ಬಳ್ಳಾರಿ: ಸಂಡೂರು ಉಪಚುನಾವಣೆಯ (Sandur By Election) ಬಿಜೆಪಿ (BJP) ಅಭ್ಯರ್ಥಿ ಬಂಗಾರು ಹನುಮಂತು (Bangaru Hanumanthu) ಅವರು ತನ್ನ ಬಳಿ ಒಟ್ಟು ಮೌಲ್ಯ 2 ಕೋಟಿ ರೂ.ಮೌಲ್ಯದ 2.5 ಕೆ.ಜಿ ಚಿನ್ನಾಭರಣ ಮತ್ತು 20 ಲಕ್ಷ ರೂ. ಮೌಲ್ಯದ 25 ಕೆಜಿ ಬೆಳ್ಳಿ ವಸ್ತುಗಳಿಗೆ ಇವೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಹನುಮಂತ ಪತ್ನಿ ಬಂಗಾರು ರೂಪಶ್ರೀ ಬಳಿ 500 ಗ್ರಾಂ ಚಿನ್ನಾಭರಣವಿದ್ದು ಅದರ ಬೆಲೆ 40 ಲಕ್ಷ ರೂ. ಎಂದು ಉಲ್ಲೇಖಿಸಲಾಗಿದೆ. ಅವರು 15 ಕೆ.ಜಿ ಬೆಳ್ಳಿಯ ವಸ್ತುಗಳನ್ನೂ ಹೊಂದಿದ್ದು ಅದರ ಬೆಲೆ 12 ಲಕ್ಷ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಡೂರು ಉಪಚುನಾವಣೆ| ಬಿಜೆಪಿ ಟೆಕೆಟ್ ಪಡೆದ ಬಂಗಾರು ಹನುಮಂತು ಯಾರು?
ಬಿಎ, ಬಿಎಡ್ ಓದಿರುವ ಹನುಮಂತು ಅವರಿಗೆ ಈಗ 42 ವರ್ಷ. ಒಟ್ಟು 7,58,64,019 ರೂ. ಮೌಲ್ಯದ ಚರಾಸ್ತಿ, 11,00,00,000 ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಪತ್ನಿ ರೂಪಶ್ರೀ 1,69,82,571 ರೂ. ಮೌಲ್ಯದ ಚರಾಸ್ತಿ, 25,600,000 ರೂ. ಮೌಲ್ಯದ ರಾಸ್ತಿಯನ್ನು ಹೊಂದಿದ್ದಾರೆ.
ಸ್ಟೋನ್ ಕ್ರಷರ್, ಪೌಲ್ಟ್ರಿ ಫಾರಂ ಜೊತೆ ಮಂಗಳೂರಿನಲ್ಲಿ 1,07,38,000 ರೂ. ಮೌಲ್ಯದ ರೆಸಾರ್ಟ್ ಹೊಂದಿದ್ದಾರೆ. ತನ್ನ ಬಳಿ ಫಾರ್ಚುನಾರ್ ಕಾರು, ಬುಲೆಟ್ ಬೈಕ್, ಟ್ರ್ಯಾಕ್ಟರ್ ಟ್ರೈಲರ್, ಒಂದು ಜೆಸಿಬಿ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂಡೂರು ಉಪಚುನಾವಣೆ: ಬಂಗಾರು ಹನುಮಂತು ನಾಮಪತ್ರ ಸಲ್ಲಿಕೆ
ಇನ್ನು ಬಂಗಾರು ಹನುಮಂtu ಅವರಿಗೆ 28 ಕಡೆಗಳಲ್ಲಿ ಒಟ್ಟು 54.11 ಎಕರೆ ಕೃಷಿ ಭೂಮಿ ಇದೆ. ಇದೆಲ್ಲವೂ ಸ್ವಯಾರ್ಜಿತ ಎಂದು ಉಲ್ಲೇಖಿಸಿದ್ದಾರೆ.
ಪತ್ನಿಯ ಬಳಿ ಒಟ್ಟು 27.27 ಎಕರೆ ಜಮೀನಿದ್ದು, ಇದೆಲ್ಲವೂ ದಾನವಾಗಿ ಬಂದಿದೆ ಎಂದು ತಿಳಿಸಿದ್ದಾರೆ. ಬಂಗಾರು ಹನುಮಂತು ಅವರು ತನ್ನ ಬಳಿ ಪ್ರಸ್ತುತ ಒಟ್ಟು 4 ಕೋಟಿ ರೂ. ಮೌಲ್ಯದ ಭೂಮಿ ಇದೆ ಹೇಳಿದ್ದಾರೆ.
ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಭಾಗದಲ್ಲಿ ಒಟ್ಟು 34 ವಸತಿ ಕಟ್ಟಡಗಳನ್ನು ಹೊಂದಿದ್ದಾರೆ. ಇವೆಲ್ಲವುಗಳ ಮೇಲಿನ ಹೂಡಿಕೆ ಸೇರಿದಂತೆ ಒಟ್ಟು ಮೌಲ್ಯ 11 ಕೋಟಿ ರೂ. ಆಗಿದೆ.
ಬಂಗಾರು ಹನುಮಂತ ಅವರಿಗೆ 2,54,83,569 ರೂ. ಸಾಲ ಮತ್ತು ಹೊಣೆಗಾರಿಕೆ ಇದ್ದರೆ ಪತಿಯದ್ದು 1,35,04,660 ಆಗಿದೆ.