– ಶಿಗ್ಗಾಂವಿಯಲ್ಲಿ ಯಾರಿಗೆ ಕಾಂಗ್ರೆಸ್ ಟಿಕೆಟ್?
ಬಳ್ಳಾರಿ/ಹಾವೇರಿ: ಗಣಿನಾಡು ಬಳ್ಳಾರಿಯ (Ballari) ಸಂಡೂರು ವಿಧಾನ ಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗಿದೆ. ಈಗಾಗಲೇ ತನ್ನ ಅಭ್ಯರ್ಥಿಯನ್ನ ಘೋಷಣೆ ಮಾಡಿರುವ ಬಿಜೆಪಿ (BJP) ಅಧಿಕೃತವಾಗಿ ಪ್ರಚಾರ ಮಾಡಲು ಶುರುಮಾಡಿದೆ. ಅಭ್ಯರ್ಥಿ ಬಂಗಾರು ಹನುಮಂತು ಜೊತೆ ಜನಾರ್ದನ ರೆಡ್ಡಿ ಪ್ರಚಾರದ ಕಣಕ್ಕಿಳಿದ್ದಿದ್ದಾರೆ. ಈ ಮಧ್ಯೆ ಬಿಜೆಪಿ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟುವಂತೆ ಕಾಣುತ್ತಿದೆ.
Advertisement
ಸಂಡೂರಿನಲ್ಲಿ (Sandur) ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿದ್ದ ಕೆಎಸ್ ದಿವಾಕರ್‌ಗೆ (K S Divakar) ಕೊನೆಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿದೆ. ಕೆಆರ್‌ಪಿಪಿ ಪಕ್ಷ ಸೇರಿ ಚುನಾವಣೆಗೆ ನಿಂತು 31,000 ಮತಗಳನ್ನ ಪಡೆದು ಪರಭಾವಗೊಂಡಿದ್ದರು. ಚುನಾವಣೆಯಲ್ಲಿ ಸೋತರೂ ಸಂಡೂರು ಕ್ಷೇತ್ರದಲ್ಲಿ ದಿವಾಕರ್ ಸಕ್ರಿಯವಾಗಿದ್ದರು. ಇದನ್ನೂ ಓದಿ: ಭಾರೀ ಮಳೆ; ಬೆಂಗಳೂರಿನ ಶಾಲೆಗಳಿಗೆ ಇಂದು ರಜೆ ಘೋಷಣೆ
Advertisement
Advertisement
ಜನಾರ್ದನ ರೆಡ್ಡಿ ಬಿಜೆಪಿ ಪಕ್ಷ ಸೇರಿದ ಬಳಿಕ ಕೆಎಸ್ ದಿವಾಕರ್ ಕೂಡ ಬಿಜೆಪಿಗೆ ಸೇರಿದರು. ಬಳಿಕ ಸಂಡೂರಲ್ಲಿ ತಾನೆ ಮುಂದಿನ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಕೂಡ ಮಾಡಿಕೊಂಡಿದ್ದರು. ಈ ಬಾರಿಯು ಕೊನೆ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿ ದಿವಾಕರ್ ಅಸಮಾಧಾನಗೊಂಡಿದ್ದಾರೆ. ಜನಾರ್ದನ ರೆಡ್ಡಿ ಮನೆಯಲ್ಲಿ ಸಂಧಾನ ಸಭೆ ಮಾಡಿದರೂ ದಿವಾಕರ್ ಅಸಮಾಧಾನಗೊಂಡಿದ್ದಾರೆ. ನನ್ನ ವಿಚಾರದಲ್ಲಿ ಡಬಲ್ ಗೇಮ್ ಮಾಡಿದರು ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
ಶಿಗ್ಗಾಂವಿ (Shiggoan) ಕ್ಷೇತ್ರದಲ್ಲಿ ತಮ್ಮ ಪುತ್ರ ಭರತ್‌ರನ್ನು ಕಣಕ್ಕಿಳಿಸಿ ಕಾಂಗ್ರೆಸ್‌ಗೆ ಸಂಸದ ಬೊಮ್ಮಾಯಿ ತೊಡೆ ತಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ಸ್ವಲ್ಪ ವಿಚಲಿತವಾಗಿರುವ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಪೇಚಾಡುವಂತಾಗಿದೆ. ಸಮರ್ಥ ಹಾಗೂ ಒಮ್ಮತದ ಅಭ್ಯರ್ಥಿ ಆಯ್ಕೆ ಆಡಳಿತಾರೂಢ ಕಾಂಗ್ರೆಸ್‌ಗೆ ಸವಾಲಾಗಿದೆ. ಕಾಂಗ್ರೆಸ್ ಟಿಕೆಟ್ ಪಡೆಯಲು ಲಿಂಗಾಯತ ಹಾಗೂ ಮುಸ್ಲಿಂ ಸಮಾಜದ ಟಿಕೆಟ್ ಆಕಾಂಕ್ಷಿಗಳ ನಡುವೆ ಬಹುದೊಡ್ಡ ಪೈಪೋಟಿ ನಡೆದಿದೆ. ಸಿಎಂ ಸಿದ್ದರಾಮಯ್ಯ ( CM Siddaramaiah) ಹಾಗೂ ಡಿಕೆಶಿ ಭೇಟಿಯಾಗಿ ಟಿಕೆಟ್‌ಗಾಗಿ ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ಆದರೆ ಅಭ್ಯರ್ಥಿ ಆಯ್ಕೆ ಮಾತ್ರ ಇನ್ನೂ ಫೈನಲ್ ಆಗಿಲ್ಲ. ಇದನ್ನೂ ಓದಿ: ಚನ್ನಪಟ್ಟಣಕ್ಕೆ ಡಿಕೆ ಸುರೇಶ್, ಸಂಡೂರಿಗೆ ಅನ್ನಪೂರ್ಣ – ಶೀಘ್ರವೇ ಅಧಿಕೃತ ಪ್ರಕಟಣೆ ಸಾಧ್ಯತೆ
ಬಿಜೆಪಿ ಲಿಂಗಾಯತರಿಗೆ ಮತ್ತೆ ಮಣೆ ಹಾಕಿ ಭರತ್ ಬೊಮ್ಮಾಯಿಯನ್ನು (Bharath Bommai) ಕಣಕ್ಕಿಳಿಸಿದೆ. ಹೀಗಾಗಿ ಲಿಂಗಾಯತರಿಗೇ ಆದ್ಯತೆ ನೀಡಿ ಎಂಬ ಆಗ್ರಹ ಕಾಂಗ್ರೆಸ್‌ನಲ್ಲಿ ಕೇಳಿ ಬಂದಿದೆ. ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಹಾಗೂ ಯಾಸೀರ್ ಖಾನ್ ಪಠಾಣ್ ಟಿಕೆಟ್‌ಗಾಗಿ ಭಾರಿ ಲಾಬಿ ನಡೆಸಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿರುವ ವಿನೋದ್ ಅಸೂಟಿ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಇಂದು ಸಂಜೆ ಅಥವಾ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂದಿನ 3 ಗಂಟೆ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ – 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್