ದಾವಣರೆಗೆ: ಪೊಲೀಸ್ ಠಾಣೆ ಹಾಗೂ ಕೋರ್ಟ್ ಆವರಣದಲ್ಲಿರುವ ಗಂಧದ ಮರ ಕಳವಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ.
ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಎರಡು ಗಂಧದ ಮರಗಳು ಹಾಗೂ ಕೋರ್ಟ್ ಪಕ್ಕದಲ್ಲಿರುವ ಗಂಧದ ಮರ ಕಳವುವಾಗಿವೆ. ಎರಡು ವರ್ಷಗಳ ಹಿಂದೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಒಂದು ಗಂಧದ ಮರ ಕಳವುವಾಗಿತ್ತು. ಈಗ ಮತ್ತೆ ಅಲ್ಲಿ ಗಂಧದ ಮರ ಕಳ್ಳತನವಾಗಿರುವುದರಿಂದ ಹಲವು ಅನುಮಾನಕ್ಕೆ ಕಾರಣವಾಗಿವೆ.
ಸರ್ಕಾರಿ ಕಚೇರಿಗಳಾದ ಕೋರ್ಟ್ ಆವರಣ ಹಾಗೂ ಪೊಲೀಸ್ ಠಾಣೆಯಲ್ಲಿಯೇ ಗಂಧದ ಮರಗಳು ಕಳವುವಾಗುತ್ತಿವೆ. ಅಲ್ಲಿಯೇ ಮರಗಳಿಗೆ ರಕ್ಷಣೆ ಇಲ್ಲ. ಇನ್ನೂ ಬೇರೆ ಯಾವ ಕಡೆ ಮರಗಳಿಗೆ ರಕ್ಷಣೆ ಇರುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪೊಲೀಸ್ ಠಾಣೆಯ ಮುಂಭಾಗವೇ ಗಂಧದ ಮರ ಕಳವಿನಿಂದ ಪೊಲೀಸರು ತಲೆಕೆಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews