‘ಡಬಲ್ ಇಸ್ಮಾರ್ಟ್’ ಚಿತ್ರೀಕರಣದಲ್ಲಿ ಸಂಜಯ್ ದತ್‌ಗೆ ಪೆಟ್ಟು- ಆಸ್ಪತ್ರೆಗೆ ದಾಖಲು

Public TV
2 Min Read
Sanjay Dutt 3

‘ಕೆಜಿಎಫ್ 2′ (KGF 2) ಅಧೀರ ಸಂಜಯ್ ದತ್‌ಗೆ ‘ಡಬಲ್ ಇಸ್ಮಾರ್ಟ್’ (Double Ismart) ಚಿತ್ರೀಕರಣದ ವೇಳೆ ತಲೆಗೆ ಪೆಟ್ಟಾಗಿದೆ. ಶೂಟಿಂಗ್‌ಗಾಗಿ ಥೈಲ್ಯಾಂಡ್‌ನಲ್ಲಿ ಬೀಡು ಬಿಟ್ಟಿದ್ದ ಚಿತ್ರತಂಡ. ಶೂಟಿಂಗ್ ಸಂದರ್ಭದಲ್ಲಿ ಸಂಜಯ್ ದತ್ (Sanjay Dutt) ತಲೆಗೆ ಪೆಟ್ಟಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

sanjay dutt 1

ಸಂಜಯ್ ದತ್ ಈಗ ತೆಲುಗಿನ ‘ಡಬಲ್ ಇಸ್ಮಾರ್ಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಬಿಗ್ ಬುಲ್ ಹೆಸರಿನ ವಿಲನ್ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಥೈಲ್ಯಾಂಡ್‌ನಲ್ಲಿ ನಡೆಯುತ್ತಿದೆ. ಈ ವೇಳೆ ಅವರಿಗೆ ಗಾಯ ಆಗಿದೆ ಎಂದು ವರದಿ ಆಗಿದೆ. ಖಡ್ಗದಲ್ಲಿ ಫೈಟ್ ಮಾಡುವ ದೃಶ್ಯವನ್ನು ಶೂಟ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಖಡ್ಗ ಅವರ ತಲೆಗೆ ತಾಗಿ ಗಾಯ ಆಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಗಾಯಕ್ಕೆ ಹೊಲಿಗೆ ಹಾಕಿಸಿಕೊಂಡು ಅವರು ಮರಳಿ ಸೆಟ್‌ಗೆ ಆಗಮಿಸಿದ್ದಾರೆ. ಬಳಿಕ ತಮ್ಮ ಭಾಗದ ಶೂಟಿಂಗ್‌ನ ಅವರು ಪೂರ್ಣಗೊಳಿಸಿ ಕೊಟ್ಟಿದ್ದಾರೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಇದನ್ನೂ ಓದಿ:ಶಕ್ತಿಧಾಮದಲ್ಲಿ ಮಕ್ಕಳ ಜೊತೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಶಿವಣ್ಣ

Sanjay Dutt

ಸಂಜಯ್ ದತ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ‘ಕೆಜಿಎಫ್ 2’ (KGF 2) ಚಿತ್ರದಲ್ಲಿ ಅಧೀರನ ಪಾತ್ರ ಮಾಡುವ ಮೂಲಕ ಅವರು ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದರು. ಹೀಗಾಗಿ, ಅವರ ಬಗ್ಗೆ ಅಪ್‌ಡೇಟ್ ತಿಳಿದುಕೊಳ್ಳೋಕೆ ಫ್ಯಾನ್ಸ್ ಎದುರು ನೋಡ್ತಿರುತ್ತಾರೆ. ಈಗ ಅವರು ವಿದೇಶದಲ್ಲಿ ಗಾಯಗೊಂಡಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅವರ ಬೇಗ ಚೇತರಿಸಿಕೊಳ್ಳಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

ಸಂಜಯ್ ದತ್ ಗಾಯಗೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದ್ದು ಇದೇ ಮೊದಲೇನು ಅಲ್ಲ. ಇತ್ತೀಚೆಗೆ ಅವರು ‘ಕೆಡಿ’ (KD) ಸಿನಿಮಾದ ಶೂಟ್‌ನಲ್ಲಿ ಪೆಟ್ಟು ಮಾಡಿಕೊಂಡರು ಎಂದು ಹೇಳಲಾಗಿತ್ತು. ನನಗೆ ಗಾಯ ಆಗಿದೆ ಎಂಬ ಸುದ್ದಿ ಆಧಾರ ರಹಿತ ಎಂದು ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದರು. ಸದ್ಯ ಈಗ ಹಬ್ಬಿರುವ ವದಂತಿಗೆ ಅವರ ಕಡೆಯಿಂದಲೇ ಸ್ಪಷ್ಟನೆ ಬರಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article