Bengaluru CityCinemaDistrictsKarnatakaLatestMain PostSandalwoodSouth cinema

ಪಟಾಕ ಪೋರಿ ನಭಾ ಮಸ್ತ್ ಮಸ್ತ್ ಫೋಟೋಶೂಟ್

ಸ್ಯಾಂಡಲ್‌ವುಡ್‌ಗೆ `ವಜ್ರಕಾಯ’ ಚಿತ್ರದ ಮೂಲಕ ಪರಿಚಿತರಾದ ನಟಿ ನಭಾ ನಟೇಶ್ ಸದ್ಯ ಟಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. `ಇಸ್ಮಾರ್ಟ್ ಶಂಕರ್’ ಚಿತ್ರದಿಂದ ಭರ್ಜರಿ ಬ್ರೇಕ್ ಸಿಕ್ಕಿದ ಮೇಲೆ ಸಾಲು ಸಾಲು ತೆಲುಗು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಚೆಂದದ ಫೋಟೋಶೂಟ್‌ನಿಂದ ಸಿನಿರಸಿಕರನ್ನ ಇಂಪ್ರೇಸ್ ಮಾಡ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈಗೇನೇ ಇದ್ರು ಪಟಾಕ ಪೋರಿ ನಭಾ ಅವರದ್ದೇ ಸುದ್ದಿ. ಹಾಟ್ ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಆರೆಂಜ್ ಕಲರ್ ಗರ‍್ರಾದಲ್ಲಿ ನಟಿ ನಭಾ ಮಿರ ಮಿರ ಅಂತಾ ಮಿಂಚಿದ್ದಾರೆ. ನಟಿಯ ವಾರೆ ನೋಟಕ್ಕೆ ನ್ಯೂ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.‌ ಇದನ್ನೂ ಓದಿ:ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

ಸದಾ ಇನ್ಸ್ಟಾಗ್ರಾಂನಲ್ಲಿ ಆಕ್ಟೀವ್ ಆಗಿರೋ ಕನ್ನಡತಿ ನಭಾ 2.9 ಮಿಲಿಯನ್ ಹಿಂಬಾಲಕರನ್ನ ಹೊಂದಿದ್ದಾರೆ. ಆಗಾಗ ಡಿಫರೆಂಟ್ ಸ್ಟೈಲ್‌ ಫೋಟೋಶೂಟ್‌ನಲ್ಲಿ ಕಾಣಿಸಿಕೊಳ್ತಿರತ್ತಾರೆ. 2021ರಲ್ಲಿ ನಟ ನಿತಿನ್ ಜೊತೆ `ಮೇಸ್ಟ್ರೋ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ರು. ಸದ್ಯದಲ್ಲಿ ಹೊಸ ಕಥೆ, ಪ್ರಾಜೆಕ್ಟ್ ಮೂಲಕ ನಭಾ ಕಾಣಿಸಿಕೊಳ್ಳಲಿದ್ದಾರೆ. ಪಟಾಕ ಪೋರಿ ನಭಾ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

Leave a Reply

Your email address will not be published.

Back to top button