ಭಾವನಾ-ನವೀನ್ ಆರತಕ್ಷತೆಯಲ್ಲಿ ಸ್ಯಾಂಡಲ್‍ವುಡ್ ತಾರೆಯರ ದಂಡು!

Public TV
2 Min Read
COLLEGE 1

ಬೆಂಗಳೂರು: ಬಹುಭಾಷಾ ಚಿತ್ರ ತಾರೆ, ಮಲೆಯಾಳಂ ಬೆಡಗಿ ನಟಿ ಭಾವನಾ ಕನ್ನಡದ ಹುಡುಗ ನವೀನ್ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹದಿನೈದು ದಿನಗಳು ಕಳೆದಿವೆ.

ಕೇರಳದ ತ್ರಿಶೂರ್ ಜವರ್ ಲಾಲ್ ಕನ್ವೇಷನ್ ಹಾಲ್‍ನಲ್ಲಿ ಈ ಜೋಡಿ ಜನವರಿ 22 ರಂದು ಸಪ್ತಪದಿ ತುಳಿದಿತ್ತು. ಕೇರಳ ಸಂಪ್ರದಾಯದಂತೆ ಇವರ ಮದುವೆ ನಡೆದಿದ್ದು, ಹಲವು ಸಿನಿಮಾ ತಾರೆಯರು ಮತ್ತು ಆಪ್ತರು ಮದುವೆಗೆ ಹೋಗಿದ್ದರು. ಸರಳವಾಗಿ ಮದುವೆ ಮಾಡಿಕೊಂಡ ಈ ತಾರಾ ಜೋಡಿ ಕೇರಳದ ಚಿತ್ರರಂಗದ ಗಣ್ಯರಿಗೆ ಹಾಗೂ ಸ್ನೇಹಿತರಿಗಾಗಿ ಅದ್ಧೂರಿ ಆರತಕ್ಷತೆಯನ್ನ ಬೆಂಗಳೂರಿನಲ್ಲಿ ಆಯೋಜನೆ ಮಾಡಿದ್ದರು.

bhvana recption 2

ನವೀನ್ ಬೆಂಗಳೂರಿನ ನಿವಾಸಿಯಾಗಿರುವುದರಿಂದ ಇಲ್ಲಿನ ಸ್ನೇಹಿತರು ಹಾಗೂ ಸಿನಿಮಾರಂಗದ ಗಣ್ಯರಿಗಾಗಿ ಅದ್ಧೂರಿಯಾಗಿ ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆರತಕ್ಷತೆ ಆಯೋಜಿಸಿದ್ದರು. ಭಾವನಾ ಅಭಿನಯಿಸಿದ ಚಿತ್ರಗಳಲ್ಲಿ ಕೆಲಸ ಮಾಡಿದವರು, ನವೀನ್ ಕುಟುಂಬಸ್ಥರು ಮತ್ತು ಸ್ನೇಹಿತರಷ್ಟೇ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.

ಆರತಕ್ಷತೆಯಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್,  ಪ್ರಿಯಾಮಣಿ, ಪಾರೂಲ್ ಯಾದವ್, ಮಾನ್ವಿತಾ, ಮಾಳವಿಕಾ, ಅವಿನಾಶ್, ಹರೀಶ್ ಸೇರಿದಂತೆ ಸ್ಯಾಂಡಲ್‍ವುಡ್ ಸ್ಟಾರ್ ಗಳು ಬಂದು ನವ ವಧು-ವರರಿಗೆ ಶುಭಾ ಹಾರೈಸಿದ್ದಾರೆ.

bhvana recption 6

ಜಾಕಿ ಭಾವನಾ ಅಭಿನಯದ ಟಗರು ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಆರತಕ್ಷತೆಗೆ ಇಡೀ ಟಗರು ಸಿನಿಮಾತಂಡವನ್ನ ಆಹ್ವಾನ ಮಾಡಲಾಗಿತ್ತು. ಕಲಾವಿದರು ಸೇರಿದಂತೆ ಇಡೀ ಟಗರು ತಂಡದ ತಂತ್ರಜ್ಞರು ಭಾವನಾ ಮತ್ತು ನವೀನ್ ಅವರಿಗೆ ಶುಭ ಹಾರೈಸಿದರು. ಆರತಕ್ಷತೆಯಲ್ಲಿ ನಟಿ ಭಾವನಾ ಪೀಚ್ ಗ್ರೀನ್ ಗೌನ್ ಹಾಕಿಕೊಂಡಿದ್ದು, ನವೀನ್ ಬ್ಲೂ ಸೂಟ್ ನಲ್ಲಿ ಕಾಣಿಸಿಕೊಂಡರು.

ದಕ್ಷಿಣ ಚಿತ್ರರಂಗದ ಈ ವರ್ಷದ ಮೊದಲ ಸಿನಿಮಾ ಜೋಡಿಯ ಮದುವೆ ಇದಾಗಿತ್ತು. ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ `ವಿಷ್ಣುವರ್ಧನ್’ ಹಾಗೂ `ಬಚ್ಚನ್’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ. ಇದನ್ನು ಓದಿ: ಕನ್ನಡದ ಹುಡುಗನ ಜೊತೆ ಸಪ್ತಪದಿ ತುಳಿದ ಭಾವನಾ-ಫೋಟೋಗಳಲ್ಲಿ ನೋಡಿ

bhavana 4

bhvana recption 10

bhvana recption 1

bhvana recption 9

bhvana recption 4

bhvana recption 3

bhavana 3

80f7f2da f2c6 44ca 9316 2dc44c64dd97

bhavana 2

bhavana rec 4

Share This Article
Leave a Comment

Leave a Reply

Your email address will not be published. Required fields are marked *