ದೊಡ್ಮನೆಯಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದಿರೋದು ಏನೆಂದರೆ ಯಾರು ಯಾರನ್ನ ಲವ್ ಮಾಡ್ತಿದ್ದಾರೆ ಎಂಬುದೇ ನೋಡುಗರಿಗೂ ಕನ್ಫೂಸ್ ಆಗ್ತಿದೆ. ಸಂಗೀತಾ(Sangeetha Sringeri) ಜೊತೆಯಿದ್ದ ಕಾರ್ತಿಕ್ ಈಗ ನಮ್ರತಾ (Namratha Gowda) ಹಿಂದೆ ಸುತ್ತುತ್ತಿದ್ದಾರೆ. ಎರಡು ದೋಣಿ ಮೇಲೆ ಕಾರ್ತಿಕ್ ಪಯಣಿಸುತ್ತಿದ್ದಾರೆ. ಮಾತಿನ ಭರದಲ್ಲಿ ಸಂಗೀತಾ ಕೆಮಿಸ್ಟ್ರಿ, ನಮ್ರತಾ ಮ್ಯಾತಮೆಟಿಕ್ಸ್ ಎಂದು ಕಾರ್ತಿಕ್ (Karthik Mahesh) ಮುಗುಳು ನಗೆ ಬೀರಿದ್ದಾರೆ. ಮೂವರ ನಡುವೆ ಏನಾದರೂ ಟ್ರಯಾಂಗಲ್ ಲವ್ ಕಹಾನಿ ನಡೀತಿದ್ಯಾ ಅಂತ ಪ್ರೇಕ್ಷಕರು ಊಹೆ ಮಾಡ್ತಿದ್ದಾರೆ.
ಹೌದು.. ಬಿಗ್ ಬಾಸ್ ಮನೆಗೆ(Bigg Boss) ಕಾಲಿಟ್ಟ ದಿನದಿಂದ ಚಾರ್ಲಿ ಸುಂದರಿ ಮೇಲೆ ಕಾರ್ತಿಕ್‌ಗೆ ಪ್ಯಾರ್ ಆಗಿತ್ತು. ಈಗ ಸಂಗೀತಾ ಜೊತೆಯಲ್ಲಿರುವಾಗಲೇ ನಮ್ರತಾ ಹಿಂದೆ ಕಾರ್ತಿಕ್ ಓಡಾಟ ಜೋರಾಗಿದೆ. ಇಂದು ಡ್ರೋನ್ ಬಳಿ ಕಾರ್ತಿಕ್ ಮಾತನಾಡುವಾಗ ಸಂಗೀತಾ ನನಗೆ ಕೆಮಿಸ್ಟ್ರಿ ಇದ್ದ ಹಾಗೆ, ನಮ್ರತಾ ಮ್ಯಾತಮೆಟಿಕ್ಸ್ ಇದ್ದಂತೆ ಎಂದು ನಮ್ರತಾ ಮುಂದೆಯೇ ಮಾತನಾಡಿದ್ದಾರೆ.
ನಾನು ಮ್ಯಾತಮೆಟಿಕ್ಸ್ ಆ ಎಂದು ನಮ್ರತಾ ಹುಸಿಮುನಿಸು ತೋರಿಸುತ್ತಾ ಹೋಗಿದ್ದಾರೆ. ನಮ್ರತಾರನ್ನ ಸಮಾಧಾನಿಸಲು ಕಾರ್ತಿಕ್ ಅವರ ಹಿಂದೆ ಹಿಂದೆ ಸುತ್ತಿದ್ದಾರೆ. ಇತ್ತ ನಮ್ರತಾಗೆ ಕಾಳು ಹಾಕ್ತಿದ್ದ ಸ್ನೇಹಿತ್ ಕೂಡ ಕಾರ್ತಿಕ್ ಕಳ್ಳಾಟ ನೋಡಿ ಗುಪ್ ಚುಪ್ ಆಗಿ ಬಿಟ್ಟಿದ್ದಾರೆ. ಇದನ್ನೂ ಓದಿ:Salaar: ಪ್ರಭಾಸ್, ಪ್ರಶಾಂತ್ ನೀಲ್ ಪಡೆ ಸೇರಿಕೊಂಡ ವಸಿಷ್ಠ ಸಿಂಹ
ಮನೆಮಂದಿಗೂ, ಪ್ರೇಕ್ಷಕರಿಗೂ ಸಂಗೀತಾ, ಕಾರ್ತಿಕ್, ನಮ್ರತಾ ಈ ಮೂವರ ಕಥೆ ಏನಪ್ಪಾ ಅಂತಾ ಬಾಯಿ ಮೇಲೆ ಬೆರಳು ಇಟ್ಕೋಂಡಿದ್ದಾರೆ. ಇನ್ನೂ 10 ಸೀಸನ್ ಬಂದ್ರೂ ಕೂಡ ದಿವ್ಯಾ ಉರುಡುಗ ಮತ್ತು ಅರವಿಂದ್ ಹಾಗೇ ಚೆಂದದ ಜೋಡಿ ಸಿಗೋದಿಲ್ಲ ಬಿಡಿ ಅಂತ ಫ್ಯಾನ್ಸ್ ಮಾತನಾಡಿಕೊಳ್ತಿದ್ದಾರೆ. ಅವರನ್ನ ಬಿಟ್, ಇವರನ್ನ ಬಿಟ್ ಇನ್ನೂ ಯಾರೋ ಅನ್ನೋ ಇವರ ಪ್ರೇಮ್ ಕಹಾನಿಗೆ ಹೊಸ ಟ್ವಿಸ್ಟ್ ಸಿಗುತ್ತಾ ಕಾದುನೋಡಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]