ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಿಗ್ ಅಪ್‍ಡೇಟ್ ಸಿಕ್ಕಿದೆ. ಕೆಜಿಎಫ್ ಸಿನಿಮಾದ ಬಳಿಕ ರೆಡಿಯಾಗಿರುವ ಸಿನಿಮಾ (Toxic) ಟಾಕ್ಸಿಕ್. 2026ರ ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿರುವ ಸಿನಿಮಾ. ಯಶ್ (Yash) ಹಾಗೂ ಗೀತು ಮೋಹನ್‍ದಾಸ್ ಕಥೆ ಬರೆದು, ಗೀತು ಮೋಹನ್ ದಾಸ್ ನಿರ್ದೇಶನ ಮಾಡಿರುವ ಟಾಕ್ಸಿಕ್ ಸಿನಿಮಾ ಭಾರೀ ನಿರೀಕ್ಷೆಯನ್ನ ಹುಟ್ಟುಹಾಕಿದೆ.
ಅಭಿಮಾನಿಗಳು ಸಿನಿಮಾದ ರಿಲೀಸ್‍ಗೆ ಕೌಂಟ್‍ಡೌನ್ ಮಾಡುತ್ತಿರುವ ಬೆನ್ನಲ್ಲೇ ಟಾಕ್ಸಿಕ್ ಚಿತ್ರತಂಡದಿಂದ ಭರ್ಜರಿ ಅಪ್‍ಡೇಟ್ ಸಿಕ್ಕಿದೆ. ಯಶ್ ಅವರ ಹೊಸ ಲುಕ್‍ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ರಕ್ತಸಿಕ್ತ ದೇಹ, ಬೆನ್ನಮೇಲೆ ವಿಭಿನ್ನ ಟ್ಯಾಟೂ, ಎದುರಾಳಿಗಳ ಜೊತೆ ಸೆಣಸಾಡಿದ ರೀತಿ ಬಿಂಬಿತವಾದ ಯಶ್ ಲುಕ್‍ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದರ ಜೊತೆಗೆ ಸಿನಿಮಾ ತೆರೆಗೆ ಬರೋಕೆ ಭರ್ತಿ 100 ದಿನಗಳು ಬಾಕಿ ಎಂದು ನೆನೆಪಿಸಿದೆ ಚಿತ್ರತಂಡ. ಇದನ್ನೂ ಓದಿ: ಸರ್ಕಾರಿ ಶಾಲೆ-H8 ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ ಗಿಲ್ಲಿ ತಂದೆ ತಾಯಿ
ಟಾಕ್ಸಿಕ್ ಸಿನಿಮಾ ತಂಡದಿಂದ ಯಶ್ ಅವರ ಹುಟ್ಟುಹಬ್ಬದ ವಿಶೇಷ ಸ್ಪೆಷಲ್ ಗಿಫ್ಟ್ ಸಿಕ್ಕಿತ್ತು. ಈ ಬಾರಿ 2026ರ ಜನವರಿ 8ರಂದು ರಾಕಿಭಾಯ್ ಹುಟ್ಟುಹಬ್ಬವಿದೆ. ಹೀಗಾಗಿ ಹುಟ್ಟುಹಬ್ಬಕ್ಕೆ ಏನಾದ್ರೂ ಫ್ಯಾನ್ಸ್ ಖುಷಿಪಡುವ ರೀತಿಯಲ್ಲಿ ಭರ್ಜರಿ ಗಿಫ್ಟ್ ಸಿಗಲಿದ್ಯಾ ಅನ್ನುವ ನಿರೀಕ್ಷೆಗಳು ಜಾಸ್ತಿ ಆಗಿವೆ. ಆ ಬಗ್ಗೆ ಇನ್ನೂ ಯಾವುದೇ ಅಪ್‍ಡೇಟ್ ಸಿಕ್ಕಿಲ್ಲ. ಸದ್ಯಕ್ಕೆ 2026ರ ಮಾರ್ಚ್ 19ಕ್ಕೆ ನಾನು ಬರ್ತಿದ್ದೀನಿ ಅಂತಾ ರಾಕಿಂಗ್‍ಸ್ಟಾರ್ ಸಂದೇಶ ರವಾನಿಸಿದ್ದಾರೆ. ಇನ್ನು ಈ ಸಿನಿಮಾಗೆ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ: ಗಿಲ್ಲಿಯನ್ನೇ ನಾಮಿನೇಟ್ ಮಾಡಿದ ‘ಕಾವು’; ತಾರಕಕ್ಕೇರಿದ ರಜತ್-ಧ್ರುವಂತ್ ಜಗಳ

