ಬೆಳಗಾವಿ: ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿನದ್ದು ಎಂದು ಹೇಳುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ತಿರುಗೇಟು ನೀಡಿದ್ದಾರೆ.
Advertisement
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ರೋಡ್ ಪಾಲಿಟಿಕ್ಸ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾತ್ರಿ ರಾಜಕಾರಣ ಸಂಸ್ಕೃತಿ ಗೊತ್ತಿದ್ದಕ್ಕೆ ನೀವು ಎಂಎಲ್‍ಎ ಆಗಿರೋದು. ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಸತ್ಯ ಎದುರಿಸುವ ಶಕ್ತಿ ಇನ್ನೂ ಬರ್ತಿಲ್ಲ. ಎಂಎಲ್‍ಎ ಆಗುವ ಮೊದಲು ನಾನು ನಿನ್ನ ಮಗಳು ಎಂದಿದ್ದರು. ಚಾಂದ್ ತಾರೇ ತೋಡ್ ಕೇ ಲಾವೂಂಗಿ ಅಂತಾ ದೊಡ್ಡ ದೊಡ್ಡ ಕನಸು ತೋರಿಸಿದ್ರು. ಆ ಕನಸು ನನಸು ಮಾಡಿಲ್ಲದ್ದಕ್ಕೆ ಜನ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಾಕಿಸ್ತಾನ ನನಗೆ 20 ಸಾವಿರ ನೀಡಿದೆ – ತಪ್ಪೊಪ್ಪಿಕೊಂಡ ಲಷ್ಕರ್ ಉಗ್ರ
Advertisement
Advertisement
ಜನರ ಪ್ರತಿಕ್ರಿಯೆಗೆ ಭಾರತೀಯ ಜನತಾ ಪಾರ್ಟಿ ಹೆಸರು ಕೊಡ್ತಿದ್ದಾರೆ. ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿದ್ದು. ರಾತ್ರಿ ರಾಜಕೀಯ ಸಂಸ್ಕೃತಿ ಗೊತ್ತಿದೆ ನೀವು ಎಂಎಲ್‍ಎ ಆಗಿದ್ದೀರಿ. ನೀವು ಕೆಲಸ ಮಾಡಿಲ್ಲ ಎಂದು ನಾನು ಹೇಳ್ತಿಲ್ಲ. ಪ್ರತಿಯೊಬ್ಬ ಶಾಸಕರು ಸಂಸದರಿಗೆ ಕೆಲವೊಂದು ಯೋಜನೆಗಳಿದೆ. ಏನೂ ಕೆಲಸ ಮಾಡಿಲ್ಲ ಎಂದು ಹೇಳೋಕೆ ಸಾಧ್ಯವಿಲ್ಲ. ಅಭಿವೃದ್ಧಿ ಹೊಳೆ ಹರಿದಿದ್ರೆ ಈ ರೀತಿ ಬ್ಯಾನರ್ ಹಚ್ಚುತ್ತಿರಲಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ನಾಗಮಂಗಲದ ಸರ್ಕಾರಿ ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ಕೊರೊನಾ
Advertisement
ಬಿಜೆಪಿ ಈ ರೀತಿ ಹೊಲಸ್ಸು ರಾಜಕೀಯ ಮಾಡಿಲ್ಲ, ಮಾಡೋದಿಲ್ಲ. ಜನರು ಟೀಕೆ ಮಾಡೋದನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಬಿಜೆಪಿ ಮೇಲೆ ಸಿಟ್ಟು ತಗೆಯುತ್ತಿದ್ದಾರೆ. ಡೆವಲಪ್ಮೆಂಟ್ ಕ್ವೀನ್, ಮಹಾರಾಣಿ ಎಂದು ಸೆಲ್ಫ್ ಡಿಕ್ಲೇರ್ ಏನೇನೋ ಅನ್ನಲಿ ನಾನು ಮಾತನಾಡಲಿಕ್ಕೆ ಆಗಲ್ಲ. ಟೀಕೆ ಸಹಿಸಿಕೊಳ್ಳುವ ಶಕ್ತಿ ದೇವರ ಹತ್ತಿರ ಲಕ್ಷ್ಮೀ ಬೇಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.