ಕನ್ನಡದ ಮತ್ತೋರ್ವ ನಟಿ ಸಂಜನಾ ಆನಂದ್ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ‘ನೇನು ಮೀಕು ಬಾಗ ಕಾವಲ್ಸಿನವಾಡಿನಿ’ ಚಿತ್ರದಲ್ಲಿ ನಟಿಸಿದ್ದ ಸಂಜನಾ ಈಗ ಮತ್ತೊಂದು ತೆಲುಗು ಚಿತ್ರಕ್ಕೆ ಓಕೆ ಎಂದಿದ್ದಾರೆ. ಸತ್ಯದೇವ್ ನಟನೆಯ ‘ಫುಲ್ ಬಾಟಲ್’ ಚಿತ್ರದಲ್ಲಿ (Full Bottle) ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.