ಬೆಂಗಳೂರು: ಚಂದನವನದ ಕ್ಯೂಟ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಸೋಶಿಯಲ್ ಮಿಡಿಯಾದಲ್ಲಿ ಒಬ್ಬರನೊಬ್ಬರು ಕಾಲೆಳೆದುಕೊಂಡಿದ್ದಾರೆ.
ರಾಧಿಕಾ ಇನ್ಸ್ಟಾಗ್ರಾಮ್ ನಲ್ಲಿ ಅವರು ಫಿಲ್ಮಿ ಸ್ಟೈಲ್ನಲ್ಲಿ ಕೊದಲನ್ನು ಹಾರಿಸುವ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಹೇರ್ ಕಮರ್ಷಿಯಲ್ ಅಲ್ಲ. ಕ್ಯಾಮೆರಾಮನ್ ಇದನ್ನು ಉಚಿತವಾಗಿ ಸೆರೆಹಿಡಿಯಲು ಮುಂದಾದಾಗ ನಾನು ಫಿಲ್ಮಿ ಸ್ಟೈಲ್ ನಲ್ಲಿ ಪೋಸ್ ಕೊಟ್ಟೆ ಎಂದು ಬರೆದು ಶೇರ್ ಮಾಡಿದರು.
View this post on Instagram
ಈ ಪೋಸ್ಟ್ ನೋಡಿದ ಯಶ್, ಹೌದು, 45 ಟೇಕ್ ಆದ ನಂತರ ನನಗೆ ಈ ವೀಡಿಯೋಗೆ ಚಾರ್ಜ್ ಮಾಡುವ ಇಚ್ಛೆ ಅಥವಾ ಶಕ್ತಿ ಇರಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇವರಿಬ್ಬರ ಈ ಮುದ್ದು ಜಗಳ ನೋಡಿದ ನೆಟ್ಟಿಗರು ಫುಲ್ ಖುಷ್ ಆಗಿದ್ದು, ನಿಮ್ಮಂದು ಕ್ಯೂಟ್ ಜೋಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇವರಿಬ್ಬರ ಪ್ರೀತಿಯನ್ನು ನೋಡಿ ಅಭಿಮಾನಿಗಳು ಇದೇ ರೀತಿ ನಾವು ಇರಬೇಕು ಎಂದು ಇಷ್ಟ ಪಡುತ್ತಾರೆ. ಇನ್ನೂ ಜೋಡಿ ಇತ್ತೀಚೆಗೆ 5ನೇ ವರ್ಷದ ಮದುವೆ ಮದುವೆ ವಾರ್ಷಿಕೋತ್ಸವದ ಆಚರಿಸಿಕೊಂಡಿದ್ದರು. ಇದನ್ನೂ ಓದಿ: ಸಾವರ್ಕರ್ರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅನ್ನೋದು ಬ್ರಿಟಿಷರಿಗೆ ಗೊತ್ತಿತ್ತು: ಬೊಮ್ಮಾಯಿ
View this post on Instagram
ರಾಧಿಕಾ ಇನ್ಸ್ಟಾಗ್ರಾಮ್ ನಲ್ಲಿ ಬ್ಯೂ ಟ್ಯಾಪ್ಲಿನ್ ಬರೆದ ಸಾಲುಗಳನ್ನು ಬರೆದು, ಯಶ್ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಸಾಲಿನಲ್ಲಿ, ಯಾರಾದರೂ ನಿಮ್ಮನ್ನು ಪ್ರೇರೇಪಿಸುವ, ಪ್ರೋತ್ಸಾಹಿಸುವ, ಯಾವುದೇ ಅಪೇಕ್ಷೆಗಳಿಲ್ಲದೆ ನಿಸ್ವಾರ್ಥವಾಗಿ ಅವರ ಸಮಯವನ್ನು ನಿಮಗಾಗಿ ತ್ಯಾಗ ಮಾಡುವವರು ನಿಮ್ಮ ಜೀವನದಲ್ಲಿ ಇದ್ದರೆ ನೀವು ಧೈರ್ಯಶಾಲಿ ಸಂತೋಷದ ವ್ಯಕ್ತಿಯಾಗಿರುತ್ತೀರಿ. ಅಂತಹ ಸಂಬಂಧ ಪವಿತ್ರವಾದದ್ದು, ಅಂತಹ ಪ್ರೀತಿಯನ್ನು ನೀವು ಹಿಡಿದುಕೊಳ್ಳಿ ಎಂದು ಬರೆದು ಯಶ್ ಗೆ ಮದುವೆ ವಾರ್ಷಿಕೋತ್ಸವದ ವಿಶ್ ಮಾಡಿದ್ದರು.
View this post on Instagram
ನಂತರ ಯಶ್ ಜೊತೆಗೆ ಆ್ಯನಿವರ್ಸರಿ ಸೆಲೆಬ್ರೆಷನ್ ನಲ್ಲಿ, ಛೆ.. ಯಶ್ ಜೊತೆಗೆ ನಾನು ಸೆಲ್ಫಿ ತೆಗೆದುಕೊಳ್ಳಲು ಎಷ್ಟು ಕಷ್ಟ ಪಟ್ಟಿದ್ದೇನೆ. ಈಗ ನಮಗೆ ಟಾಸ್ಕ್ಮಾಸ್ಟರ್ ಯಾರೆಂದು ತಿಳಿದಿದೆ ಎಂದು ಬರೆದು ಫೋಟೋವನ್ನು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: 5ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಾಧಿಕಾ-ಯಶ್