ಆರ್‌ಸಿಬಿ ಮುಖ್ಯ ಕೋಚ್ ಆಗಿ ಸಂಜಯ್‌ ಬಂಗಾರ್‌ ಆಯ್ಕೆ

Public TV
1 Min Read
Sanjay Bangar

ಬೆಂಗಳೂರು: ಟೀಂ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.

ಮೈಕ್ ಹೆಸ್ಸನ್ ಅವರ ಸ್ಥಾನವನ್ನು ಸಂಜಯ್‌ ಬಂಗಾರ್ ತುಂಬಲಿದ್ದಾರೆ. ಹೆಸ್ಸನ್‌ ಅವರು ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿ ಜೊತೆಗಿರಲಿದ್ದಾರೆ. ಆಸ್ಟ್ರೇಲಿಯಾದ ಸೈಮನ್‌ ಕ್ಯಾಟಿಚ್‌ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಮೈಕ್‌ ಹೆಸ್ಸನ್‌ ತುಂಬಿದ್ದರು.

ಸಂಜಯ್ ಅವರಿಗೆ ಅಭಿನಂದನೆಗಳು. ಕಠಿಣ ಮತ್ತು ದೃಢವಾದ ಆಯ್ಕೆ ವಿಧಾನವನ್ನು ಅನುಸರಿಸಿ ಸಂಜಯ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಮುಖ್ಯಸ್ಥ ಪ್ರಥಮೇಶ್ ಮಿಶ್ರಾ ಹೇಳಿದ್ದಾರೆ.

ತಂಡದ ಸಾಮರ್ಥ್ಯವನ್ನು ಹೆಚ್ಚಿಸಲು ಸಂಜಯ್‌ ಬಂಗಾರ್‌ ಅವರ ಅನುಭವ ನೆರವಾಗಲಿದೆ ಎಂಬ ವಿಶ್ವಾಸವಿದೆ. ಈ ಆಯ್ಕೆಗೆ ಮತ್ತು ತಮ್ಮ ಹೊಸ ಅಧ್ಯಾಯ ಪ್ರಾರಂಭಿಸುತ್ತಿರುವ ಸಂಜಯ್‌ ಬಂಗಾರ್‌ ಅವರಿಗೆ ಶುಭ ಕೋರುತ್ತೇನೆ ಎಂದಿದ್ದಾರೆ.

RCB 1

ಆರ್‌ಸಿಬಿಯಂಥ ಫ್ರಾಂಚೈಸಿಗೆ ಮುಖ್ಯ ಕೋಚ್‌ ಆಗಿ ಸೇವೆ ಸಲ್ಲಿಸುವುದು ದೊಡ್ಡ ಅವಕಾಶ ಮತ್ತು ಅದೊಂದು ಗೌರವ. ಐಪಿಎಲ್‌ ಹರಾಜು ಹರಾಜು ಮತ್ತು ಅದರ ನಂತರದ ಋತುವಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ ಎಂದು ಬಂಗಾರ್‌ ಹೇಳಿದ್ದಾರೆ.

ಯುಎಇಯಲ್ಲಿ ನಡೆದ ಐಪಿಎಲ್‌ ಎಲಿಮಿನೇಟರ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಸೋತಿರುವ ಆರ್‌ಸಿಬಿ ಈಗ ಹೊಸ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ವಿರಾಟ್‌ ಕೊಹ್ಲಿ ಈಗಾಗಲೇ ನಾಯಕ ಸ್ಥಾನನದಿಂದ ಕೆಳಗೆ ಇಳಿದಿದ್ದಾರೆ. ಇದನ್ನೂ ಓದಿ: ಅಂತ್ಯವಾಯಿತು ಟೀಂ ಇಂಡಿಯಾದಲ್ಲಿ ಕೊಹ್ಲಿ, ಶಾಸ್ತ್ರಿ ಯುಗ

RCB

ಸಂಜಯ್‌ ಬಂಗಾರ್‌ ಭಾರತದ ಪರ 12 ಟೆಸ್ಟ್‌ ಮತ್ತು 15 ಏಕದಿನ ಪಂದ್ಯವನ್ನು ಆಡಿದ್ದಾರೆ. 2008 ಮತ್ತು 2009ರ ಐಪಿಎಲ್‌ನಲ್ಲಿ ಡೆಕ್ಕನ್‌ ಚಾರ್ಜರ್ಸ್‌ ಮತ್ತು ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಪರ ಆಡಿದ್ದಾರೆ. 2013ರಲ್ಲಿ ನಿವೃತ್ತರಾದಾಗ ಎಲ್ಲ ಮಾದರಿಯಲ್ಲಿ ಒಟ್ಟು 33 ಟಿ20 ಪಂದ್ಯಗಳನ್ನು ಆಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *