ಮುಂಬೈ: ಧ್ವನಿವರ್ಧಕಗಳ ವಿಚಾರವಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಕಿಡಿಕಾರಿದ್ದಾರೆ.
ಧ್ವನಿವರ್ಧಕ ಸಮಸ್ಯೆ ಕುರಿತಂತೆ ಚರ್ಚಿಸಲು ಮಹಾರಾಷ್ಟ್ರ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯನ್ನು ಬಿಜೆಪಿ ವಿರೋಧಿಸಿತ್ತು. ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಜಯ್ ರಾವತ್ ಅವರು, ಧ್ವನಿವರ್ಧಕ ವಿಚಾರವಾಗಿ ನ್ಯಾಯಾಲಯ ನೀಡಿರುವ ಆದೇಶವನ್ನು ಅನುಸರಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ರಾಜ್ಯ ಗೃಹ ಸಚಿವರು ಎಲ್ಲಾ ಪಕ್ಷಗಳನ್ನು ಸಭೆಗೆ ಕರೆದಿದ್ದರು. ಆದರೆ ಬಿಜೆಪಿ ಮಾತ್ರ ಸಭೆಗೆ ಹಾಜರಾಗುವುದನ್ನು ವಿರೋಧಿಸಿತು. ಇದರರ್ಥ ಬಿಜೆಪಿಯವರು ಧ್ವನಿವರ್ಧಕಗಳ ವಿಚಾರದಲ್ಲಿ ರಾಜಕೀಯ ಮಾಡಲು ಮತ್ತು ರಾಜ್ಯದಲ್ಲಿ ಗೊಂದಲವನ್ನು ಸೃಷ್ಟಿಸಲು ಬಯಸುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
Advertisement
Advertisement
ರಾಜ್ಯಾದ್ಯಂತ ಧ್ವನಿವರ್ಧಕ ನಿಷೇಧದ ವಿಷಯಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ವಿರೋಧ ಪಕ್ಷಗಳು ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಜೊತೆ ವಾಗ್ವಾದ ನಡೆಸುತ್ತಿವೆ. ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಲು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ ಮತ್ತು ಮೇ 4 ರಂದು ಪೊಲೀಸರಿಗೆ ಗಡುವು ನೀಡಿವೆ. ಇದನ್ನೂ ಓದಿ: ಶನಿವಾರ ವರ್ಷದ ಮೊದಲ ಸೂರ್ಯಗ್ರಹಣ- ಗ್ರಹಣದಂದೇ ಶನಿ ಅಮಾವಾಸ್ಯೆ
Advertisement
Maharashtra govt said that court order to be followed regarding loudspeakers. State Home min called all parties for the meeting but BJP opposed it. It means you want to do politics & want to create disturbance on the matter of loudspeakers in the state: Shiv Sena’s Sanjay Raut pic.twitter.com/pmpP9StPEz
— ANI (@ANI) April 29, 2022
Advertisement
ಗುರುವಾರ ಸರ್ಕಾರದ ಆದೇಶದ ಮೇರೆಗೆ ಸುಮಾರು 22,000 ಅನಧಿಕೃತ ಧ್ವನಿವರ್ಧಕಗಳನ್ನು ಧಾರ್ಮಿಕ ಸ್ಥಳಗಳಿಂದ ತೆರವುಗೊಳಿಸಲಾಗಿದೆ ಮತ್ತು 42,000ಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ಅನುಮತಿಯೊಂದಿಗೆ ಬಳಸಬಹುದು. ಆದರೆ ಆವರಣದಿಂದ ಧ್ವನಿ ಹೊರಬರಬಾರದು ಉತ್ತರಪ್ರದೇಶ ಸರ್ಕಾರ ಸೂಚಿಸಿದೆ. ಇದನ್ನೂ ಓದಿ: ಬಾಬರ್, ಔರಂಗಜೇಬ್ ಮಾನಸಿಕತೆ ಜಮೀರ್ ಅಹಮದ್‍ನಲ್ಲಿ ಜೀವಂತವಾಗಿದೆ: ಪ್ರಮೋದ್ ಮುತಾಲಿಕ್