ಬೆಂಗಳೂರು: ಸೋಮವಾರ ಬೆಳಗ್ಗೆ ಸಂಘ ಪರಿವಾರ ಮತ್ತು ಬಿಜೆಪಿ (BJP) ನಾಯಕರ ಬೈಠಕ್ ನಡೆಯಲಿದೆ.
ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಬೈಠಕ್ ಹಾಜರಾಗುವಂತೆ ಆರ್‌ಎಸ್‌ಎಸ್ (RSS) ಹಿನ್ನೆಲೆಯ ಬಿಜೆಪಿ ನಾಯಕರಿಗೆ ಬುಲಾವ್ ನೀಡಲಾಗಿದೆ. ಇದನ್ನೂ ಓದಿ: ಮದುವೆ ಆಗ್ತೀನಿ, ಹೊಸ ಕಾರು ಬೇಕು ಅಂತಾ ಲೆಟರ್ ಕೊಟ್ಟಿದ್ದ: ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ವ್ಯಂಗ್ಯ
ಇತ್ತೀಚಿನ ರಾಜ್ಯ ವಿದ್ಯಮಾನಗಳ ಬಗ್ಗೆ ಮಹತ್ವದ ಚರ್ಚೆ, ಪಥ ಸಂಚಲನ ಜಟಾಪಟಿ, ಸಂಘದ ವಿರುದ್ಧ ಕೈ ನಾಯಕರ ಹೇಳಿಕೆಗಳು, ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿಯಿಂದ ಪರಿಣಾಮಕಾರಿ ಹೋರಾಟ ನಡೆಯದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.
ಕುರ್ಚಿ ಕಲಹ ಜೋರಾಗುವ ಹಿನ್ನೆಲೆಯಲ್ಲಿ ಜನಾಂದೋಲನ, ಜನಾಭಿಪ್ರಾಯ ರೂಪಿಸುವ ಬಗ್ಗೆ ಬಿಜೆಪಿಗೆ ಸೂಚನೆ ಸಿಗುವ ಸಾಧ್ಯತೆಯಿದೆ.

