸ್ ಜಾರಿ ಮಾಡಿದೆ.
ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್ ಅವರನ್ನು ಹಣಕಾಸು ತನಿಖಾ ಸಂಸ್ಥೆ ಭಾನುವಾರ ಬಂಧಿಸಿತ್ತು. ಇದರ ಬೆನ್ನಲ್ಲೇ ಇಡಿ ಸಂಜಯ್ ರಾವತ್ ಅವರ ಪತ್ನಿಗೆ ಸಮನ್ಸ್ ಜಾರಿಗೊಳಿಸಿದೆ. ಇದನ್ನೂ ಓದಿ: ತೈವಾನ್ ಮೇಲೆ ಚೀನಾದಿಂದ ಕ್ಷಿಪಣಿ ದಾಳಿ
Advertisement
Advertisement
ಪಿಎಂಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ವರ್ಷ ರಾವತ್ ಅವರನ್ನು ಈ ವರ್ಷದ ಜನವರಿ ತಿಂಗಳಿನಲ್ಲಿ ಪ್ರಶ್ನಿಸಿತ್ತು. ಇದೀಗ ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಕರೆದಿದೆ. ಇದನ್ನೂ ಓದಿ: 750 ಶಾಲಾ ವಿದ್ಯಾರ್ಥಿನಿಯರಿಂದ ತಯಾರಾಯ್ತು ಆಜಾದಿ ಸ್ಯಾಟಲೈಟ್
Advertisement
ಸಂಜಯ್ ಕಸ್ಟಡಿ ವಿಸ್ತರಣೆ:
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ರಾವತ್ ಅವರ ಇಡಿ ಕಸ್ಟಡಿಯನ್ನು ಮುಂಬೈ ನ್ಯಾಯಾಲಯ ಆಗಸ್ಟ್ 8 ರವರೆಗೆ ವಿಸ್ತರಿಸಿದೆ. ಇಡಿ ತನಿಖೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ಹಿನ್ನೆಲೆ ನ್ಯಾಯಾಲಯ ಕಸ್ಟಡಿ ವಿಸ್ತರಣೆ ಮಾಡಿದೆ.