ಕಠ್ಮಂಡು: ನೇಪಾಳದ (Nepal) ನೆಲದಲ್ಲಿ ಕ್ರಿಕೆಟ್ (Cricket) ಬೆಳೆಸಿ ದೇಶದ ಕೀರ್ತಿ ಹೆಚ್ಚಿಸಿದ್ದ ಕ್ರಿಕೆಟಿಗ ಸಂದೀಪ್ ಲಮಿಚಾನೆ (24) (Sandeep Lamichhane) ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
17 ವರ್ಷದ ಯುವತಿಯ ಅತ್ಯಾಚಾರ ಪ್ರಕರಣದಲ್ಲಿ 2023ರ ಅಕ್ಟೋಬರ್‍ನಲ್ಲಿ ಅವರನ್ನು ಬಂಧಿಸಲಾಗಿತ್ತು. ಇದೀಗ ಈ ಪ್ರಕರಣ ಸಾಬೀತಾದ ಹಿನ್ನೆಲೆ ಕಠ್ಮಂಡು ಜಿಲ್ಲಾ ನ್ಯಾಯಾಲಯ (Court) 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ 3 ಲಕ್ಷ ರೂ. ದಂಡ ವಿಧಿಸಿದ್ದು, 2 ಲಕ್ಷ ರೂ.ಗಳನ್ನು ಸಂತ್ರಸ್ಥೆಗೆ ಪರಿಹಾರ ನೀಡುವಂತೆ ಆದೇಶಿಸಿದೆ. 2022ರ ಆಗಸ್ಟ್‌ನಲ್ಲಿ ಕಠ್ಮುಂಡುವಿನ ಹೋಟೆಲ್ ಒಂದರಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು 18 ವರ್ಷದ ಯುವತಿಯೊಬ್ಬಳು ಸಂದೀಪ್ ಮಿಚಾನೆ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: ಮೈಲುಗಲ್ಲು ಸಾಧಿಸುವತ್ತ ಹಿಟ್‌ಮ್ಯಾನ್ – ಕೊಹ್ಲಿಯನ್ನ ಹಿಂದಿಕ್ಕಿ ನಂ.1 ಪಟ್ಟಕ್ಕೇರುತ್ತಾರಾ ರೋಹಿತ್?
Advertisement
ಇದೀಗ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.
Advertisement
Advertisement
ಆರೋಪಗಳ ಹೊರತಾಗಿಯೂ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಅವರು ತಮ್ಮ ತಂಡಕ್ಕಾಗಿ ಕ್ರಿಕೆಟ್ ಆಡುವುದನ್ನು ಮುಂದುವರೆಸಿದ್ದರು. ಕಳೆದ ನವೆಂಬರ್‍ನಲ್ಲಿ ನಡೆದ ಟಿ20 ಏಷ್ಯಾ ಫೈನಲ್‍ನಲ್ಲಿ ಒಮಾನ್ ವಿರುದ್ಧ ನೇಪಾಳ ಪರ ಕೊನೆ ಬಾರಿಗೆ ಆಡಿದ್ದರು. ಇದೀಗ 2023ರ ಡಿಸೆಂಬರ್‍ನಲ್ಲಿ ಆರೋಪ ಸಾಬೀತಾಗಿತ್ತು. ಇದೀಗ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟ ಮಾಡಿದೆ.
Advertisement
ನೇಪಾಳದಲ್ಲಿ ಕ್ರಿಕೆಟ್‍ನ್ನು ಪೋಷಿಸಿದ್ದ ಸಂದೀಪ್ ಲಮಿಚಾನೆ, ಏಕದಿನ ಮತ್ತು ಟಿ20 ಕ್ರಿಕೆಟ್‍ನಲ್ಲಿ ತಮ್ಮ ದೇಶದ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಐಪಿಎಲ್‍ನಲ್ಲಿ 2018-20ರ ಅವಧಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇದನ್ನೂ ಓದಿ: ಅರ್ಜುನ ಪ್ರಶಸ್ತಿ ಪಡೆದ ಬೆಂಕಿ ಬೌಲರ್ ಮೊಹಮ್ಮದ್ ಶಮಿ – ಇನ್ಯಾರಿಗೆಲ್ಲಾ ಸಿಕ್ತು ಪ್ರಶಸ್ತಿ?